ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರು ಅಧಿಕಾರದಲ್ಲಿದ್ದಾಗ ಮಾಜಿ ಶಾಸಕ ಕೆ.ರಾಜು ಫಲಾನುಭವಿ ಆಗಿದ್ದವರು. ಈಗ ಅಧಿಕಾರದ ಆಸೆಗೆ ಕಾಂಗ್ರೆಸ್ ಸೇರಿ ಬಕೆಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು
ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರು ಅಧಿಕಾರದಲ್ಲಿದ್ದಾಗ ಮಾಜಿ ಶಾಸಕ ಕೆ.ರಾಜು ಫಲಾನುಭವಿ ಆಗಿದ್ದವರು. ಈಗ ಅಧಿಕಾರದ ಆಸೆಗೆ ಕಾಂಗ್ರೆಸ್ ಸೇರಿ ಬಕೆಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆ.ರಾಜುರವರು ಡಿಕೆ ಸಹೋದರರನ್ನು ಮೆಚ್ಚಿಸಿಕೊಳ್ಳಲು ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡುತ್ತಿದ್ದಾರೆ. ಈ ಹಿಂದೆ ಎಲ್ಲ ಬಗೆಯ ಸಹಾಯ ಮಾಡಿದ ಮತ್ತು ಸೂಕ್ತ ಸ್ಥಾನಮಾನದಲ್ಲಿ ಕೂರಿಸಿದವರ ಬಗ್ಗೆಯೇ ಮಾತನಾಡುತ್ತಿರುವ ಕೆ.ರಾಜುಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.ರಾಮನಗರ ಕ್ಷೇತ್ರದಲ್ಲಿ ಶಾಸಕರಾಗುವ ಶಕ್ತಿ ಕೆ.ರಾಜುಗೆ ಇರಲಿಲ್ಲ. ಅವರು ಮೂಲತಃ ಬಿಜೆಪಿ ಯಲ್ಲಿದ್ದವರು. ಕೈಲಾಂಚ ಜಿಲ್ಲಾ ಪಂಚಾಯಿತಿಯಲ್ಲಿ ಮೇಷ್ಟ್ರು ವಿರುದ್ಧ ಸೋಲು ಅನುಭವಿಸಿದ್ದವರು. ಸೋತ ನಿಮ್ಮನ್ನು ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ಶಾಸಕರನ್ನಾಗಿ ಮಾಡಿದರು. ಆಪರೇಷನ್ ಕಮಲ ಸಮಯದಲ್ಲಿ ಬಿಜೆಪಿಗೆ ಹೋಗಲು ನೀವು ತುದಿಗಾಲಿನಲ್ಲಿ ನಿಂತಿದ್ದವರು. ಕುಮಾರಸ್ವಾಮಿರವರ ಕಾರಣದಿಂದಾಗಿ ಬಿಜೆಪಿಯವರೇ ನಿಮ್ಮನ್ನು ಕೈ ಬಿಟ್ಟರು. ಇಲ್ಲದಿದ್ದರೆ ಮೊದಲೇ ನೀವು ಸೇಲ್ ಆಗುತ್ತಿದ್ದಿರಿ. ಈಗ ಕಾಂಗ್ರೆಸ್ ಸೇರಿ ಡಿಕೆ ಬ್ರದರ್ಸ್ ಮೆಚ್ಚಿಸಲು ನೀತಿ ಪಾಠ ಮಾಡಲು ಹೊರಟಿದ್ದೀರಿ ಎಂದು ಕಿಡಿಕಾರಿದರು.
