ಸಾರಾಂಶ
ಕೇಂದ್ರ ಸರ್ಕಾರವು ಮಂಡಿಸಿದ ಆಯವ್ಯಯ ಶಾಸ್ತ್ರಕ್ಕೆಂಬಂತೆ ಮಂಡಿಸಿದ ಆಯವ್ಯಯದಂತಿದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ವ್ಯಂಗ್ಯವಾಡಿದ್ದಾರೆ.
ಮೈಸೂರು : ಕೇಂದ್ರ ಸರ್ಕಾರವು ಮಂಡಿಸಿದ ಆಯವ್ಯಯ ಶಾಸ್ತ್ರಕ್ಕೆಂಬಂತೆ ಮಂಡಿಸಿದ ಆಯವ್ಯಯದಂತಿದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ವ್ಯಂಗ್ಯವಾಡಿದ್ದಾರೆ.
ಸುದೀರ್ಘ ಹಾಗೂ ಭವಿಷ್ಯದ ಗುರಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಅದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯ ಸಾಕ್ಷಿಯಾಗಿದೆ. 7 ರಿಂದ 10 ಲಕ್ಷ ಆದಾಯ ಹೊಂದಿರುವವರಿಗೆ ಶೇ.10 ರಷ್ಟು ತೆರಿಗೆ ವಿಧಿಸಲಾಗಿದೆ. ಹಣಕಾಸು ಸಚಿವರ ಪ್ರಕಾರ, ಹೊಸ ಘೋಷಣೆಗಳಿಂದ 4 ಕೋಟಿ ಜನರು ಹೊಸ ತೆರಿಗೆ ವ್ಯವಸ್ಥೆಯಲ್ಲಿ 17500 ರೂ. ವರೆಗೆ ಪ್ರಯೋಜನ ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ಈ ಆದಾಯ ವ್ಯಾಪ್ತಿಯಲ್ಲಿ ಮಧ್ಯಮ ವರ್ಗದ ಮಂದಿಯೇ ಬಹುಪಾಲು ಇರುವುದರಿಂದ ಆ ವರ್ಗದ ಮೇಲೆ ಹೆಚ್ಚಿನ ಹೊರೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಮುನ್ನವೇ ಕರ್ನಾಟಕ ರಾಜ್ಯ ಸರ್ಕಾರವು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಕೇಂದ್ರದ ಈ ಯೋಜನೆ ಜನರ ದಿಕ್ಕು ಬದಲಿಸುವ ಹುನ್ನಾರವಾಗಿದೆ. ಆಯವ್ಯಯದಲ್ಲಿ ಆಂದ್ರಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ವಂಚನೆ ಎಸಲಾಗಿದೆ ಎಂದು ದೂರಿದ್ದಾರೆ.