ಸಾರಾಂಶ
ಮುಂಜಾನೆ 6 ಗಂಟೆಯಿಂದಲೇ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಜಾತ್ರೆಯಲ್ಲಿ ದೊಡ್ಡಮಾರಗೌಡನಹಳ್ಳಿ, ಮರಯ್ಯನಹುಂಡಿ ಮತ್ತು ದೊಡ್ಡಹಟ್ಟಿಹುಂಡಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ಕಾಡು ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ 2ನೇ ಸೋಮವಾರ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಜರುಗಿತು.ಮುಂಜಾನೆ 6 ಗಂಟೆಯಿಂದಲೇ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಜಾತ್ರೆಯಲ್ಲಿ ದೊಡ್ಡಮಾರಗೌಡನಹಳ್ಳಿ, ಮರಯ್ಯನಹುಂಡಿ ಮತ್ತು ದೊಡ್ಡಹಟ್ಟಿಹುಂಡಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಈ ವೇಳೆ ದೊಡ್ಡಮಾರಗೌಡನಹಳ್ಳಿಯ ಮುಖಂಡರಾದ ಬಿ. ಬಸವರಾಜು, ಬಸವನಾಯಕ, ಶಿವನಂಜೇಗೌಡ, ಬಿ. ನಾಗರಾಜು, ದೊಡ್ಡೇಗೌಡ, ಅಮಾಸನಾಯಕ, ಮರಯ್ಯನಹುಂಡಿ ಗ್ರಾಮದ ವೀರಭದ್ರ, ನಿಂಗರಾಜು, ಬಸವಣ್ಣ, ಮಹದೇವಪ್ಪ, ದೊಡ್ಡಹಟ್ಟಿಹುಂಡಿಯ ಪುಟ್ಟಸ್ವಾಮಿ, ಉದಯ್ ಕುಮಾರ್ ಮೊದಲಾದವರು ಇದ್ದರು.