ಸಾರಾಂಶ
ಮುಧೋಳ: ನಗರದ ಆರ್.ಎಂ.ಜಿ ಕಾಲೇಜಿನ ವಿದ್ಯಾರ್ಥಿನಿ ಬಾಲವ್ವ ಹುಚ್ಯಲ್ಲಪ್ಪಗೋಳ ರಾಜ್ಯ ಪದವಿ ಪೂರ್ವ ಕಾಲೇಜುಗಳ ಬಾಲಕಿಯರ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇತ್ತೀಚೆಗೆ ಮಂಡ್ಯದ ನಾಗಮಂಗಲದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ತಂಡದಲ್ಲಿ ಪ್ರಮುಖರ್ಯಡರ ಆಗಿ ಗೆಲುವಿಗೆ ಕಾರಣ ಳಾಗಿದ್ದಾಳೆಂದು ಕಾಲೇಜಿನ ಪ್ರಾಚಾರ್ಯ ಬಸವರಾಜ ಗಂಜಿಹಾಳ ಹಾಗೂ ದೈಹಿಕ ನಿರ್ದೇಶಕ ಬಿ.ಆರ್.ಬಾಡಗಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮುಧೋಳ
ನಗರದ ಆರ್.ಎಂ.ಜಿ ಕಾಲೇಜಿನ ವಿದ್ಯಾಥಿ೯ನಿ ಬಾಲವ್ವ ಹುಚ್ಯಲ್ಲಪ್ಪಗೋಳ ರಾಜ್ಯ ಪದವಿ ಪೂರ್ವ ಕಾಲೇಜುಗಳ ಬಾಲಕಿಯರ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇತ್ತೀಚೆಗೆ ಮಂಡ್ಯದ ನಾಗಮಂಗಲದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ತಂಡದಲ್ಲಿ ಪ್ರಮುಖರ್ಯಡರ ಆಗಿ ಗೆಲುವಿಗೆ ಕಾರಣ ಳಾಗಿದ್ದಾಳೆಂದು ಕಾಲೇಜಿನ ಪ್ರಾಚಾರ್ಯ ಬಸವರಾಜ ಗಂಜಿಹಾಳ ಹಾಗೂ ದೈಹಿಕ ನಿರ್ದೇಶಕ ಬಿ.ಆರ್.ಬಾಡಗಿ ತಿಳಿಸಿದ್ದಾರೆ.ಮಂಡ್ಯದಲ್ಲಿ ನಡೆದ ರಾಷ್ಟ್ರಮಟ್ಟದ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ಧ ತೀವ್ರ ಪೈಪೋಟಿ ನೀಡಿದ ಕರ್ನಾಟಕ ಬಾಲಕಿಯರ ತಂಡ ಅಂತಿಮವಾಗಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ರಾಜ್ಯ ತಂಡವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಬಾಲವ್ವ ತನ್ನ ಪ್ರದರ್ಶನದ ಮೂಲಕ ಖೆಲೋ ಇಂಡಿಯಾ ಬಾಲಕಿಯರ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದು ಇವರ ಕ್ರೀಡಾ ಪ್ರತಿಭೆಗೆ ಸಾಕ್ಷಿಯಾಗಿದೆ.
ವಿದ್ಯಾರ್ಥಿನಿ ಬಾಲವ್ವಳಿಗೆ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಉಪನಿರ್ದೇಶಕರು ಮತ್ತು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯಾಧ್ಯಕ್ಷ ಮಹೇಶ ಅಥಣಿ, ಶಾಲಾ ಕಾಲೇಜಿನ ಕಾರ್ಯಧ್ಯಕ್ಷ ಮಹಾಂತೇಶ ಶೆಟ್ಟರ, ಪ್ರಾಚಾರ್ಯ ಬಿ.ಎ.ಗಂಜಿಹಾಳ ಇತರರು ಅಭಿನಂದಿಸಿದ್ದಾರೆ.