ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಮೊಳಗಿನ ವಚನಗಳು

| Published : Mar 13 2025, 12:51 AM IST

ಸಾರಾಂಶ

ಬಸವಣ್ಣನವರ ''''ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ'''' ವಚನ ಇವತ್ತಿಗೂ ಪ್ರಸ್ತುತವಾಗಿದೆ. ಈ ವಚನವನ್ನು ಅರ್ಥಮಾಡಿಕೊಂಡರೆ ಸಾಕು ಮನುಷ್ಯ ತನ್ನ ಜೀವನದಲ್ಲಿ ಸುಧಾರಣೆ ಕಾಣಬಹುದು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಬಸವಾದಿ ಶರಣರು ರಚಿಸಿರುವ ವಚನಗಳು ಮೊಳಗಿದವು.ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಸಹಯೋಗದಲ್ಲಿ ಕದಳಿ ಮಹಿಳಾ ವೇದಿಕೆಯು ತನ್ನ ರಜತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ''''ವಚನಗಳಚಿತ್ರ ಕಾರಾಗೃಹದತ್ತ'''' ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅಮ್ಮ ರಾಮಚಂದ್ರ, ಕದಳಿ ಮಹಿಳಾ ವೇದಿಕೆಯ ಸುದರ್ಶಿನಿ ಚಂದ್ರಪ್ಪ, ಕುಸುಮಾ ಮೂರ್ತಿ ವಚನ ಗಾಯನ ಪ್ರಸ್ತುತಪಡಿಸಿದರು. ಪರಿಸರಪ್ರಿಯ ಶ್ರೀಕಂಠೇಶ್‌ ''''ಇಳೆ ನಿನ್ನ ದಾನ..ವಚನ ಹಾಡಿದರು. ಅಕ್ಬರ್‌ ಸಿಂಧುವಳ್ಳಿ ಸ್ಥಳದಲ್ಲಿಯೇ ಕಾರ್ಯಕ್ರಮ ಕುರಿತು ರಚಿಸಿದ ಕವನ ಓದಿದರು. ಪರಿಸರವಾದ ವಸಂತಕುಮಾರ್‌ ಮೈಸೂರು ಮಠ್‌ ಕಾರಾಗೃಹ ವಾಸಿಗಳಿಗೆ ಅನಾಚಾರ, ಅಪರಾಧ ವಿರುದ್ಧದ ಪ್ರಮಾಣವಚನ ಬೋಧಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಕಾರಾಗೃಹ ಅಧೀಕ್ಷಕಿ ದೀಪಾ ಮಾತನಾಡಿ, ಬಸವಣ್ಣನವರ ''''''''''''''''ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ'''''''''''''''' ವಚನ ಇವತ್ತಿಗೂ ಪ್ರಸ್ತುತವಾಗಿದೆ. ಈ ವಚನವನ್ನು ಅರ್ಥಮಾಡಿಕೊಂಡರೆ ಸಾಕು ಮನುಷ್ಯ ತನ್ನ ಜೀವನದಲ್ಲಿ ಸುಧಾರಣೆ ಕಾಣಬಹುದು ಎಂದರು.''''ಪರಿವರ್ತನೆಯ ಹಾದಿಯಲ್ಲಿ ವಚನಗಳು'''' ಕುರಿತು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ನಿವೃತ್ತ ಉಪನ್ಯಾಸಕ ಎಸ್‌.ಎಸ್‌. ರಮೇಶ್‌ ಉಪನ್ಯಾಸ ನೀಡಿ, ಸಮಸ್ಥಿತಿ, ಉನ್ನತಿ, ಅವನತಿ- ಈ ಮೂರು ಸ್ಥಿತಿಗಳಿವೆ. ಪ್ರಜ್ಞಾಪೂರ್ವಕವಾಗಿ ತಿದ್ದಿಕೊಂಡು ಸಾಗಿದರೆ ಒಳ್ಳೆಯ ವಿಚಾರಗಳನ್ನು ಕಲಿಯಬಹುದು. ವಿಕೃತ ಮನಸ್ಸಿನಿಂದ ದೂರ ಸರಿಯಬಹುದು. ಪ್ರತಿಯೊಬ್ಬರೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದು ಏಕಾಗ್ರತೆಯಿಂದ ಮಾತ್ರ ಸಾಧ್ಯ ಎಂದರು.ಶರಣರ ವಿಚಾರಗಳ ಮೂಲಕ ಅರಿವು, ವಿವೇಕ ಹೆಚ್ಚುತ್ತದೆ. ಅಹಂಕಾರ ದೂರವಾಗುತ್ತದೆ. ವಚನಗಳು ಸರಳ ಭಾಷೆಯಲ್ಲಿದ್ದು, ಅಮೂಲ್ಯ ವಿಚಾರಗಳನ್ನು ನೀಡುತ್ತವೆ ಎಂದು ಅವರು ಹೇಳಿದರು.ಇವತ್ತು ನೈತಿಕ ಮೌಲ್ಯಗಳು ಕುಸಿಯುತ್ತಿವೆ. ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಇದನ್ನೆಲ್ಲ ಬಿಡಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ನನಗೆ ಇತರರು ಮಾಡುವ ಕೆಡಕಿಗಿಂತ ನನಗೆ ನಾನೇ ಮಾಡಿಕೊಳ್ಳುವ ಕೆಡಕು ಹೆಚ್ಚು ಎಂಬುದನ್ನು ಅರಿಯಬೇಕು. ನಮ್ಮ ಉದ್ಧಾರ ನಮ್ಮಿಂದಲೇ ಎಂದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆಯ ಅದ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಮಾತನಾಡಿ, ಬಸವಣ್ಣನವರು ಸ್ತ್ರೀಯರಿಗೂ ಸಮಾನತೆ ನೀಡಿದರು. ಹೀಗಾಗಿ ವೇದಿಕೆಯು ಮಹಿಳೆಯರು ಮತ್ತು ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಯಾಗಿದ್ದರು. ಕಾರಾಗೃಹ ಅಧಿಕಾರಿಗಳಾದ ಶಿವಬಸಪ್ಪ, ಧರಣೇಶ್, ಚೇತನಾ, ಕದಳಿ ಮಹಿಳಾ ವೇದಿಕೆಯ ಸುಮಾ ಇದ್ದರು.ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್‌ ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು.ಸುಧಾ ಮೃತ್ಯುಂಜಯಪ್ಪ ಕಾರ್ಯಕ್ರಮ ನಿರೂಪಿಸಿದರು. ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ವಾಗ್ದೇವಿ ವಂದಿಸಿದರು.