ಶಕ್ತಿ ಪೂರ್ವ ಪ್ರಾಥಮಿಕ ಯುಕೆಜಿ ವಿದ್ಯಾರ್ಥಿಗಳಿಗೆ ಜ್ಯೋತಿ ಪ್ರದಾನ್‌, ಪದವಿ ಪ್ರದಾನ ಸಮಾರಂಭ

| Published : Mar 19 2025, 12:30 AM IST

ಶಕ್ತಿ ಪೂರ್ವ ಪ್ರಾಥಮಿಕ ಯುಕೆಜಿ ವಿದ್ಯಾರ್ಥಿಗಳಿಗೆ ಜ್ಯೋತಿ ಪ್ರದಾನ್‌, ಪದವಿ ಪ್ರದಾನ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳ ಜ್ಯೋತಿ ಪ್ರದಾನ್- ಪದವಿ ಪ್ರದಾನ ಸಮಾರಂಭ ನಡೆಯಿತು. ಶಾಲೆಯ ಪುಟ್ಟ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ಸೇರ್ಪಡೆಯನ್ನು ಈ ಮೂಲಕ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳ ಜ್ಯೋತಿ ಪ್ರದಾನ್- ಪದವಿ ಪ್ರದಾನ ಸಮಾರಂಭ ನಡೆಯಿತು. ಶಾಲೆಯ ಪುಟ್ಟ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ಸೇರ್ಪಡೆಯನ್ನು ಈ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ನಂತರ ದೀಪ ಜ್ಯೋತಿಯನ್ನು ಪ್ರತಿ ಮಗುವಿಗೂ ನೀಡಲಾಯಿತು. ಇದು ಭಾರತೀಯ ಸಂಪ್ರದಾಯದಂತೆ ಜ್ಞಾನ ಮತ್ತು ವಿದ್ಯೆಯ ಪ್ರತೀಕ. ನಂತರ ಮಕ್ಕಳು ಹೇ ಶಾರದೆ ಈ ಭಕ್ತಿಗೀತೆಯನ್ನು ಹಾಡಿದರು. ದೇವಿ ಸರಸ್ವತಿಯ ಆಶೀರ್ವಾದದೊಂದಿಗಿನ ಈ ಪವಿತ್ರ ಕ್ಷಣ ಎಲ್ಲರ ಮನಸೂರೆಗೊಂಡಿತು.

ನಂತರ ಪುಟಾಣಿಗಳು ವೇದಿಕೆಗೆ ಬಂದು ಅತಿಥಿಗಳಿಂದ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಇದೇ ವೇಳೆ ಶ್ಲೋಕ ರಾಮ್ ಭಂಡಾರಿ ಅವರು ಅಂತರ್ ಜಿಲ್ಲಾ ಈಜು ಸ್ಪರ್ಧೆಯಲ್ಲಿ ಸುವರ್ಣ ಮತ್ತು ರಜತ ಪದಕಗಳನ್ನು ಗೆದ್ದು, ಶಾಲೆಗೆ ಹೆಮ್ಮೆ ತಂದಿರುವುದರವುದನ್ನು ಗುರುತಿಸಿ ಅವರಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಎಲ್‌ಕೆಜಿ ವಿದ್ಯಾರ್ಥಿಗಳ ಕುಣಿತ ಪ್ರದರ್ಶನ ಏರ್ಪಟ್ಟಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೆಟ್ರಿಷಿಯಾ ಪಿಂಟೋ ಮಾತನಾಡಿ, ನಾವು ಮಕ್ಕಳಿಗೆ ಕೊಡುವ ವಿದ್ಯೆಯಿಂದ ಅವರು ಅನೇಕ ವಿಷಯವನ್ನು ಕಲಿತಿರುವುದನ್ನು ನಾವು ನೋಡಿದ್ದೇವೆ. ಪುಟ್ಟ ಮಕ್ಕಳು ವೇದಿಕೆಯಲ್ಲಿ ನಿಂತು ಅವರ ಅಭಿಪ್ರಾಯವನ್ನು ತಿಳಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇವರನ್ನು ತಯಾರು ಮಾಡಿರುವ ಶಿಕ್ಷಕರು ನಿಜವಾಗಿಯೂ ಅಭಿನಂದನೀಯರು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಯಕ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳ ಬುದ್ಧಿವಂತಿಕೆಯನ್ನು ನೋಡಿದಾಗ ಇವರು ಮುಂದಿನ ದಿನಗಳಲ್ಲಿ ದೇಶದ ಸಂಪತ್ತಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ಸಣ್ಣ ಪ್ರಾಯದಲ್ಲಿ ಇಷ್ಟು ಚೆನ್ನಾಗಿ ಅವರು ವೇದಿಕೆಯಲ್ಲಿ ಮಾತನಾಡುವುದು ಹಾಗೂ ಸಂಸ್ಕಾರಯುತವಾಗಿರುವುದು ಒಳ್ಳೆಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿ ಶುಭ ಹಾರೈಸಿದರು.ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್, ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಸುಷ್ಮಾ ಸತೀಶ್ ಇದ್ದರು.