ಕೆ.ರಾಜುರವರ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಆ ಪಕ್ಷದ ಸಿದ್ದಾಂತಗಳ ಬಗ್ಗೆ ಏನು ಗೊತ್ತಿಲ್ಲ. ದೇವೇಗೌಡರ ಕುಟುಂಬ ಏನು ಮಾಡಿದ್ದಾರೆ ಎಂಬುದಕ್ಕೆ ಸಿ.ಬೋರಯ್ಯ ಅವರನ್ನು ಎಂಎಲ್ ಸಿ, ನಿಮ್ಮನ್ನು ಶಾಸಕರಾಗಿ ಮಾಡಿದ್ದು, ಅರೇಹಳ್ಳಿ ತಿಮ್ಮಯ್ಯ ಅವರನ್ನು ರೈಲ್ವೆ ಬೋರ್ಡ್ ಛೇರ್ಮನ್, ಜಿಪಂ ಅಧ್ಯಕ್ಷರನ್ನಾಗಿ ಎನ್.ರಾಮಯ್ಯ , ಭೂ ನ್ಯಾಯ ಮಂಡಳಿ ಅಧ್ಯಕ್ಷರನ್ನಾಗಿ ಬ್ಯಾಟಪ್ಪ, ಪುರಸಭೆ ಅಧ್ಯಕ್ಷರನ್ನಾಗಿ ನಾಗಣ್ಣ ಅವರನ್ನು ಮಾಡಿದವರು. ಇದೆಲ್ಲ ನಿಮಗೆ ಗೊತ್ತಿಲ್ಲವೇ ಎಂದು ಟೀಕಿಸಿದರು.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಜನರ ಕಣ್ಮುಂದಿವೆ. ಈಗ ನಿಮಗೆ ಅಧಿಕಾರವಿದೆ ಅಭಿವೃದ್ಧಿ ಮಾಡಿ ತೋರಿಸಿ. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ತೇಜೋವಧೆ ಮಾಡುವುದು ಸರಿಯಲ್ಲ. ಜಿಲ್ಲಾ ಕಾಂಗ್ರೆಸ್ ನಾಯಕರೊಬ್ಬರ ಕಾರಣದಿಂದಾಗಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಕಾಣೆಯಾಗಿರುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿಯೇ ಚರ್ಚೆ ನಡೆಯುತ್ತಿದೆ. ಈ ವಿಚಾರ ಕೆ.ರಾಜು ಅವರಿಗೆ ಗೊತ್ತಿದ್ದು, ಧೈರ್ಯವಿದ್ದರೆ ಆ ನಾಯಕನ ಹೆಸರನ್ನು ಬಹಿರಂಗ ಪಡಿಸಲಿ ಎಂದು ಎ.ಮಂಜುನಾಥ್ ಸವಾಲು ಹಾಕಿದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಕೆಎಸ್ ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ನಗರಸಭಾ ಸದಸ್ಯ ಮಂಜುನಾಥ್, ಮೈತ್ರಿ ಪಕ್ಷಗಳ ಮುಖಂಡರಾದ ಕೆ.ಚಂದ್ರಯ್ಯ, ನರಸಿಂಹಮೂರ್ತಿ, ಬಾಲಗೇರಿ ರವಿ, ಜಿ.ಟಿ.ಕೃಷ್ಣ, ರಾಮಕೃಷ್ಣಯ್ಯ, ಅಪ್ಪಾಜಣ್ಣ, ಜೈಕುಮಾರ್, ನಾಗೇಶ್, ವಾಸುನಾಯ್ಕ, ಬೊಮ್ಮಚ್ಚನ ಹಳ್ಳಿ ಶಿವರಾಮು, ಕೆಂಪರಾಮು, ಚನ್ನಪ್ಪ ಮತ್ತಿತರರು ಇದ್ದರು.ಕೋಟ್...........
ಮಾಜಿ ಶಾಸಕ ಕೆ.ರಾಜು ಈಗ ರಾಮನಗರ ಶಾಸಕರ ಕಾರಿನ ಡೋರ್ ತೆಗೆದು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಕೈಲಾಂಚ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿ ಪಡಿಸಿ ನಿಮ್ಮ ಹುಡುಗನನ್ನೇ ನಿಲ್ಲಿಸಿ, ಗೆಲ್ಲಿಸಿಕೊಂಡು ಬಂದು ತೋರಿಸಿ. ಆಗ ನಿಮ್ಮ ನಾಯಕತ್ವ, ಸಂಘಟನೆ ಒಪ್ಪಿಕೊಳ್ಳುತ್ತೇನೆ.-ಎ.ಮಂಜುನಾಥ್, ಮಾಜಿ ಶಾಸಕರು.
9ಕೆಆರ್ ಎಂಎನ್ 2.ಜೆಪಿಜಿಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.