ನರಸಿಂಹರಾಜ ಕ್ಷೇತ್ರದಲ್ಲಿ ಮಹಾಸಂರ್ಪಕ ಅಭಿಯಾನಕ್ಕೆ ಸಂದೇಶ್ ಸ್ವಾಮಿ ಚಾಲನೆ

| Published : Apr 22 2024, 02:03 AM IST

ನರಸಿಂಹರಾಜ ಕ್ಷೇತ್ರದಲ್ಲಿ ಮಹಾಸಂರ್ಪಕ ಅಭಿಯಾನಕ್ಕೆ ಸಂದೇಶ್ ಸ್ವಾಮಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 280 ಬೂತ್ ಗಳಿದ್ದು, ಇಲ್ಲಿನ ಜ್ಯೋತಿನಗರದ ಸ್ಲಂ, ಜಲಪುರಿ ಪೋಲೀಸ್ ಕ್ವಾಟ್ರಸ್ ಸೇರಿದಂತೆ ಗಾಯತ್ರಿಪುರಂನ ವಾರ್ಡಿನಲ್ಲಿ ಜನರಿಗಾಗಿ ವಸತಿ ಸೌಲಭ್ಯ ಕಲ್ಪಸಿ ಅಭಿವೃದ್ಧಿ ಪಡಿಸಿದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ. ಚಾಮರಾಜೇಂದ್ರ ಒಡೆಯರ್ ಅವರ ಪುತ್ರಿ ಗಾಯತ್ರಿದೇವಿ ಅವರ ಹೆಸರಿನಲ್ಲಿ ಇಲ್ಲಿನ ಗಾಯತ್ರಿಪುರಂ ರಚನೆಯಾಗಿರುವುದು ವಿಶೇಷ

ಕನ್ನಡಪ್ರಭ ವಾರ್ತೆ ಮೈಸೂರು

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗಾಗಿ ನರಸಿಂಹರಾಜ ಕ್ಷೇತ್ರದಲ್ಲಿ ಮಹಾಸಂಪರ್ಕ ಅಭಿಯಾನಕ್ಕೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಚಾಲನೆ ನೀಡಿದರು.

ಈ ವೇಳೆ ಸಂದೇಶ್ ಸ್ವಾಮಿ ಮಾತನಾಡಿ, ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 280 ಬೂತ್ ಗಳಿದ್ದು, ಇಲ್ಲಿನ ಜ್ಯೋತಿನಗರದ ಸ್ಲಂ, ಜಲಪುರಿ ಪೋಲೀಸ್ ಕ್ವಾಟ್ರಸ್ ಸೇರಿದಂತೆ ಗಾಯತ್ರಿಪುರಂನ ವಾರ್ಡಿನಲ್ಲಿ ಜನರಿಗಾಗಿ ವಸತಿ ಸೌಲಭ್ಯ ಕಲ್ಪಸಿ ಅಭಿವೃದ್ಧಿ ಪಡಿಸಿದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ. ಚಾಮರಾಜೇಂದ್ರ ಒಡೆಯರ್ ಅವರ ಪುತ್ರಿ ಗಾಯತ್ರಿದೇವಿ ಅವರ ಹೆಸರಿನಲ್ಲಿ ಇಲ್ಲಿನ ಗಾಯತ್ರಿಪುರಂ ರಚನೆಯಾಗಿರುವುದು ವಿಶೇಷ ಎಂದರು.

ರಾಜಮನೆತನದವರ ಮೇಲೆ ಅತಿಹೆಚ್ಚು ಅಭಿಮಾನ ಹೊಂದಿರುವ ಈ ಭಾಗದ ಜನರು, ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಹೆಚ್ಚಿನ ಮತ ನೀಡಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ ಎಂದು ಅವರು ಹೇಳಿದರು.

ನಂತರ ಗಾಯತ್ರಿಪುರಂ ಬಡಾವಣೆಯ ವಿವಿಧ ಭಾಗಗಳಿಗೆ ತೆರಳಿ ಪ್ರಧಾನಿ ಮೋದಿ ಅವರು ಅನುಷ್ಠಾನಗೊಳಿಸಲಿರುವ ವಿವಿಧ ಜನಪರ ಯೋಜನೆಗಳ ಸಂಕಲ್ಪ ಪತ್ರವನ್ನು ವಿತರಿಸಿ ಮತಯಾಚಿಸಿದರು.

ಬಿಜೆಪಿ ವಾರ್ಡ್ ಅಧ್ಯಕ್ಷ ಶರತ್, ಮುಖಂಡರಾದ ಮಣಿರತ್ನಮ್ಮ, ಮೋಹನ, ಸುಬ್ರಹ್ಮಣಿ ಮೊದಲಾದವರು ಇದ್ದರು.