ಸೇವಾ ಕಾರ್ಯಗಳೊಂದಿಗೆ ಕೃಷ್ಣಕುಮಾರ್ ಸಾಗರ್ ಹುಟ್ಟುಹಬ್ಬ

| Published : Dec 07 2024, 12:31 AM IST

ಸಾರಾಂಶ

ಮನೆಯ ಬಳಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ 500 ಮಹಿಳೆಯರಿಗೆ ಕುಕ್ಕರ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುಕಾಂಗ್ರೆಸ್ ಮುಖಂಡ ಹಾಗೂ ಸುಮಿತ್ರ ಸ್ಟೀಲ್ ಮಾಲೀಕ, ಉದ್ಯಮಿ ಕೃಷ್ಣಕುಮಾರ್ ಸಾಗರ್ ಅವರ 50ನೇ ಹುಟ್ಟುಹಬ್ಬವನ್ನು ವಿವಿಧ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಭಿಮಾನಿಗಳು ಆಚರಿಸಿದರು. ಕೃಷ್ಣಕುಮಾರ್ ಸಾಗರ್ ಅವರು ರಾಮಕೃಷ್ಣ ನಗರದ ಪಾರ್ಕ್ ನಲ್ಲಿ ಸಸಿಗಳನ್ನು ನೆಟ್ಟು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಉತ್ತನಹಳ್ಳಿಯಲ್ಲಿರುವ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನಕ್ಕೆ ಪತ್ನಿ ಪದ್ಮಶ್ರೀ, ತಾಯಿ ಕೆಂಪಮ್ಮ, ತಂದೆ ಚೌಡೇಗೌಡ, ಮಕ್ಕಳಾದ ಸುಕೃತ್ ಸಾಗರ್, ಸುಕೃಪ್ ಸಾಗರ್ ಅವರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹೊಸಹುಂಡಿ ಪೆಟ್ರೋಲ್ ಬಂಕ್ ಬಳಿ ಅಭಿಮಾನಿಗಳು ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಅಭಿನಂದಿಸಿದರು. ಅರವಿಂದನಗರದಲ್ಲಿರುವ ಮಾನಸ ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಬೆಳಗಿನ ಉಪಾಹಾರ ವಿತರಿಸಲಾಯಿತು. ಮನೆಯ ಬಳಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ 500 ಮಹಿಳೆಯರಿಗೆ ಕುಕ್ಕರ್ ವಿತರಿಸಲಾಯಿತು. ನಗರಪಾಲಿಕೆಯ ಮಾಜಿ ಸದಸ್ಯ ಕೆ.ವಿ. ಶ್ರೀಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ಮುಖಂಡರಾದ ನಾಡನಹಳ್ಳಿ ರವಿ, ಮಣಿಯಯ್ಯ. ಹರೀಶ್ ಮೊಗಣ್ಣ, ಹಂಚ್ಯ ಸಣ್ಣಸ್ವಾಮಿ, ಗಡ್ಡಬಸಪ್ಪ, ಧನಗಳ್ಳಿ ಬಸವರಾಜು, ಅಶ್ವಿನಿ ರೇವಣ್ಣ, ಶಂಕರ, ರಾಜೇಶ್, ಹಾಗೂ ನೂರಾರು ಮಹಿಳೆಯರು ಇದ್ದರು. ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.