ಸಾರಾಂಶ
ಬೆಳಗಾವಿಯ ಅಣ್ಣಪೂರ್ಣೆಶ್ವರಿ ಹೂಮ್ಯಾನಿಟಿ ಫೌಂಡೇಶನ್‌ವರು ಕೊಡಮಾಡುವ ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯು ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಅನ್ನ-ಶಿಕ್ಷಣ-ಆರೋಗ್ಯ ಸೇವೆಯ ಧೇಯದೊಂದಿಗೆ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ಗೆ ಲಭಿಸಿದೆ.
ಕನ್ನಡಪ್ರಭ ವಾರ್ತೆ ಕಾಗವಾಡ
ಬೆಳಗಾವಿಯ ಅಣ್ಣಪೂರ್ಣೆಶ್ವರಿ ಹೂಮ್ಯಾನಿಟಿ ಫೌಂಡೇಶನ್‌ವರು ಕೊಡಮಾಡುವ ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯು ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಅನ್ನ-ಶಿಕ್ಷಣ-ಆರೋಗ್ಯ ಸೇವೆಯ ಧೇಯದೊಂದಿಗೆ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ಗೆ ಲಭಿಸಿದೆ.ಬೆಳಗಾವಿಯ ಸಾಯಿ ಸಂಗಮ ಇಂಟರನ್ಯಾಶನಲ್ ಹೋಟೆಲ್‌ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಅನೇಕರನ್ನು ಗುರುತಿಸಿ, ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.ಸಿದ್ಧಿ ಹೂಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷ ಬಾಹುಬಲಿ ಉಪಾಧ್ಯೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಮಾಧುರಿ ಜಾಧವ ಫೌಂಡೇಶನ್ ಅಧ್ಯಕ್ಷೆ ಮಾಧುರಿ ಜಾಧವಗೆ ವೀರರಾಣಿ ಕಿತ್ತೂರ ಚನ್ನಮ್ಮಾ ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.
ಮುರಗೋಡದ ಮಹಾಂತ ದುರದುಂಡೇಶ್ವರದ ಮಠದ ಮನಿಪ್ರ ನೀಲಕಂಠ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಹೊರಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕರ್ನಾಟಕ ದಲಿತ ಪ್ಯಾಂಥರ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ರಮೇಶ ಹರಿಜನ, ಮಾಧುರಿ ಜಾಧವ ಫೌಂಡೇಶನ್ ಅಧ್ಯಕ್ಷೆ ಮಾಧುರಿ ಜಾಧವ, ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷ ಬಾಹುಬಲಿ ಉಪಾಧ್ಯೆ, ಅಣ್ಣಪೂರ್ಣೆಶ್ವರಿ ಹೂಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷ ಮಹಾಂತೇಶ ಕಡಲಗಿ ಮತ್ತು ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಅನ್ನ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಸಿದ್ದಿ ಹೂಮ್ಯಾನಿಟಿ ಫೌಂಡೇಶನ್‌ನ ಸಾಮಾಜಿಕ ಕಾರ್ಯವನ್ನು ಮೆಚ್ಚಿ ನಮಗೆ ಪ್ರಶಸ್ತಿ ನೀಡಿರುವುದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಫೌಂಡೇಶನ್ ಎಲ್ಲ ಸದಸ್ಯರ ಸಹಕಾರದಿಂದಾಗಿ ಈ ಪ್ರಶಸ್ತಿ ಬಂದಿದ್ದು, ಇದನ್ನು ಅವರೆಲ್ಲರ ಸೇವೆಗೆ ಸಮರ್ಪಿಸುತ್ತೇನೆ.-ಬಾಹುಬಲಿ ಉಪಾಧ್ಯೆ,
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪುರಸ್ಕೃತರು.