ಹೊನ್ನಾಳಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ತಿಮ್ಮೇಶಪ್ಪ ಆರುಂಡಿ

| Published : Jun 21 2024, 01:09 AM IST

ಹೊನ್ನಾಳಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ತಿಮ್ಮೇಶಪ್ಪ ಆರುಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ ನೂತನ ಅಧ್ಯಕ್ಷರಾಗಿ ಕೆ.ತಿಮ್ಮೇಶಪ್ಪ ಆರುಂಡಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ, ಹೊನ್ನಾಳಿ

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ ನೂತನ ಅಧ್ಯಕ್ಷರಾಗಿ ಕೆ.ತಿಮ್ಮೇಶಪ್ಪ ಆರುಂಡಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಟಿ.ಜಿ.ರಮೇಶಗೌಡ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣಾಯಲ್ಲಿ ಕೆ.ತಿಮ್ಮೇಶಪ್ಪ ಆರುಂಡಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಾಲೂಕು ಸಹಕಾರಿ ಸಂಘಗಳ ಅಭಿವೃದ್ದಿ ಅಧಿಕಾರಿ ಕೆ.ಜಿ. ನವೀನ್ ಕುಮಾರ್ ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.

ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಡಿ.ಎಸ್. ಸುರೇಂದ್ರಗೌಡ ಅವರು ನೂತನ ಅಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ, ಅಭಿವಂದಿಸಿದರು.

ಬ್ಯಾಂಕ್ ಉಪಾಧ್ಯಕ್ಷ ಆರ್.ನಾಗಪ್ಪ, ನಿರ್ದೇಶಕರಾದ ರಮೇಶ್ ಗೌಡ ತರಗನಹಳ್ಳಿ, ಎ.ನಾಗೇಂದ್ರಪ್ಪ, ಎ.ಎಚ್. ಚಂದ್ರಪ್ಪ, ಎಂ.ಆರ್. ಹನುಮಂತಪ್ಪ ಎಚ್.ಪಿ. ವಿಜಯಕುಮಾರ್, ಮಮತ ರಮೇಶ್, ಸರೋಜಮ್ಮ ಸಿದ್ದಪ್ಪ, ಕೆ.ವಿ.ನಾಗರಾಜ್. ಎಂ.ಜಿ. ಬಸವರಾಜ್ಪ ಎಲ್.ಕೆ. ಚಂದ್ರಪ್ಪ, ಬ್ಯಾಂಕ್ ವ್ಯವಸ್ಥಾಪಕಿ ವಿಶಾಲಾಕ್ಷಿ ಹಾಗೂ ಬ್ಯಾಂಕ್ ಸಿಬ್ಬಂದಿ ಇದ್ದರು.

- - - -20ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕೆ. ತಿಮ್ಮೇಶಪ್ಪ ಅರುಂಡಿ ಅವರನ್ನು ನಿರ್ದೇಶಕರು ಅಭಿನಂದಿಸಿದರು.