ಸಾರಾಂಶ
ಉತ್ತರ ಕರ್ನಾಟಕದ ಗುಲಾಲ ಜಾತ್ರೆ ಎಂದೇ ಪ್ರಸಿದ್ಧ ಪಡೆದ ತಾಲೂಕಿನ ಆಸಂಗಿ ಗ್ರಾಮದ ಜ್ಯೋತಿಬಾ ದೇವರ ಜಾತ್ರೆ ಸೋಮವಾರ ಸಂಜೆ ಸಂಭ್ರಮದಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಉತ್ತರ ಕರ್ನಾಟಕದ ಗುಲಾಲ ಜಾತ್ರೆ ಎಂದೇ ಪ್ರಸಿದ್ಧ ಪಡೆದ ತಾಲೂಕಿನ ಆಸಂಗಿ ಗ್ರಾಮದ ಜ್ಯೋತಿಬಾ ದೇವರ ಜಾತ್ರೆ ಸೋಮವಾರ ಸಂಜೆ ಸಂಭ್ರಮದಿಂದ ನಡೆಯಿತು.
ಜಾತ್ರೆಯ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಮಧ್ಯಾಹ್ನ ಸಾವಿರಾರು ಜನರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜ್ಯೋತಿಬಾ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ನೂರಾರು ಮಹಿಳೆಯರು ಆರತಿ, ಕುಂಭ ಹೊತ್ತು ಹಾಗೂ ಪುರುಷರು ದಿವಟಿಗೆಗಳನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದರು.ನಂದಿಕೋಲು ನೃತ್ಯ ಜನರ ಗಮನ ಸೆಳೆಯಿತು. ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಪಲ್ಲಕ್ಕಿಗೆ ಗುಲಾಲನ್ನು ಎರಚಿದರು. ಯುವಕರು ಗುಲಾಲು ಎರಚಿ ಸಂಭ್ರಮಿಸಿದರು.
ಏಳೆಂಟು ಕ್ವಿಂಟಾಲ್ ಗುಲಾಲ: ಜಾತ್ರೆಯ ಸಂದರ್ಭದಲ್ಲಿ ಏಳೆಂಟು ಕ್ವಿಂಟಾಲ್ ಗುಲಾಲು ಎರಚುತ್ತಾರೆ. ರಬಕವಿ, ಬನಹಟ್ಟಿ ಸೇರಿದಂತೆ ಮಹಾರಾಷ್ಟ್ರದ ಕೊಲ್ಲಪುರದಿಂದ ಜನರು ಗುಲಾಲು ತರುತ್ತಾರೆ. ಒಬ್ಬರಿಗೊಬ್ಬರು ಗುಲಾಲು ಎರಚುವುದೇ ಈ ಜಾತ್ರೆಯ ವಿಶೇಷವಾಗಿದೆ.ಹರ್ಷವರ್ಧನ ಪಟವರ್ಧನ, ದೊಂಡಿಬಾ ಗಾಯಕವಾಡ, ದುಂಡಪ್ಪ ಸಾಲ್ಗುಡೆ, ಪಾಂಡುರಂಗ ಸಾಲ್ಗುಡೆ, ಬಸವರಾಜ ಗಾಯಕವಾಡ, ಜ್ಯೋತಿಬಾ ಸಾಲ್ಗುಡೆ, ನಾಗಪ್ಪ ಜಾಧವ, ರಾಘವೇಂದ್ರ ಕೋಲಾರ, ಕೇದಾರಿ ಗಾಯಕವಾಡ, ದಶರಥ ಹೊಡಗೆ, ರಾಜು ಪಾಟೀಲ, ಪ್ರಕಾಶ ಶಿರಗೂರ, ಕುಮಾರ ಸಾಲ್ಗುಡೆ, ಬಾಳು ಕದಮ ಸೇರಿದಂತೆ ಅನೇಕರು ಇದ್ದರು.