ಸಾರಾಂಶ
ತೇರದಾಳ(ರ-ಬ):ಶಿಕ್ಷಣ ಕ್ಷೇತ್ರದಲ್ಲಿ ಬೆಳಕು ಚೆಲ್ಲುವ ಮೂಲಕ ಜ್ಯೋತಿಬಾ ಫುಲೆ ಅವರು ರಾಷ್ಟ್ರವನ್ನು ಬೆಳಗಿದ್ದಾರೆ ಎಂದು ಮುಖಂಡ ಬಸವರಾಜ ಬಾಳಿಕಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ):ಶಿಕ್ಷಣ ಕ್ಷೇತ್ರದಲ್ಲಿ ಬೆಳಕು ಚೆಲ್ಲುವ ಮೂಲಕ ಜ್ಯೋತಿಬಾ ಫುಲೆ ಅವರು ರಾಷ್ಟ್ರವನ್ನು ಬೆಳಗಿದ್ದಾರೆ ಎಂದು ಮುಖಂಡ ಬಸವರಾಜ ಬಾಳಿಕಾಯಿ ಹೇಳಿದರು.
ಸಮಾಜ ಸುಧಾರಕಿ ಜ್ಯೋತಿಬಾ ಫುಲೆ ಅವರ ಜನ್ಮ ದಿನೋತ್ಸವದ ಹಿನ್ನೆಲೆ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಜ್ಯೋತಿಭಾ ಫುಲೆ ಸ್ಮಾರಕ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ್ದ ಅವರು, ಎಂಥದೆ ಕಷ್ಟಗಳು ಬಂದರೂ ಸಹ ವಿಚಲಿತರಾಗದೆ ಸಮಾಜ ಸುಧಾರಣೆಗೆ ಮುಂದಾದ ಫುಲೆ ದಂಪತಿಗಳ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ. ಸಮಾಜದವರು ಶಿಕ್ಷಣ ಹಾಗೂ ಉತ್ತಮ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಫುಲೆಯವರ ಆದರ್ಶ ಪಾಲಿಸೋಣ ಎಂದರು.ಪಟ್ಟಣದ ಮಾಳಿ ಸಮಾಜದ ಹಿರಿಯ ತುಳಜಪ್ಪ ಅಥಣಿ, ನಿಂಗಪ್ಪ ಮಾಲಗಾಂವಿ, ಪರಪ್ಪ ಯಡವಣ್ಣವರ, ಅಲ್ಲಪ್ಪ ಕೊಕಟನೂರ, ಬಸವರಾಜ ನಿರ್ವಾಣಿ, ದಾನಪ್ಪ ದೇಸ್ತೋಟ, ರಾಜು ಹೊಸಮನಿ, ಬಸವರಾಜ ಬಾಳಿಕಾಯಿ, ಸುರೇಶ ದೇಸ್ತೋಟ, ಕುಮಾರ ಅಥಣಿ, ಪ್ರಭು ಮಾಳಿ, ಸಂಜು ಹೊಸಮನಿ, ಎಂ.ಬಿ. ಮಾಳೇದ, ಕುಮಾರ ಕೌಜಲಗಿ, ಪ್ರದೀಪ ನಿಡೋಣಿ, ಅಡಿವೆಪ್ಪ ಹೊಸಮನಿ, ಮಲ್ಲಪ್ಪ ಹೊಸಮನಿ ಸೇರಿದಂತೆ ಯುವ ಸಂಘಟಕರು ಇದ್ದರು.