ವೀರಶೈವ ಸಹಕಾರ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಕೆ.ಜೆ.ರುದ್ರಪ್ಪ

| Published : Jan 10 2025, 12:46 AM IST

ವೀರಶೈವ ಸಹಕಾರ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಕೆ.ಜೆ.ರುದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕೆ.ಜೆ.ರುದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಮಲ್ಲಿಕಾರ್ಜುನಯ್ಯ ಅವರು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ವೀರಶೈವ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕೆ.ಜೆ.ರುದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಮಲ್ಲಿಕಾರ್ಜುನಯ್ಯ ಅವರು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. ಗುರುವಾರ ಬ್ಯಾಂಕಿನಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಜೆ.ರುದ್ರಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಮಲ್ಲಿಕಾರ್ಜುನಯ್ಯ ಅವರು ಮಾತ್ರವೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಚುನಾವಣಾಧಿಕಾರಿ ಎಚ್.ಓಬಳೇಶ್ ಇವರುಗಳ ಅವಿರೋಧ ಆಯ್ಕೆ ಘೋಷಿಸಿದರು.ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕೆ.ಜೆ.ರುದ್ರಪ್ಪ ಅವರು ಮಾತನಾಡಿ, ಕಳೆದ ಅವಧಿಯಲ್ಲಿ ತಾವು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬ್ಯಾಂಕ್ ಸುಮಾರು 17 ಕೋಟಿ ರು. ನಷ್ಟದಲ್ಲಿತ್ತು, ಆ ನಷ್ಟವನ್ನು ಸರಿತೂಗಿಸಿ, ಈಗ ಬ್ಯಾಂಕ್ ಲಾಭದಲ್ಲಿದೆ. ಶೂನ್ಯ ಎನ್.ಪಿ.ಗಳಿಸಿದೆ. ಆರ್ಥಿಕವಾಗಿ ಸದೃಢವಾಗಿದೆ. ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ಬ್ಯಾಂಕಿನ ವ್ಯವಹಾರವನ್ನು ಆಧುನಿಕರಣ ಮಾಡುವ ಸಲುವಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡು ಸದಸ್ಯರಿಗೆ ಹೆಚ್ಚಿನ ಸೇವೆ ಒದಗಿಸುವ ಗುರಿ ಹೊಂದಲಾಗಿದೆ. ನೆಲಮಂಗಲ ಹಾಗೂ ಬೆಂಗಳೂರು ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಬ್ಯಾಂಕಿನ ನಿರ್ದೇಶಕರಾದ ಟಿ.ಜೆ.ಗಿರೀಶ್, ಟಿ.ಎಲ್.ಏಕಾಂತ್, ಆರ್.ಮಂಜುನಾಥ್, ಟಿ.ಆರ್.ಯೋಗೇಶ್, ಪಿ.ರವಿಶಂಕರ್, ಟಿ.ಎಸ್.ಷಣ್ಮುಖ ಸ್ವಾಮಿ, ಬಿ.ರೇಣುಕಾರಾಧ್ಯ, ಟಿ.ವಿ.ಚಂದ್ರಶೇಖರ್, ಇ.ಎಸ್.ಸಂತೋಷ್‌ಕುಮಾರ್, ಜಿ.ನಾಗರಾಜ್, ಟಿ.ಎನ್.ಶ್ರೀಕಂಠಸ್ವಾಮಿ, ಟಿ.ಎಂ.ಸಂತೋಷ್, ಕೆ.ಎಸ್.ಅರುಣ್‌ಕುಮಾರ್, ಅರ್ಜುನ್ ಎಂ.ವೀರೇಶ್, ಗಣೇಶ್ ಜಿ.ಪ್ರಸಾದ್, ಹೆಚ್.ಎಂ.ದೀಪಶ್ರೀ, ಎ.ಯು.ರೂಪ, ಬಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಲ್ಪನ ಅವರು ಹಾಜರಿದ್ದು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.ವೀರಶೈವ ಸಮಾಜದ ಮುಖಂಡರಾದ ಟಿ.ಬಿ.ಶೇಖರ್, ಎಸ್.ಜಿ.ಚಂದ್ರಮೌಳಿ, ಬಾವಿಕಟ್ಟೆ ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೇಮಠ್ ಸೇರಿದಂತೆ ಸಮಾಜದ ವಿವಿಧ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಆಗಮಿಸಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿ, ಶುಭ ಕೋರಿದರು.