ಸಾರಾಂಶ
ಪಲಿಮಾರು ಮಠದ ಶ್ರೀ ಯೋಗ ವಿದ್ಯಾಪೀಠದ ಘಟಿಕೋತ್ಸವ ಸಂದರ್ಭದಲ್ಲಿ ಈ ಬಾರಿಯ ‘ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ’ಯನ್ನು ಯಕ್ಷಗಾನದ ತೆಂಕುತಿಟ್ಟಿನ ಶ್ರೇಷ್ಠ ಕಲಾವಿದರಾದ ಕೆ. ಗೋವಿಂದ ಭಟ್ ಅವರಿಗೆ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪಲಿಮಾರು ಮಠದ ಶ್ರೀ ಯೋಗ ವಿದ್ಯಾಪೀಠದ ಘಟಿಕೋತ್ಸವ ಸಂದರ್ಭದಲ್ಲಿ ಈ ಬಾರಿಯ ‘ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ’ಯನ್ನು ಯಕ್ಷಗಾನದ ತೆಂಕುತಿಟ್ಟಿನ ಶ್ರೇಷ್ಠ ಕಲಾವಿದರಾದ ಕೆ. ಗೋವಿಂದ ಭಟ್ ಅವರಿಗೆ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರದಾನ ಮಾಡಿದರು.ಈ ಸಂದರ್ಭ ಹಿರಿಯ ವಿದ್ವಾಂಸ ಪಂಜ ಭಾಸ್ಕರ ಭಟ್ ಅಭಿನಂದನೆಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಮತ್ತು ಪಲಿಮಾರಿನ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶೀಪಾದರು ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪಾಕ ತಜ್ಞ ಕೆ. ಶ್ರೀಧರ ಭಟ್, ವೈದಿಕ ವಿದ್ವಾನ್ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಅವರಿಗೆ ಶ್ರೀ ಮಠದ ಪ್ರಶಸ್ತಿ ನೀಡಿ ಗೌರವಿಸಿದರು.೫೦,೦೦೦ ರು.ಗಳ ನಿಧಿಯನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು ಪಲಿಮಾರು ಮಠಾಧೀಶರು, ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಪರಂಪರೆಯನ್ನು ಕಳೆದ ಒಂದು ದಶಕದಿಂದ ಮುಂದುವರಿಸಿಕೊಂಡು ಬಂದಿದ್ದಾರೆ.