ಸಾರಾಂಶ
ಆಂತರಿಕ ಚುನಾವಣೆಯಲ್ಲಿ ಬಹುಮತದಿಂದ ಸತತ 4ನೇ ಬಾರಿಗೆ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ತರೀಕೆರೆತಾಲೂಕು ಛಾಯಾಗ್ರಾಹಕರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಗರದ ಎಸ್.ಆರ್. ಆರ್ಕೇಡ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಯಲ್ಲಿ ನಡೆದ ಆಂತರಿಕ ಚುನಾವಣೆಯಲ್ಲಿ ಕೆ.ಭವಾನಿಶಂಕರ್ ಬಹುಮತದೊಂದಿಗೆ ಸತತ 4ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ಚಿಕ್ಕಮಗಳೂರು ಜಿಲ್ಲಾ ಛಾಯಾಗ್ರಾಹಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ನೂತನ ಕಾರ್ಯಕಾರಿ ಮಂಡಳಿಗೆ ಗೌರವಾಧ್ಯಕ್ಷ ವಿ.ಜಗದೀಶ್ವರಪ್ಪ, ಉಪಾಧ್ಯಕ್ಷ ಎಚ್.ಇಬ್ರಾಹಿಂ, ಕಾರ್ಯದರ್ಶಿ ಸಿ.ಜ್ಞಾನಮೂರ್ತಿ, ಖಜಾಂಚಿ ಎಚ್.ಎಸ್ ವಿನಯ್, ಸಹ ಕಾರ್ಯದರ್ಶಿ ಟಿ.ಜಿ.ನಿರಂಜನ್ ಮೂರ್ತಿ, ಆಂತರಿಕ ಲೆಕ್ಕ ಪರಿಶೋಧಕ ಎಲ್.ಎನ್.ಮಂಜುನಾಥ್, ನಿರ್ದೇಶಕರಾಗಿ ಎನ್.ಸುರೇಶ್, ಕೋರನಹಳ್ಳಿ ನಾಗರಾಜು, ಎಲ್.ಸಿ.ರಘು, ಎಸ್.ವಿ.ಅಮೃತೇಶ್, ಪ್ರದೀಪ್, ಮಂಜು, ಕೆ.ಆರ್‌ನಾಗರಾಜ್ ಟಿ.ಎಂ.ಗೋವಿಂದ ಅವರು ಸರ್ವಾನುಮತದಿಂದ ಮರು ಆಯ್ಕೆಯಾದರು.ಅಧ್ಯಕ್ಷ ಕೆ.ಭವಾನಿಶಂಕರ್ ಮಾತನಾಡಿ ಈಗಾಗಲೇ 2018 ರಿಂದ 2022ರ ವರೆಗೆ 4 ವರ್ಷ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ, 2022 ರಿಂದ ಸತತ 3 ವರ್ಷಗಳು ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ ನನ್ನನ್ನು ಈ ಬಹುಮತದಿಂದ ಮತ್ತೊಮ್ಮೆ ಸಂಘದ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದೀರಿ ಈ ಆಯ್ಕೆ ನನಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ನೀವುಗಳು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ನಮ್ಮ ತರೀಕೆರೆ ತಾಲೂಕು ಛಾಯಾಗ್ರಾಹಕರ ಸಂಘ ರಾಜ್ಯದಲ್ಲಿಯೇ ಉನ್ನತ ಮಟ್ಟದ ಸ್ಥಾನಮಾನ ಗಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟು ಸಂಘದ ಸೇವೆ ಮಾಡುತ್ತೇನೆ ಎಂದು ಹೇಳಿ ನೆರೆದಿದ್ದ ಸರ್ವ ಸದಸ್ಯರಿಗೂ ಧನ್ಯವಾದ ಅರ್ಪಿಸಿದರು.-25ಕೆಟಿಆರ್.ಕೆ.8ಃ ತರೀಕೆರೆ ತಾಲೂಕು ಛಾಯಾಗ್ರಾಹಕರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಕೆ.ಭವಾನಿಶಂಕರ್ ಬಹುಮತದೊಂದಿಗೆ ಸತತ 4ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.