ನೆರೆಪೀಡಿತ ಪ್ರದೇಶಕ್ಕೆ ನ್ಯಾಯಾಧೀಶರ ಭೇಟಿ

| Published : Aug 01 2024, 12:16 AM IST

ಸಾರಾಂಶ

ಬೇಲೂರು ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆ ನಾಶ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಅನ್ವಯ ಬೇಲೂರು ತಾಲೂಕು ದಂಡಾಧಿಕಾರಿಗಳಾದ ಮಮತಾರವರ ಸಹಕಾರದಿಂದ ಬೇಲೂರಿನ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಸ್.ಶಶಿಕಲಾರವರು ತಾಲೂಕು ದಂಡಾಧಿಕಾರಿಗಳು ಸಿದ್ಧಪಡಿಸಿರುವ ಮಳೆ ಹಾನಿಗೊಳಗಾಗಿರುವವರ ಪಟ್ಟಿಯನ್ನಾಧರಿಸಿ ಹಲವು ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಹಲವು ಕಡೆ, ಮಳೆಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆ ನಾಶ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಅನ್ವಯ ಬೇಲೂರು ತಾಲೂಕು ದಂಡಾಧಿಕಾರಿಗಳಾದ ಮಮತಾರವರ ಸಹಕಾರದಿಂದ ಬೇಲೂರಿನ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಸ್.ಶಶಿಕಲಾರವರು ತಾಲೂಕು ದಂಡಾಧಿಕಾರಿಗಳು ಸಿದ್ಧಪಡಿಸಿರುವ ಮಳೆ ಹಾನಿಗೊಳಗಾಗಿರುವವರ ಪಟ್ಟಿಯನ್ನಾಧರಿಸಿ ಹಲವು ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಹಾನಿಗೊಳಗಾಗಿರುವ ಜನರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಿ ಕೊಡುವಂತೆ ತಾಲೂಕು ದಂಡಾಧಿಕಾರಿಯವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬೇಲೂರು ತಾಲೂಕು ತಾಲೂಕು ಕಚೇರಿಯ 2ನೇ ದರ್ಜೆ ತಹಸೀಲ್ದಾರ್‌ ಅಶೋಕ್, ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ಪ್ರಕಾಶ್, ಗಿರಿಯಪ್ಪ ಉಪಸ್ಥಿತರಿದ್ದರು.