ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ಜಂಕ್ಷನ್‌ನಲ್ಲಿ ದಿ.ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣ ಸಮಿತಿ ವತಿಯಿಂದ ನಿರ್ಮಾಣಗೊಂಡ ಪಚ್ಚಿನಡ್ಕ ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ಹಾಗೂ ಪುತ್ಥಳಿಯ ಲೋಕಾರ್ಪಣಾ ಕಾರ್ಯಕ್ರಮವು ಭಾನುವಾರ ನಡೆಯಿತು.ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಜೀವನದಲ್ಲಿ ವ್ಯಕ್ತಿ ಮಾಡಿದ ಒಳ್ಳೆಯತನ ಹಾಗೂ ಸಮಾಜ ಅವರನ್ನು ಗುರುತಿಸಿ ಗೌರವಿಸುವುದು ಅ ವ್ಯಕ್ತಿಯ ಶ್ರೇಷ್ಠತೆಯನ್ನು ಬಿಂಬಿಸುತ್ತದೆ, ನಾವು ಸಮಾಜಕ್ಕೆ ಮಾಡಿದ ಸೇವೆಯ ಫಲದಿಂದಲೇ ನಮ್ಮ ಜೀವನದಲ್ಲಿ ಚರಿತ್ರೆ ನಿರ್ಮಾಣವಾಗಲಿದ್ದು, ಜೀವನದಲ್ಲಿ ದೈವಿಕ ಗುಣವಿದ್ದ ಫಲವಾಗಿಯೇ ಸೇಸಪ್ಪ ಕೋಟ್ಯಾನ್ ನಮಗೆಲ್ಲ ಆದರ್ಶ ಪ್ರಾಯರಾಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸೇಸಪ್ಪ ಕೋಟ್ಯಾನ್ ಅವರು ಸುಕೃತ ಕರ್ಮಗಳನ್ನು ಪ್ರಾಮಾಣಿಕವಾಗಿ ಮಾಡಿದ್ದು, ಹೀಗಾಗಿ ಅವರು ಸದಾ ಸ್ಮರಣೀಯರೆನಿಸಿಕೊಳ್ಳುತ್ತಾರೆ. ಬಂಧು ವರ್ಗ ಅವರಿಗೆ ಶಕ್ತಿಯನ್ನು ಕೊಟ್ಟ ಕಾರಣದಿಂದ ಹಂತ ಹಂತವಾಗಿ ಮೇಲೇರಲು ಸಾಧ್ಯವಾಗಿದ್ದು, ಅವರು ಜಾತಿ, ಮತದ ಭೇದ ಮರೆತು ಎಲ್ಲರನ್ನೂ ತನ್ನವರೆಂದು ಪ್ರೀತಿಸಿದ್ದರು. ಜನ ಅವರನ್ನು ಸದಾ ಸ್ಮರಿಸಬೇಕು ಎನ್ನುವ ಕಾರಣಕ ಸಾರ್ವಜನಿಕ ಸ್ಥಳದಲ್ಲಿ ಸ್ಮಾರಕ ವೃತ್ತ, ಪುತ್ಥಳಿ ನಿರ್ಮಾಣ ಮಾಡಲಾಗಿದೆ ಎಂದರು.
ತೊಡಂಬಿಲ ಸೆಕ್ರೇಡ್ ಹಾರ್ಟ್ ಚರ್ಚ್ ನ ಧರ್ಮಗುರು ವಂಪಾ ಆ್ಯಂಟನಿ. ಲೋಬೋ ಹಾಗೂ ಉದ್ದಬೆಟ್ಟು ಹೆಸ ಹೈದ್ರೋಸ್ ಜುಮಾ ಮಸೀದಿ ಧರ್ಮಗುರು ಕೆ.ವಿ.ಮಜೀದ್ ದಾರಿಮಿ ಶುಭಹಾರೈಸಿದರು.ಶಾಸಕ ರಾಜೇಶ್ ನಾಯ್ಕ್ಉ ಳಿಪ್ಪಾಡಿಗುತ್ತು ಆಗಮಿಸಿ ಶುಭಕೋರಿದರು. ನಿವೃತ್ತ ಮುಖ್ಯಶಿಕ್ಷಕ ಜಯರಾಮ ಶೆಟ್ಟಿ ಕೊಡಂಗೆ, ಉದ್ಯಮಿ ಕೆ.ಪಿ.ಶೆಟ್ಟಿ ಬೆಂಜನಪದವು, ಗುತ್ತಿಗೆದಾರ ದಿವಾಕರ್ ಮಂಗಳೂರು, ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ ಮತ್ತಿತರರಿದ್ದರು. ಸಮಿತಿ ಸಂಚಾಲಕರಾದ ಸದಾನಂದ ಡಿ.ಶೆಟ್ಟಿ ಬೇಬಿ ಕುಂದರ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಕನಪಾಡಿ, ಇಬ್ರಾಹಿಂ ನವಾಜ್, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ವಾಗತಿಸಿದರು. ಕೋಶಾಧಿಕಾರಿ ಡಿ.ಚಂದ್ರಶೇಖರ ಭಂಡಾರಿ ಅಮ್ಮುಂಜೆ ವಂದಿಸಿದರು. ನಿವೃತ್ತ ಪ್ರಾಧ್ಯಾಪಕ ರಾಮಚಂದ್ರ ರಾವ್ ನಿರೂಪಿಸಿದರು.