ಕಬಡ್ಡಿ ಪಂದ್ಯ: ಆರ್.ಕೆ.ಬಾಯ್ಸ್ ಚಾಂಪಿಯನ್ಸ್

| Published : Jul 15 2025, 11:45 PM IST

ಸಾರಾಂಶ

ಮಾಗಡಿ: ಕೆಂಪೇಗೌಡ ಕೋಟೆಯ ಆವರಣದಲ್ಲಿ ಮಾಗಡಿಯ ಶ್ರೀಮಾನ್ ಫಿಟ್ನೆಸ್ ಆಯೋಜಿಸಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮಾಗಡಿಯ ಆರ್.ಕೆ.ಬಾಯ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಾಗಡಿ: ಕೆಂಪೇಗೌಡ ಕೋಟೆಯ ಆವರಣದಲ್ಲಿ ಮಾಗಡಿಯ ಶ್ರೀಮಾನ್ ಫಿಟ್ನೆಸ್ ಆಯೋಜಿಸಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮಾಗಡಿಯ ಆರ್.ಕೆ.ಬಾಯ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ತಂಡದ ಪ್ರೋತ್ಸಾಹಕ ಪುರಸಭೆ ಮಾಜಿ ಸದಸ್ಯ ರೂಪೇಶ್ ಕುಮಾರ್ ಮಾತನಾಡಿ, ಮಾಗಡಿ ಕಬಡ್ಡಿಗೆ ಹೆಸರುವಾಸಿಯಾದ ತಾಲೂಕಾಗಿದ್ದು, ರಾಜ್ಯಮಟ್ಟದ ಕ್ರೀಡಾಪಟುಗಳು ತಮ್ಮ ಕಬಡ್ಡಿ ಆಟದ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅದೇ ರೀತಿ ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟು ಜಯಂತ್ ತಂಡ ಪ್ರಥಮ ಸ್ಥಾನ ಪಡೆದಿದೆ. ಇಂದಿನ ಮಕ್ಕಳು ಮೊಬೈಲ್ ಗೇಮ್‌ನಲ್ಲಿ ತೊಡಗುವ ಬದಲು ಮೈದಾನದಲ್ಲಿ ಬಂದು ಆಟ ಆಡಬೇಕು ಎಂದು ತಿಳಿಸಿದರು.

ರಾಜ್ಯಮಟ್ಟದ ಕ್ರೀಡಾಪಟು ಜಯಂತ್ ಮಾತನಾಡಿ, ಕೋಟೆ ಮೈದಾನದಲ್ಲಿ ಭಾನುವಾರ ರಾಜ್ಯಮಟ್ಟದ ಕಬಡ್ಡಿ ಪಂದ್ಯದಲ್ಲಿ ರಾಜ್ಯದಿಂದ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಮಾಗಡಿಯ ಆರ್.ಕೆ. ಬಾಯ್ಸ್ ತಂಡ ಪ್ರಥಮ ಬಹುಮಾನ 41 ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಆರ್. ಕೆ. ಬಾಯ್ಸ್ ತಂಡದ ಕ್ರೀಡಾಪಟುಗಳಾದ ಜಗದೀಶ್, ಪುನೀತ್, ಹರೀಶ್, ರಾಕೇಶ್, ವೆಂಕಿ, ಜೀವನ್, ರಕ್ಷಿತ್, ಮುಖಂಡರಾದ ಕಸ್ತೂರಿ ಕಿರಣ್, ಚಿಕ್ಕಣ್ಣ, ಸತೀಶ್, ಕಲ್ಯಾ ಚಿದಾನಂದ್, ಗೋಪಿ ಇತರರು ಭಾಗವಹಿಸಿದ್ದರು.