ಗುರುವಿಗೆ ವಿಶೇಷ ಸ್ಥಾನ ಭಾರತದಲ್ಲಿದೆ

| Published : Jun 24 2024, 01:39 AM IST

ಸಾರಾಂಶ

ಭಾರತ ವಿಶಿಷ್ಟ ಪರಂಪರೆ ಉಳ್ಳ ದೇಶವಾಗಿದೆ. ಗುರುಗಳಿಗೆ ವಿಶೇಷ ಸ್ಥಾನ ನಮ್ಮಲ್ಲಿದೆ ಎಂದು ಗುಲ್ಬರ್ಗ ವಿವಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಭಾರತ ವಿಶಿಷ್ಟ ಪರಂಪರೆ ಉಳ್ಳ ದೇಶವಾಗಿದೆ. ಗುರುಗಳಿಗೆ ವಿಶೇಷ ಸ್ಥಾನ ನಮ್ಮಲ್ಲಿದೆ ಎಂದು ಗುಲ್ಬರ್ಗ ವಿವಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರಮಠ ಹೇಳಿದರು.

ಸ್ಥಳೀಯ ಕನ್ನಡ ಶಾಲೆ ಹಾಗೂ ವಿಬಿಸಿ ಹೈಸ್ಕೂಲ್ ಹಳೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ ಹಾಗೂ ಸುವರ್ಣ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ವೇದ ವಿಜ್ಞಾನ ಹಾಗೂ ಸಂಶೋಧನೆಗಳು ಭಾರತದ ಇತಿಹಾಸದಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿದೆ. ಜಗತ್ತಿನ ಎಲ್ಲಾ ಅದ್ಭುತ್‌ಗಳ ಶೋಧನೆ ಮಾಡುವ ಮೂಲಕ ಭಾರತದ ಶಿಕ್ಷಕರ ಪರಂಪರೆ ಜಗತ್ತಿಗೆ ಗುರುವಿನ ಸ್ಥಾನದಲ್ಲಿ ಇದೆ ಎಂದು ಹೇಳಿದರು.

ಚೈತನ್ಯ ಶೀಲಾ ಗೆಳೆಯರ ಸಂಘದ ಸದಸ್ಯರು ಸೇರಿ ಬಾಲ್ಯದ ಸಹಪಾಠಿಗಳ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಂತಪ್ಪ ನಾಮದಗಿ ಅಧ್ಯಕ್ಷತೆ ವಹಿಸಿದ್ದರು. ಸಾತಿಹಾಳದ ಡಾ.ಗುರುಮೂರ್ತಿ ದೇವರು ಸಾನ್ನಿಧ್ಯ ವಹಿಸಿದ್ದರು.ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುಮಾರು 20 ಶಿಕ್ಷಕರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಶಿಕ್ಷಕರಾದ ಆನಂದ ಕಂಠಿ ಹಾಗೂ ಲಕ್ಕಪ್ಪ ಗುರವ ನಿರೂಪಿಸಿದರು. ಸತೀಶ ಗೋಪಾಲ್ ವಿಷ್ಣು ಮುರಾಳ, ಪ್ರಭಾಕರ ಬೋವಿ, ಮಂಜು ಕೊಡಗಲಿ, ರಾಜು ಹಾವರಿಗಿ, ರಾಘವೇಂದ್ರ ಹೋಳ್ಳ ರೇಣುಕಾ ಜತ್ತಿ, ಬಸಮ್ಮ ಮಂಕಣಿ, ಸುಮನ ಕೆಂಭಾವಿ, ವಿಜಯಲಕ್ಷ್ಮಿ ಬಿರಾದಾರ ಭಾಗವಹಿಸಿದ್ದರು.ಕುಮಾರಸ್ವಾಮಿ ಸ್ವಾಗತಿಸಿದರು. ನ್ಯಾಯವಾದಿ ಎನ್ ಜಿ ಕುಲಕರ್ಣಿ ವಂದಿಸಿದರು. ರವೀಂದ್ರ ನಂದಪ್ಪನವರ ಪರಿಚಯಿಸಿದರು. ಅರವಿಂದ ಜಮಖಂಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.