ಕೋಲಿ ಸಮಾಜದ ಅಭಿವೃದ್ಧಿಗೆ ಹೇರೂರು ಹಗಲಿರುಳು ಶ್ರಮಿಸಿದ್ದಾರೆ ಕೆ. ಮುದ್ನಾಳ

| Published : Dec 06 2023, 01:15 AM IST

ಕೋಲಿ ಸಮಾಜದ ಅಭಿವೃದ್ಧಿಗೆ ಹೇರೂರು ಹಗಲಿರುಳು ಶ್ರಮಿಸಿದ್ದಾರೆ ಕೆ. ಮುದ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ ಮಾಜಿ ಮುಖ್ಯ ಸಚೇತಕ್ ದಿ. ವಿಠಲ್ ಹೇರೂರು 10ನೇ ವರ್ಷದ ಪುಣ್ಯಸ್ಮರಣೆ ಸರಳವಾಗಿ ಆಚರಿಸಲಾಯಿತು. ಈ ವೇಳೆ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ಸಮಾಜದ ಅಭಿವೃದ್ಧಿಗೆ ತಮ್ಮ ಜೀವಮಾನವನ್ನೇ ಅರ್ಪಣೆ ಮಾಡಿದ ವಿಠಲ್ ಹೇರೂರು ಹೆಸರನ್ನು ಉಳಿಸಬೇಕಾಗಿದೆ ಎಂದರು

ಕನ್ನಡಪ್ರಭ ವಾರ್ತೆ ಯಾದಗಿರಿನಗರದ ಕೋಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ ಮಾಜಿ ಮುಖ್ಯ ಸಚೇತಕ್ ದಿ. ವಿಠಲ್ ಹೇರೂರು 10ನೇ ವರ್ಷದ ಪುಣ್ಯಸ್ಮರಣೆ ಸರಳವಾಗಿ ಆಚರಿಸಲಾಯಿತು. ಈ ವೇಳೆ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ಸಮಾಜದ ಅಭಿವೃದ್ಧಿಗೆ ತಮ್ಮ ಜೀವಮಾನವನ್ನೇ ಅರ್ಪಣೆ ಮಾಡಿದ ವಿಠಲ್ ಹೇರೂರು ಹೆಸರನ್ನು ಉಳಿಸಬೇಕಾಗಿದೆ ಎಂದರು.

ಹಿಂದುಳಿದ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಗಳಿಗೆ ಸೇರ್ಪಡೆ ಮಾಡಲು ಪ್ರಮುಖ ಬೇಡಿಕೆಯಾಗಿದ್ದು, ಇದಕ್ಕಾಗಿ ಹಗಲಿರುಳು ಶ್ರಮಿಸಿ ತಮ್ಮ ಜೀವನವನ್ನೇ ಸವೆಸಿದ ಧೀಮಂತ ನಾಯಕರು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದನೆ ನೀಡದೇ ಇರುವುದರಿಂದ ಇದುವರೆಗೆ ಅವರ ಆಸೆ ಈಡೇರದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ರಾಜಕಾರಣಿಗಳ ಕುತಂತ್ರದಿಂದ ನಮ್ಮು ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬಾರದಂತಾಗಿದೆ ಎಂದರು.

ಆದರೆ, ಸ್ವಾತಂತ್ರ್ಯ ನಂತರ ಇಂದಿಗೂ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು, ಸವಲತ್ತು, ಸಾಮಾಜಿಕ ನ್ಯಾಯ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಅಂಬಿಗರ ಚೌಡಯ್ಯನವರನ್ನು ರಾಜ್ಯದ ಎಲ್ಲ ಕಡೆ ಪರಿಚಯಿಸಿದ ಮಹಾನ್ ಧೀಮಂತ ಪುರುಷರಾಗಿದ್ದು, ಇವರ ಸ್ಮರಣೆಯನ್ನು ಪ್ರತಿಯೊಬ್ಬರು ಮಾಡಬೇಕು. ಇವರಿಂದಾಗಿ ಜಯಂತ್ಯುತ್ಸವ ಆಯಿತು. ಚೌಡಯ್ಯ ನಿಗಮ ಆಗಲು ವಿಠಲ್‌ರು ಕಾರಣಿಕರ್ತರಾಗಿದ್ದಾರೆ. ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಪೀಠ ಆಗಲು ಕೂಡ ಕಾರಣೀಕರ್ತರಾಗಿದ್ದಾರೆ ಎಂದರು.

ಬಸವರಾಜ ಇಟಗಿ, ಯಲ್ಲಪ್ಪ ವಂಟೂರ, ಬನ್ನಯ್ಯ ಸ್ವಾಮಿ ಯರಗೋಳ, ಶಹಾಪುರ ಎಪಿಎಂಸಿ ಅದ್ಯಕ್ಷ ಅಯ್ಯಣ್ಣ ಹಾಲಗೇರಿ, ಆಂಜನೇಯ ಬೆಳಗೇರಿ, ಬಾಬುಖಾನ್ ಹೊಸಳ್ಳಿ, ರಫೀಕ್ ಪಟೇಲ್, ಬನ್ನಪ್ಪ, ಸುನಿಲ್ ಕುಮಾರ, ಶರಣಪ್ಪ ಉಳ್ಳೆಸುಗೂರ, ಮಲ್ಲಿಕಾರ್ಜುನ ಅರಿಕೇರಿ, ಯಲ್ಲಾಲಿಂಗ ಚಾಮನಳ್ಳಿ, ಕಾಶಿನಾಥ, ಭೀಮರಾಯ, ಲಿಂಗಪ್ಪ, ಸಣ್ಣ ಶಿವಪ್ಪ, ಗುಂಜಲಪ್ಪ, ಶಿವರಾಜ, ನಿಂಗಪ್ಪ ಸೇರಿ ಇತರರಿದ್ದರು.