ಇಲ್ಲಿನ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಇದರ ಹಿಂದಿ ವಿಭಾಗದ ವತಿಯಿಂದ ಆಂತರಿಕ ಗುಣಮಟ್ಟ ಆಶ್ವಾಸನ ಪ್ರಕೋಷ್ಠ (ಐಕ್ಯೂಎಸಿ)ದ ಸಹಯೋಗದಲ್ಲಿ ಹಿಂದಿ ದಿವಸ ಸಮಾರಂಭವನ್ನು ಕಾಲೇಜಿನ ಎ.ವಿ. ಹಾಲ್‌ನಲ್ಲಿ ಆಯೋಜಿಸಲಾಯಿತು.
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಇದರ ಹಿಂದಿ ವಿಭಾಗದ ವತಿಯಿಂದ ಆಂತರಿಕ ಗುಣಮಟ್ಟ ಆಶ್ವಾಸನ ಪ್ರಕೋಷ್ಠ (ಐಕ್ಯೂಎಸಿ)ದ ಸಹಯೋಗದಲ್ಲಿ ಹಿಂದಿ ದಿವಸ ಸಮಾರಂಭವನ್ನು ಕಾಲೇಜಿನ ಎ.ವಿ. ಹಾಲ್‌ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜು (ಸ್ವಾಯತ್ತ) ಇದರ ಹಿಂದಿ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಹೆಗಡೆ ಮಾತನಾಡಿ, ಹಿಂದಿ ಸಾಹಿತ್ಯದಲ್ಲಿ ಕಬೀರದಾಸರ ಸಾಹಿತ್ಯದ ಪ್ರಾಸಂಗಿಕತೆ ಇಂದಿನ ಆಧುನಿಕ ಯುಗದಲ್ಲಿಯೂ ಅತ್ಯಂತ ಮಹತ್ವದ್ದಾಗಿದೆ. ಕಬೀರರ ಸಾಹಿತ್ಯದಲ್ಲಿ ಅಡಕವಾಗಿರುವ ಜೀವನಮೌಲ್ಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.ಜೀವನದಲ್ಲಿ ಪ್ರತಿಯೊಂದು ವಿಷಯವನ್ನೂ ಸ್ವತಃ ಅನುಭವದ ಮೂಲಕವೇ ಕಲಿಯಬೇಕೆಂದಿಲ್ಲ. ಕೆಲವೊಮ್ಮೆ ಹಿರಿಯರ ಅನುಭವ ಹಾಗೂ ಮಾರ್ಗದರ್ಶನವನ್ನು ಆಲಿಸುವುದರಿಂದಲೂ ಜೀವನಕ್ಕೆ ಅಮೂಲ್ಯವಾದ ಪಾಠಗಳನ್ನು ಕಲಿಯಬಹುದು ಎಂದು ಡಾ. ಹೆಗಡೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ವಿನಯಕುಮಾರ್ ಡಿ. ಮಾತನಾಡಿ, ಹಿಂದಿ ಭಾಷೆ ದೇಶದಾದ್ಯಂತ ಅತಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದ್ದು, ಸರಳ ಮತ್ತು ಸುಗಮವಾದ ಭಾಷೆಯಾಗಿದೆ ಎಂದು ಹೇಳಿದರು.
ಹಿಂದಿ ದಿವಸದ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿನಿ ಸಮೃದ್ಧಿ ನಿರೂಪಿಸಿ, ತೃತೀಯ ಬಿಬಿಎ ವಿದ್ಯಾರ್ಥಿನಿ ನಿಹಾರಿಕಾ ಹಾಗೂ ತೃತೀಯ ಬಿ.ಎಸ್ಸಿ ವಿದ್ಯಾರ್ಥಿ ಚಿನ್ಮಯ ಪ್ರಾರ್ಥನಾ ಗೀತೆ ಹಾಡಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಅಮೃತಾ ಸ್ವಾಗತಿಸಿ, ಪ್ರಥಮ ಬಿ.ಎ ವಿದ್ಯಾರ್ಥಿನಿ ದೀಕ್ಷಾ ಭಟ್ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಆನಂದ ರಾಯಮಾನೆ, ಡಾ. ಭೈರವಿ ಪಾಂಡ್ಯಾ ಹಾಗೂ ಜನೆಟ್ ಡಿಸೋಜಾ ಉಪಸ್ಥಿತರಿದ್ದರು.