ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ಜತೆಗೆ ಒತ್ತಡದಿಂದ ಹೊರಬರಲು ನ್ಯಾಯವಾದಿಗಳಿಗೆ ಕ್ಯಾಂಟೀನ್ ಅಗತ್ಯವಾಗಿದ್ದು, ಈ ದಿಸೆಯಲ್ಲಿ ನೂತನ ಕ್ಯಾಂಟೀನ್ ನ್ಯಾಯವಾದಿಗಳ ಸಹಿತ ಕಕ್ಷಿದಾರರಿಗೆ ಸದುಪಯೋಗವಾಗಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಶನಿವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ವಕೀಲರ ಕ್ಯಾಂಟೀನ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೆ ನೀಡಲಾದ ಹಕ್ಕು ಜವಾಬ್ದಾರಿಯನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುವಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಕಾರ್ಯನಿರ್ವಹಿಸುತ್ತಿದ್ದು, ಈ ದಿಸೆಯಲ್ಲಿ ಶಾಸಕಾಂಗ, ಕಾರ್ಯಾಂಗ ಕರ್ತವ್ಯ ಮರೆತಾಗ ಎಚ್ಚರಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆ ಹೆಚ್ಚು ಶಕ್ತಿಶಾಲಿಯಾಗಿ ದೇಶದ ಘನತೆಯನ್ನು ಎತ್ತಿಹಿಡಿದಿದೆ ಎಂದು ಶ್ಲಾಘಿಸಿದರು.ಇನ್ನು, ವಕೀಲರ ಭವನ ನಿರ್ವಹಣೆಗೆ ವೈಯುಕ್ತಿಕವಾಗಿ ಮಾಸಿಕ 5 ಸಾವಿರ ರು. ನೀಡುವುದಾಗಿ ಘೋಷಿಸಿ ಭವಿಷ್ಯದಲ್ಲಿ ಭವನ ಸುತ್ತಮುತ್ತ ಸುಂದರವಾದ ವಾತಾ ವರಣ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವಕೀಲರ ಕ್ಯಾಂಟೀನ್ ಉದ್ಘಾಟಿಸಿದ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ನ್ಯಾಯವಾದಿಗಳು ಹಾಗೂ ಕಕ್ಷಿದಾರರ ಕ್ಯಾಂಟೀನ್ ಆರಂಭದ ಹಲವು ದಿನಗಳ ಅಪೇಕ್ಷೆ ಇದೀಗ ಸಫಲಗೊಂಡಿದೆ ಅವರು, ಎಂದು ತಿಳಿಸಿ ಖುದ್ದು ವಕೀಲನಾಗಿ ನ್ಯಾಯಾಲಯದಲ್ಲಿನ ಕೊರತೆ ಸಮಸ್ಯೆ ಪರಿಪರಿಸಲು ಹೆಚ್ಚಿನ ಗಮನ ನೀಡು ವುದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಸಿ.ಸಂತೋಷ ಕುಮಾರ್ ಮಾತನಾಡಿ, ಪೌರವಿಹಾರದ ಕಟ್ಟಡದಲ್ಲಿದ್ದ ನ್ಯಾಯಾಲಯವು 1999ರಲ್ಲಿ ಸುಸಜ್ಜಿತ ವಿಶಾಲ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದು, 2008ರಲ್ಲಿ ಪ್ರಥಮ ಅಂತಸ್ತು ಹಾಗೂ ವಿಶಾಲ ವಕೀಲರ ಭವನ ನಿರ್ಮಾಣಕ್ಕೆ ಯಡಿಯೂರಪ್ಪ ನವರ ಸಹಕಾರ ಬಹುಮುಖ್ಯ ಕಾರಣ ಎಂದರು.ಬಳಿಕ ಸಂಸದರನ್ನು, ಶಾಸಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಾಲತೇಶ್, ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕ ಲೋಕ್ಯಾ ನಾಯ್ಕ, ಬೀಷ್ಪತಿ, ರವಿ ಮುಕ್ತಿಯಾರ್, ಹಿರಿಯ ವಕೀಲರಾದ ಚಂದ್ರಪ್ಪ, ಪ್ರಭಾಕರ್, ಕೋಡ್ಯಪ್ಪ, ವಸಂತಮಾಧವ, ರುದ್ರಪ್ಪಯ್ಯ, ರಾಮಾನಾಯ್ಕ,ಕೆ.ಪಿ ಮಂಜುನಾಥ್, ಪರಮೇಶ್ವರಪ್ಪ, ಜ್ಯೋತಿ, ದಾಕ್ಷಾಯಣಿ ಮುಖಂಡ ಗುರುಮೂರ್ತಿ,ಮಹೇಶ್ ಹುಲ್ಮಾರ್, ಚನ್ನವೀರಪ್ಪ, ಸುಧೀರ್, ಕವಲಿ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.