ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಜ.20, 21 ಎರಡು ದಿನ, ಇಲ್ಲಿಯ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ್ ಸಭಾಭವನದಲ್ಲಿ ಜರುಗಲಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ತಿಳಿಸಿದರು.ಮಂಗಳವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು. ಜ.20 ರಂದು ಬೆಳಗ್ಗೆ 11ಕ್ಕೆ ಅಧ್ಯಯನ ಶಿಬಿರವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ, ರಮೇಶ ಆಸಂಗಿ, ಎಚ್.ಪಿ.ಸುಧಾಮದಾಸ್, ರಾಜು ಅಲಗೂರ, ಶರಣಪ್ಪ ಸುಣಗಾರ, ರಾಜಶೇಖರ ಯಡಹಳ್ಳಿ, ಹಾಸಿಂಪೀರ ವಾಲಿಕಾರ, ವಿಜಯನರಸಿಂಹ, ಸೂಲಿಕಂಟೆ ರಮೇಶ, ಎಸ್.ಎನ್. ಮಲ್ಲಪ್ಪ, ಎಸ್.ವಿಘ್ನೇಷ, ಸತ್ಯ ಭದ್ರಾವತಿ, ಬಸವರಾಜ ಕೌತಾಳ್, ಅಂಬಣ್ಣ ಅರೋಳಿಕರ್ ಆಗಮಿಸಲಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಮತ್ತು ಬೆಳವಣಿಗೆ ಮೊದಲ ಗೋಷ್ಠಿಯಲ್ಲಿ ಸಿ.ಕೆ.ಮಹೇಶ ವಿಷಯ ಮಂಡಿಸಲಿದ್ದಾರೆ. ಮಲ್ಲೇಶ್ ಸಜ್ಜನ ಅಧ್ಯಕ್ಷತೆ ವಹಿಸಲಿದ್ದು, ಅಶೋಕ ಚಲವಾದಿ ನಿರೂಪಿಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ನಡೆಯುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಾಧಕ-ಬಾಧಕಗಳು, ಗುರಿ ಮತ್ತು ಜವಾಬ್ದಾರಿಗಳು ವಿಷಯದ ಕುರಿತು ಹಿರೇಹಳ್ಳಿ ಮಲ್ಲಿಕಾರ್ಜುನ ವಿಷಯ ಮಂಡಿಸಲಿದ್ದಾರೆ. ಎಸ್.ಎನ್. ಬಳ್ಳಾರಿ ಅಧ್ಯಕ್ಷತೆ ವಹಿಸಲಿದ್ದು, ಗುರುರಾಜ ಸೊರಬ ನಿರೂಪಿಸಲಿದ್ದಾರೆ.ಜ.21 ರಂದು ಬೆಳಗ್ಗೆ 9ಕ್ಕೆ ನಾಲ್ಕನೇ ಗೋಷ್ಠಿ ಆರ್ಥಿಕ ತಜ್ಞರಾಗಿ ಅಂಬೇಡ್ಕರ್ ಪರಿಚಯ, ದಲಿತರ ಆರ್ಥಿಕ ಸಬಲೀಕರಣದ ಆಯಾಮಗಳು ಕುರಿತು ವಿಧಾನ ಪರಿಷತ್ ಸದಸ್ಯ ಎಚ್.ಪಿ.ಸುಧಾಮ್ ದಾಸ್ ವಿಷಯ ಮಂಡಿಸಲಿದ್ದಾರೆ. ಭೀಮಜ್ಯೋತಿ ಶ್ರೀನಿವಾಸ ಅಧ್ಯಕ್ಷತೆ, ಗಣೇಶ ಮೇತ್ರಿ ನಿರೂಪಿಸಲಿದ್ದು, ಕೆಲವರು ಪ್ರತಿಕ್ರಿಯೆ ವ್ಯಕ್ತಪಡಿಸಲಿದ್ದಾರೆ.
ಬೆಳಗ್ಗೆ 11.30ಕ್ಕೆ ಐದನೇ ಗೋಷ್ಠಿ ಪ್ರಸ್ತುತ ದಲಿತರ ಮುಂದಿರುವ ಸಾಮಾಜಿಕ ಮತ್ತು ರಾಜಕೀಯ ಸವಾಲುಗಳು ಕುರಿತು ಬಿ. ಗೋಪಾಲ್ ವಿಷಯ ಮಂಡಿಸಲಿದ್ದು, ಮರಿಶ್ ನಾಗಣ್ಣವರ ಅಧ್ಯಕ್ಷತೆ, ವಿನಾಯಕ ಗುಣಸಾಗರ್ ನಿರೂಪಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಪರಶುರಾಮ ದಿಂಡವಾರ, ಲಕ್ಷ್ಮಣ ಹಾಲ್ಯಾಳ, ಲಕ್ಷ್ಮಣ ಚಲವಾದಿ, ರಮೇಶ ಸಾಗರ, ಭೀಮಪ್ಪ ಮಾದರ, ಆಕಾಶ ಅಮೀನಪ್ಪಗೋಳ ಸೋಮು ಗಣಿ ಮತ್ತೀತರರು ಇದ್ದರು.