ಕೆ.ಬಿ.ಪಿಳ್ಳಪ್ಪನವರ ಪುತ್ಥಳಿ ಅನಾವರಣ

| Published : Feb 16 2024, 01:55 AM IST

ಸಾರಾಂಶ

ಕೆ.ಪಿ.ಪಿಳ್ಳಪ್ಪನವರ ಸೇವೆ ಚಿಕ್ಕಬಳ್ಳಾಪುರ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸಿದೆ. ಪಿ ಎಲ್ ಡಿ ಬ್ಯಾಂಕ್ ಅಭಿವೃದ್ದಿಗೊಳಿಸಿದ ಪಿಳ್ಳನವರು ರೈತರು ಅಭಿವೃದ್ಧಿಗೆ ಶ್ರಮಿಸಿದ್ದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಹಕಾರಿ ದುರೀಣ, ರೈತ ನಾಯಕ, ಮಾಜಿ ಎಂಎಲ್‌ಸಿ ಕೆ.ಬಿ.ಪಿಳ್ಳಪ್ಪನವರ ಕಂಚಿನ ಪ್ರತಿಮೆಯನ್ನು ನಗರದ ನೂತನ ಪಿ ಎಲ್ ಡಿ ಬ್ಯಾಂಕ್ ಕಟ್ಟಡದ ಆವರಣದಲ್ಲಿ ಗುರುವಾರ ಅನಾವರಣಗೊಳಿಸಲಾಯಿತು. ಪಿ ಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿ 6 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೆ.ಬಿ.ಪಿಳ್ಳಪ್ಪನವರ ಪುತ್ರರಾದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಡಾ.ಶ್ರೀನಿವಾಸಮೂರ್ತಿ ಮತ್ತು ಅವರ ಕುಟುಂಬ ಪಾಲ್ಗೊಂಡಿತ್ತು. ಶಾಸಕ ಪ್ರದೀಪ್ ಈಶ್ವರ್ ಆಗಮಿಸಿ ಮಾಲಾರ್ಪಣೆ ಮಾಡಿದರು. ಸರಳ ಸಮಾರಂಭದಲ್ಲಿ ಲೋಕಾರ್ಪಣೆಗೊಂಡ ಕಾರ್ಯಕ್ರಮದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಾಳೇಗೌಡ ಆಡಳಿತ ಮಂಡಳಿ ಜತೆಗೆ ಜೆಡಿಎಸ್,ಬಿಜೆಪಿ,ಕಾಂಗ್ರೇಸ್ ಮುಖಂಡರು ಭಾಗಿಯಾಗಿದ್ದರು.

ರೈತನಾಯಕ, ಸಹಕಾರ ದುರೀಣರ ಪಿಳ್ಳಪ್ಪನವರ ಪ್ರತಿಮೆ ಅನಾವರಣ ಗೊಳಿಸಿದ ಪಿ ಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.ಪಿಳ್ಳಪ್ಪನವರ ಕೊಡುಗೆ ಸ್ಮರಣೆ

ಶಾಸಕ ಪ್ರದೀಪ್ ಈಶ್ವರ ಮಾತನಾಡಿ, ಕೆ.ಪಿ.ಪಿಳ್ಳಪ್ಪನವರ ಸೇವೆ ಚಿಕ್ಕಬಳ್ಳಾಪುರ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸಿದೆ. ಪಿ ಎಲ್ ಡಿ ಬ್ಯಾಂಕ್ ಅಭಿವೃದ್ದಿಗೊಳಿಸಿದ ರೈತರು, ನಾಯಕರು ಆಗಿದ್ದ ಕೆ.ಬಿ.ಪಿಳ್ಳಪ್ಪ ನವರ ಪುತ್ಥಳಿ ಅನಾವರಣಗೊಳಿಸಿದ ಪಿ ಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿಗೆ ಅದಕ್ಕೆ ಸಹಕಾರ ನೀಡಿದ ಮಾಜಿ ಶಾಸಕ ಡಾ ಕೆ.ಸುಧಾಕರ್ ಅವರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು

ಸಮಾರಂಭದಲ್ಲಿ ಲೋಕಾರ್ಪಣೆಗೊಂಡ ಕಾರ್ಯಕ್ರಮದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಾಳೇಗೌಡ ಆಡಳಿತ ಮಂಡಳಿ ಜತೆಗೆ ಜೆಡಿಎಸ್,ಬಿಜೆಪಿ,ಕಾಂಗ್ರೇಸ್ ಮುಖಂಡರು ಬಾಗಿಯಾಗಿದ್ದರು.