ಕೆ.ಆರ್‌. ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲಾರಿ ಮಾಲೀಕರು, ಚಾಲಕರ ಸಂಘದಿಂದ ಪ್ರತಿಭಟನೆ

| Published : Jan 19 2024, 01:46 AM IST

ಕೆ.ಆರ್‌. ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲಾರಿ ಮಾಲೀಕರು, ಚಾಲಕರ ಸಂಘದಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಲಾರಿ ಮಾಲೀಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಿರುವ ನಿಯಮ ಮರಣ ಶಾಸನವಾಗಿದ್ದು, ಕೂಡಲೇ ಅದನ್ನು ರದ್ದುಪಡಿಸಬೇಕು. ಇಂತಹ ನಿಯಮಗಳು ನಮ್ಮನ್ನು ಬೀದಿಗೆ ತಳುತ್ತವೆ. ದಿಢೀರ್ ನಿಯಮದಿಂದ ಮಾಲೀಕರು ಮತ್ತು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಇದನ್ನು ವಾಪಾಸ್ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಲಾರಿ ಮಾಲೀಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಿರುವ ನಿಯಮ ಮರಣ ಶಾಸನವಾಗಿದ್ದು, ಕೂಡಲೇ ಅದನ್ನು ರದ್ದುಪಡಿಸಬೇಕು ಎಂದು ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳ ಲಾರಿ ಮಾಲೀಕರು ಮತ್ತು ಚಾಲಕರು ಆಗ್ರಹಿಸಿದರು.

ಕೇಂದ್ರದ ನಿಯಮವನ್ನು ವಿರೋಧಿಸಿ ಎರಡು ತಾಲೂಕುಗಳ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಬಾಲಸುಬ್ರಮಣ್ಯ ಅವರಿಗೆ ಮನವಿ ಸಲ್ಲಿಸಿದ ನಂತರ ಎಡತೊರೆ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪಿ. ಸುರೇಶ್ ಮಾತನಾಡಿ, ಇಂತಹ ನಿಯಮಗಳು ನಮ್ಮನ್ನು ಬೀದಿಗೆ ತಳುತ್ತವೆ ಎಂದರು.

ದಿಢೀರ್ ನಿಯಮದಿಂದ ಮಾಲೀಕರು ಮತ್ತು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಇದನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ನಿರಂತರವಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾವು ಸಹ ಸಾರ್ವಜನಿಕ ಸೇವೆ ಮಾಡುತ್ತಿದ್ದು, ದೇಶದಲ್ಲಿ ಶೇ. 70ರಷ್ಟು ವ್ಯಾಪಾರ ಮತ್ತು ವಹಿವಾಟು ನಡೆಯುತ್ತಿರುವುದು ನಮ್ಮಿಂದಲೇ ಜತೆಗೆ ಪ್ರಸ್ತುತ ಶೇ. 50 ರಷ್ಟು ಚಾಲಕರ ಕೊರತೆಯನ್ನು ದೇಶ ಎದುರಿಸುತ್ತಿದ್ದು, ನಮ್ಮ ಸಂಕಷ್ಟಗಳನ್ನು ಅರಿತುಕೊಂಡು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಹೊಸ ನಿಯಮವನ್ನು ರದ್ದು ಪಡಿಸಬೇಕೆಂದು ಹೇಳಿದರು.

ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷ ಜಯರಾಮ್, ಪದಾಧಿಕಾರಿಗಳಾದ ಹರೀಶ್, ಮಹೇಶ್, ಎಚ್.ಕೆ. ಸುರೇಶ್, ತಿಮ್ಮೇಗೌಡ, ಫಜಲ್, ಹಿನಾಯತ್, ರಫಿಕ್, ಸಫೀಕ್, ನಾಗರಾಜು, ಶ್ರೀಕಂಠಮೂರ್ತಿ, ಅರಸು, ಜಬೀಉಲ್ಲಾ, ರಮೇಶ್, ವಿರುಪಾಕ್ಷ ಭಾಗವಹಿಸಿದ್ದರು.