ಕಿರಿಯರು ಹಿರಿಯರ ಅನುಭವ, ಮಾರ್ಗದರ್ಶನ ಪಡೆಯಬೇಕು: ಡಾ.ಟಿ.ಜೆ.ತಾರಾ

| Published : Oct 02 2024, 01:03 AM IST

ಸಾರಾಂಶ

ಆಲದ ಮರದಂತೆ ಇರುವ ಹಿರಿಯರು ಒಂದು ರೀತಿಯಲ್ಲಿ ಎಲ್ಲರಿಗೂ ನೆರಳಾಗುತ್ತಾರೆ. ಹಿರಿಯರ ಮಾತು ಕೇಳಿದವರು ಜೀವನದಲ್ಲಿ ಉತ್ತಮ ಸಾಧನೆ ಮಾಡಬಲ್ಲರು. ಅವರ ಮಾರ್ಗದರ್ಶನ ಇಂದಿನ ಯುವ ಸಮೂಹಕ್ಕೆ ಆಗತ್ಯವಾಗಿದೆ. ತನ್ನ ಕುಟುಂಬ ಏಳಿಗೆಗೆ ಹಗಲಿರುಳು ದುಡಿದು ಬದುಕಿನ ಸಂದ್ಯ ಕಾಲದಲ್ಲಿರುವ ಹಿರಿಯ ಜೀವಿಗಳಿಗೆ ಪ್ರೀತಿ, ಗೌರವಗಳಿಂದ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿರಿಯರ ಅನುಭವ ಹಾಗೂ ಅವರ ಮಾರ್ಗದರ್ಶನವನ್ನು ಇಂದಿನ ಯುವ ಪೀಳಿಗೆ ಸದ್ಬಳಕೆ ಮಾಡಿಕೊಂಡು ಸಲಹೆ ಸೂಚನೆಯಂತೆ ಉತ್ತಮ ಜೀವನ ನಡೆಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಟಿ.ಜೆ ತಾರಾ ಹೇಳಿದರು.

ತಾಲೂಕಿನ ಟಿ.ಎಂ ಹೊಸೂರು ಗ್ರಾಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಟಿ.ಎಂ ಹೊಸೂರು ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯರಿಗೆ ಗುಲಾಬಿ ಹೂ ನೀಡಿ ಗೌರವಿಸಿ ಮಾತನಾಡಿದರು.

ಆಲದ ಮರದಂತೆ ಇರುವ ಹಿರಿಯರು ಒಂದು ರೀತಿಯಲ್ಲಿ ಎಲ್ಲರಿಗೂ ನೆರಳಾಗುತ್ತಾರೆ. ಹಿರಿಯರ ಮಾತು ಕೇಳಿದವರು ಜೀವನದಲ್ಲಿ ಉತ್ತಮ ಸಾಧನೆ ಮಾಡಬಲ್ಲರು. ಅವರ ಮಾರ್ಗದರ್ಶನ ಇಂದಿನ ಯುವ ಸಮೂಹಕ್ಕೆ ಆಗತ್ಯವಾಗಿದೆ. ತನ್ನ ಕುಟುಂಬ ಏಳಿಗೆಗೆ ಹಗಲಿರುಳು ದುಡಿದು ಬದುಕಿನ ಸಂದ್ಯ ಕಾಲದಲ್ಲಿರುವ ಹಿರಿಯ ಜೀವಿಗಳಿಗೆ ಪ್ರೀತಿ, ಗೌರವಗಳಿಂದ ನೋಡಿಕೊಳ್ಳಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಮಾತನಾಡಿ, ಹಿರಿಯರು ಆರೋಗ್ಯವಾಗಿಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಮನೆಯಲ್ಲಿಯೇ ಪ್ರೀತಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಈ ವೇಳೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ, ಸಮುದಾಯ ಆರೋಗ್ಯ ಅಧಿಕಾರಿ ಪೂಜಾ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಯಮ್ಮ, ಆಶಾ ಕಾರ್ಯಕರ್ತೆ ವಿದ್ಯಾಮಣಿ, ಶೋಭ ಸೇರಿದಂತೆ ಇತರರು ಇದ್ದರು.