ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಹೊರವಲಯದ ಮಾರೇಹಳ್ಳಿಯ ಆದರ್ಶ ವಿದ್ಯಾಲಯದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಚಾಲನೆ ನೀಡಿದರು.ಕಾನೂನು ಸೇವಾ ಸಮಿತಿ ಹಾಗೂ ಭಾರತ್ ವಿಕಾಸ್ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶರು, ಈ ವರ್ಷ 10 ಸಾವಿರ ಗಿಡ ನೆಟ್ಟು ಪೋಷಿಸಲು ಪರಿಸರ ದಿನಾರಣೆ ದಿನದಿಂದಲೇ ಗಿಡ ನೆಡುವ ಕಾರ್ಯಕ್ರಮ ಆರಂಭಿಸಿದ್ದು ಹಲವು ಇಲಾಖೆಗಳು ಹಾಗೂ ಸಂಸ್ಥೆಗಳು ಸಹಕಾರ ನೀಡುತ್ತಿದ್ದಾರೆ ಎಂದು ಶ್ಲಾಘೀಸಿದರು.
ಭಾರತ್ ವಿಕಾಸ್ ಪರಿಷತ್ತ್ ಸಹಯೋಗದೊಂದಿಗೆ ಆದರ್ಶ ಶಾಲೆಯಲ್ಲಿ ಗಿಡ ನೆಟ್ಟು ಳಿಸಿ ಬೆಳಸುವ ಜವಬ್ದಾರಿಯನ್ನು ಮಕ್ಕಳು ಕರ್ತವ್ಯವೆಂದು ಭಾವಿಸಿ ಗಿಡಗಳನ್ನು ಪೋಷಿಸಬೇಕು ಎಂದು ಕರೆ ನೀಡಿದರು.ನಂತರ ನ್ಯಾಯಾಧೀಶರು ಶಾಲೆ ಕೊಠಡಿ, ಅಡುಗೆ ಮನೆ ಹಾಗೂ ಶೌಚಾಲಯವನ್ನು ಪರಿಶೀಲಿಸಿ ಅಶುಚಿತ್ವನ್ನು ಕಂಡು ಸ್ಥಳದಲ್ಲಿಯೇ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರನ್ನು ತರಾಟೆಗೆ ತೆಗೆದುಕೊಂಡರು.
ಈ ಕೆಟ್ಟ ಕೊಠಡಿಯೊಳಗೆ ಮಕ್ಕಳು ಹೇಗೇ ತಾನೇ ಕಲಿಯಲು ಸಾಧ್ಯ. ನಿಮ್ಮ ಮಕ್ಕಳು ಕಲಿಯುವ ಶಾಲೆಯು ಇದೇ ರೀತಿ ಇದೆಯೇ ಎಂದು ಪ್ರಶ್ನಿಸಿದರು. ಹೆಣ್ಣು ಮಕ್ಕಳು ಹೆಚ್ಚಿಗೆ ಇರುವ ಈ ಶಾಲೆಯಲ್ಲಿ ಶೌಚಾಲಯ ಪರಿಸ್ಥಿತಿ ಇಷ್ಟು ಕೆಟ್ಟದಾಗಿದೆ. ಮುಂದಿನ ವಾರದ ಒಳಗಾಗಿ ಶಾಲೆಯಲ್ಲಿ ಶುಚಿತ್ವ ಮರುಕಳಿಸದೆ ಇದ್ದರೆ ನಿಮ್ಮಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.ಎಸ್.ಡಿ.ಎಂ.ಸಿ ಅಧ್ಯಕ್ಷ ತಳಗವಾದಿ ಪ್ರಕಾಶ್ ಹಾಗೂ ಸದಸ್ಯರು ಶಾಲೆಯ ಪಕ್ಕದ ಪಿ.ಡಬ್ಲ್ಯು.ಡಿ ಇಲಾಖೆಗೆ ಸೇರಿದ ಶಿಥಿಲ ಕಟ್ಟಡ ಹಾಗೂ ನೀರಿನ ಟ್ಯಾಂಕ್ ನೆಲಸಮ ಮಾಡಿ ಮಕ್ಕಳಿಗೆ ಆಟದ ಮೈದಾನ ಮಾಡಲು ಅವಶಕಾಶ ನೀಡುವಂತೆ ಮನವಿ ಮಾಡಿದರು.
ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶರು ಕಾನೂನು ಸೇವಾ ಸಮಿತಿಗೆ ಮನವಿ ಪತ್ರ ನೀಡಿದ ಬಳಿಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು ಎಂದರು.ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜ ಶಂಕರಸ್ವಾಮಿ, ಹೆಚ್ಚುವರಿ ಸರ್ಕಾರಿ ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ, ನಿಂಗರಾಜುಗೌಡ, ಪ್ರಾಂಶುಪಾಲ ಶಿವರಾಜು, ಸಾಲು ಮರದ ನಾಗರಾಜು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))