ಕೆ.ಎಂ.ದೊಡ್ಡಿ: ವಿಶ್ವೇಶ್ವರಯ್ಯ ಸೊಸೈಟಿ ಅಧ್ಯಕ್ಷರಾಗಿ ಗಿರೀಶ್ ಆಯ್ಕೆ

| Published : Feb 28 2025, 12:49 AM IST

ಸಾರಾಂಶ

ಒಟ್ಟು 13 ನಿರ್ದೇಶಕ ಬಲದ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗಿರೀಶ್ ಕ್ಯಾತಘಟ್ಟ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರಾಜೇಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ಸಹಕಾರ ಇಲಾಖೆ ಅಧಿಕಾರಿ ಸುಮಿತ್ರಾ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಶ್ರೀ ವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಗಿರೀಶ್ ಕ್ಯಾತಘಟ್ಟ, ಉಪಾಧ್ಯಕ್ಷರಾಗಿ ಜ್ಯೋತಿ ರಾಜೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 13 ನಿರ್ದೇಶಕ ಬಲದ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗಿರೀಶ್ ಕ್ಯಾತಘಟ್ಟ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರಾಜೇಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ಸಹಕಾರ ಇಲಾಖೆ ಅಧಿಕಾರಿ ಸುಮಿತ್ರಾ ಘೋಷಿಸಿದರು.

ನೂತನ ಅಧ್ಯಕ್ಷ ಗಿರೀಶ್ ಕ್ಯಾತಘಟ್ಟ ಮಾತನಾಡಿ, ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿ ಶ್ರೀ ವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘವನ್ನು ಮದ್ದೂರು ತಾಲೂಕಿನ್ಯಾದ್ಯಂತ ವಿಸ್ತರಿಸಿ ಷೇರು ಸಂಗ್ರಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಮುಖಂಡ ರೈಸ್ ಮಿಲ್ ಚಂದ್ರಣ್ಣ ಅವರ ತಂಡ ನೂತನ ಅಧ್ಯಕ್ಷ ಗಿರೀಶ್ ಕ್ಯಾತಘಟ್ಟ ಅವರನ್ನು ಅಭಿನಂದಿಸಿದರು. ತೊರೆಬೊಮ್ಮನಹಳ್ಳಿ ವೆಂಕಟೇಶ್, ಯಲಾದಹಳ್ಳಿ ನಿಂಗೇಗೌಡ, ನಿರ್ದೇಶಕರಾದ ದೇವರಹಳ್ಳಿ ಎಲ್‌ಐಸಿ ಪಿ. ಶಿವಣ್ಣ, ಅಣ್ಣೂರಿನ ಆಟೋಪಾರ್ಟ್ಸ್ ಡಿ. ವರದರಾಜು, ಸುಣ್ಣದದೊಡ್ಡಿ ಎಸ್.ಟಿ. ಮಹೇಶ್, ಗುಡಿಗೆರೆ ಜಿ.ಎಸ್. ಲೋಕೇಶ್, ರಾಜೇಗೌಡನದೊಡ್ಡಿ ಆರ್.ಕೆ. ಚಂದ್ರಶೇಖರ್, ತೊರೆಚಾಕನಹಳ್ಳಿ ಸಿ.ಬಿ. ಪ್ರಕಾಶ್, ಎಂ.ಕೆ.ಭವಾನಿ ಪುಟ್ಟರಾಜು, ದೇವರಹಳ್ಳಿ ಕೃಷ್ಣ, ಬಿದರಹೊಸಹಳ್ಳಿ ಸಿದ್ದಾಚಾರಿ, ಮಾದರಹಳ್ಳಿ ಎಂ.ವಿ. ಸೀನಾ, ಕೆ.ಎಸ್. ರಾಜೇಶ್, ಕಾರ್ಯದರ್ಶಿ ಪವಿತ್ರ ಸೇರಿದಂತೆ ಮತ್ತಿತರಿದ್ದರು.