ಟ್ರ್ಯಾಕ್ಟರ್‌ ಅಪಘಾತದಲ್ಲಿ ಕಬಡ್ಡಿ ಪಟು ಸಂತೋಷ್ ನಿಧನ

| Published : Nov 05 2023, 01:15 AM IST

ಟ್ರ್ಯಾಕ್ಟರ್‌ ಅಪಘಾತದಲ್ಲಿ ಕಬಡ್ಡಿ ಪಟು ಸಂತೋಷ್ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದಲ್ಲಿ ಕಬಡ್ಡಿ ತಂಡವನ್ನು ಕಟ್ಟಿ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದರು.

ಸೊರಬ: ರಸ್ತೆ ಅಪಘಾತದಲ್ಲಿ ತಾಲೂಕಿನ ಹುಲ್ತಿಕೊಪ್ಪ ಗ್ರಾಮದ ರಾಜ್ಯಮಟ್ಟದ ಕಬಡ್ಡಿ ಪಟು ಸಂತೋಷ್ ಸಿಳ್ಳೆ (25) ಮೃತಪಟ್ಟಿದ್ದಾರೆ. ಅವರಿಗೆ ತಂದೆ ಹಸೆಮನೆ ಚಂದ್ರಪ್ಪ, ತಾಯಿ ಕೆರಿಯಮ್ಮ, ತಮ್ಮ, ತಂಗಿ ಇದ್ದಾರೆ.

ನ.3ರಂದು ಟ್ರ್ಯಾಕ್ಟರ್‌ ಚಲಾಯಿಸುತ್ತಿದ್ದ ಸಂದರ್ಭ ಎದುರಿನಿಂದ ಬಂದ ಇನ್ನೊಂದು ಟ್ರ್ಯಾಕ್ಟರ್ ಗುದ್ದಿದೆ. ಪರಿಣಾಮ ಅಸ್ವಸ್ಥರಾಗಿದ್ದ ಸಂತೋಷ್‌ಗೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.

ಕಬಡ್ಡಿ ಕ್ರೀಡೆಯಲ್ಲಿ ತನ್ನದೇ ಆದ ಪಟ್ಟುಗಳನ್ನು ಹೊಂದಿದ್ದ ಮೃತ ಸಂತೋಷ್, ಗ್ರಾಮೀಣ ಮಟ್ಟದಿಂದ ರಾಜ್ಯಮಟ್ಟದವರೆಗೆ ಬೆಳೆದು ವಿಶೇಷ ಛಾಪು ಮೂಡಿಸಿದ್ದರು. ಅಭಿಮಾನಿ ಬಳಗವನ್ನು ಸಹ ಹೊಂದಿದ್ದರು. ಹುಲ್ತಿಕೊಪ್ಪ ಗ್ರಾಮದಲ್ಲಿ ಕಬಡ್ಡಿ ತಂಡವನ್ನು ಕಟ್ಟಿ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದರು.

ಕಬಡ್ಡಿ ಕ್ರೀಡಾಪಟು ಸಂತೋಷ್‌ ನಿಧನಕ್ಕೆ ಅಭಿಮಾನಿಗಳು, ಕ್ರೀಡಾಭಿಮಾನಿಗಳು, ವಿವಿಧ ಸಂಘ-ಸಂಸ್ಥೆಯವರು ಸಂತಾಪ ಸೂಚಿಸಿದ್ದಾರೆ.

- - - -೦4ಕೆಪಿಸೊರಬ೦2: ಸಂತೋಷ್ ಶಿಳ್ಳೆ