ಸಾರಾಂಶ
ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಕಲ್ಲಹಳ್ಳಿ ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎ.ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ಸೊಣ್ಣಪ್ಪ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೆ.ಎ.ರಮೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ವನಿತಾ ಅವರು ರಮೇಶ್‌ರನ್ನು ಅಧ್ಯಕ್ಷರನ್ನಾಗಿ ಘೋಷಿಸಿದ್ದಾರೆ. ನೂತನ ಅಧ್ಯಕ್ಷ ಕೆ.ಎ.ರಮೇಶ್ ಮಾತನಾಡಿ, ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ರ ಮಾರ್ಗದರ್ಶನದಲ್ಲಿ ಸಂಘದ ನಿರ್ದೇಶಕರ ಹಾಗೂ ಮುಖಂಡರ ಸಹಕಾರದೊಂದಿಗೆ ಸಂಘವನ್ನು ಮಾದರಿಯನ್ನಾಗಿ ಮಾಡುತ್ತೇನೆಂದರು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗಿರೆಡ್ಡಿ, ಸಂಘದ ಉಪಾಧ್ಯಕ್ಷೆ ಲಲಿತಮ್ಮ, ನಿರ್ದೇಶಕರಾದ ಕೆ.ಎಂ. ವೆಂಕಟಸ್ವಾಮಿ, ಎನ್.ಆರ್. ಪಾಟಲಪ್ಪ, ಆರ್.ಮಂಜುನಾಥ್, ಮಂಜುಳಮ್ಮ, ಎಂ.ಆರ್.ಕೃಷ್ಣಾರೆಡ್ಡಿ, ವಿ.ಕೆಂಪರೆಡ್ಡಿ, ನರಸಿಂಹಪ್ಪ, ಆಂಜಪ್ಪ, ಸಂಘದ ಸಿಇಒ ರಾಜ್‌ಕುಮಾರ್ ಸಿಬ್ಬಂದಿ ಮುರಳಿ, ಅರುಣಾ, ಷೇರುದಾರರು ಮತ್ತು ಹಲವರು ಉಪಸ್ಥಿತರಿದ್ದರು.