ಕಲಘಟಗಿಗೆ ಕರ್ನಾಟಕ ಸಂಭ್ರಮದ ಜ್ಯೋತಿ ರಥಯಾತ್ರೆ ಮೆರವಣಿಗೆ

| Published : Jun 18 2024, 12:46 AM IST

ಸಾರಾಂಶ

ಅಳ್ಳಾವರ ಮೂಲಕ ಕೂಡಲಗಿ ಗ್ರಾಮಕ್ಕೆ ಬರುತ್ತಿದಂತೆ ಸಂಗಮೇಶ್ವರ ಗ್ರಾಮ ಪಂಚಾಯಿತಿಯಿಂದ ಸ್ವಾಗತಿಸಿದ ನಂತರ ಪಟ್ಟಣಕ್ಕೆ ಆಗಮಿಸಿತು. ಮೆರವಣಿಗೆ ಉದ್ದಕ್ಕೂ ಜಗ್ಗಲಿಗಿ ಮೇಳ, ಭಜನೆ, ಮಹಿಳೆಯರಿಂದ ಜಾಂಜು ಮಜಲು ಜ್ಯೋತಿ ರಥಯಾತ್ರೆಗೆ ಕಳೆ ತಂದವು.

ಕಲಘಟಗಿ:

ಕರ್ನಾಟಕ ಸಂಭ್ರಮ 50ನೇ ವರ್ಷದ ಅಂಗವಾಗಿ ಜ್ಯೋತಿ ರಥಯಾತ್ರೆ ಸೋಮವಾರ ಕಲಘಟಗಿ ಪಟ್ಟಣಕ್ಕೆ ಆಗಮಿಸುತ್ತಿದಂತೆ ಪಟ್ಟಣದ ಯುವ ಶಕ್ತಿ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯಿಂದ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.

ಮೊದಲಿಗೆ ಅಳ್ಳಾವರ ಮೂಲಕ ಕೂಡಲಗಿ ಗ್ರಾಮಕ್ಕೆ ಬರುತ್ತಿದಂತೆ ಸಂಗಮೇಶ್ವರ ಗ್ರಾಮ ಪಂಚಾಯಿತಿಯಿಂದ ಸ್ವಾಗತಿಸಿದ ನಂತರ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಆಂಜನೇಯ ವೃತ್ತ, ತಹಸೀಲ್ದಾರ್ ಕಚೇರಿ, ಕೋರ್ಟ್ ಆವರಣ, ಪೊಲೀಸ್ ಠಾಣೆ ಮೂಲಕ ಬಸ್ ನಿಲ್ದಾಣ, ಬಮ್ಮಿಗಟ್ಟಿ ಕ್ರಾಸ್ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆ ಉದ್ದಕ್ಕೂ ಜಗ್ಗಲಿಗಿ ಮೇಳ, ಭಜನೆ, ಮಹಿಳೆಯರಿಂದ ಜಾಂಜು ಮಜಲು ಜ್ಯೋತಿ ರಥಯಾತ್ರೆಗೆ ಕಳೆ ತಂದವು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್‌ ಯಲ್ಲಪ್ಪ ಗೋಣೆನ್ನವರ, ತಾಪಂ ಇಒ ಪರಶುರಾಮ ಸಾವಂತ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿ.ಜಿ. ಅಂಗಡಿ, ಉಪ ತಹಸೀಲ್ದಾರ್‌ ಬಸವರಾಜ ಹೊಂಕನ್ನವರ, ಶರಣಪ್ಪ ಉಣಕಲ್ಲ, ಸಂಗಮೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ಎ.ಎಚ್. ಮನಿಯಾರ, ವೃಷಭಬೇಂದ್ರೆ ಪಟ್ಟಣಶೆಟ್ಟಿ, ಬಸವರಾಜ ಕಡ್ಲಾಸ್ಕರ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಐ.ವಿ. ಜವಳಿ, ಗೌರವ ಕಾರ್ಯದರ್ಶಿ ಪರಮಾನಂದ ಒಡೆಯರ್, ಗೌರವ ಕೋಶಾಧ್ಯಕ್ಷ ರಮೇಶ ಸೋಲಾರಗೋಪ್ಪ, ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಮಕ್ಕಳ ಸಾಹಿತಿ ವೈ.ಜಿ. ಭಗವತಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರಗೌಡ ಭಾವಿಕಟ್ಟಿ, ಸಂಗ್ರಾಮ ಸೇನೆ ಅಧ್ಯಕ್ಷ ಸಾತಪ್ಪ ಕುಂಕೂರ ಇದ್ದರು.