ಕಡೇಚೂರು: 5 ರಾಜ್ಯಗಳ ವಿಷಕಾರಿ ಕೆಮಿಕಲ್‌ ತ್ಯಾಜ್ಯ

| Published : Jul 03 2025, 12:32 AM IST

ಕಡೇಚೂರು: 5 ರಾಜ್ಯಗಳ ವಿಷಕಾರಿ ಕೆಮಿಕಲ್‌ ತ್ಯಾಜ್ಯ
Share this Article
  • FB
  • TW
  • Linkdin
  • Email

ಸಾರಾಂಶ

Kadechuru: Toxic chemical waste from 5 states

- ತ್ಯಾಜ್ಯ ಘಟಕದಿಂದ 10-15 ಕಿ. ಮೀ. ವರೆಗೂ ದುರ್ನಾತ । ವಿಷಗಾಳಿ, ತ್ಯಾಜ್ಯ ದುರ್ನಾತ: ಅನಾರೋಗ್ಯಕರ ವಾತಾವರಣ

- ಕನ್ನಡಪ್ರಭ ಸರಣಿ ವರದಿ ಭಾಗ : 86

ಆನಂದ.ಎಂ.ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ತ್ಯಾಜ್ಯ ಘಟಕಕ್ಕೆ 5 ರಾಜ್ಯಗಳಿಂದ ಕೆಮಿಕಲ್‌- ವಿಷಕಾರಿ ತ್ಯಾಜ್ಯ ಸಂಗ್ರಹಗೊಳ್ಳುತ್ತಿರುವುದರಿಂದ ಈ ಭಾಗದಲ್ಲಿ ಜನರಲ್ಲಿ ಹತ್ತು ಹಲವು ಅನಾರೋಗ್ಯಕರ ವಾತಾವರಣಕ್ಕೆ ಸಾಕ್ಷಿಯಾಗುತ್ತಿದೆ. ವೈಜ್ಞಾನಿಕ ವಿಲೇವಾರಿ ಮಾಡುವ ಹೆಸರಲ್ಲಿ ಷರತ್ತುಗಳ ಗಾಳಿಗೆ ತೂರಿ ಈ ಕಂಪನಿಗಳು ಕೆಲಸ ನಿರ್ವಹಿಸುತ್ತಿರುವುದರಿಂದ ವಯೋವೃದ್ಧರಿಂದ ಹಿಡಿದು ನವಜಾತ ಶಿಶುಗಳವರೆಗೂ ವಿವಿಧ ಕಾಯಿಲೆಗಳಿಗೆ ಕಾರಣಾಗುತ್ತಿದೆ. ಕೈಗಾರಿಕೆ ಸೃಷ್ಟಿ ನೆಪದಲ್ಲಿ ಈ ಭಾಗದ ಜನರಿಗೆ ಸರ್ಕಾರ ವಿಷವುಣಿಸುವ ಕೆಲಸ ಮಾಡುತ್ತಿದೆ ಅನ್ನೋ ಆತಂಕ- ಆಕ್ರೋಶ ಇಲ್ಲಿ ಮೂಡಿ ಬರುತ್ತಿದೆ.

ಕೋಟ್- 1: ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ 5 ರಾಜ್ಯಗಳ ರಾಸಾಯನಿಕ ತ್ಯಾಜ್ಯವನ್ನು ಹಾಕುತ್ತಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ್ದಾರೆ. ಇದರಿಂದ ನಮ್ಮ ಭಾಗಕ್ಕೆ ದೇಶದ ವಿವಿಧ ಮೂಲೆಗಳಿಂದ ಅತ್ಯಂತ ದುರ್ನಾತವಿರುವ ವಿಷಕಾರಿ ತ್ಯಾಜವು ಇಲ್ಲಿಗೆ ಬರುತ್ತಿದೆ. ಆದರೆ, ಆ ಕಂಪನಿಯವರು ಕರ್ನಾಟಕದ ವಿವಿಧ ಭಾಗಗಳಿಂದ ತ್ಯಾಜ್ಯ ಬರುತ್ತಿದೆ ಎಂದು ತಿಳಿಸುತ್ತಿದ್ದಾರೆ. ಆದರೂ ಇದರ ದುರ್ನಾತವು 10 ಕಿ.ಮೀ. ಕ್ಕಿಂತೂ ಹೆಚ್ಚು ಸುತ್ತಮುತ್ತಲಿನ ಪ್ರದೇಶಕ್ಕೆ ಹರಡುತ್ತಿದೆ. ಇಲ್ಲಿನ ಬಹುಪಾಲು ರಾಸಾಯನಿಕ ಕಂಪನಿಗಳು ಇಲ್ಲಿನ ಜನರ ಜೀವ ತೆಗೆಯುವ ಯಮಧೂತರಾಗಿ ಕಾರ್ಯನಿರ್ವಹಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಈ ಕೈಗಾರಿಕೆಗಳ ವಿರುದ್ಧ ಪರಿಸರವಾದಿಗಳು, ತಜ್ಞರು, ರಾಜಕೀಯ ಧುರೀಣರು, ಪ್ರಜ್ಞಾವಂತರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಪತ್ರ ಚಳವಳಿ ಜೊತೆ ಮುಂದಿನ ದಿನಗಳಲ್ಲಿ ರಸ್ತೆಗೆ ಇಳಿದು ಹೋರಾಟ ಮಾಡುತ್ತೇವೆ.

- ಪ್ರಕಾಶರೆಡ್ಡಿಗೌಡ, ಸೈದಾಪುರ. (2ವೈಡಿಆರ್6)ಕೋಟ್- 2.. ನಮ್ಮ ಕಡೇಚೂರು-ಬಾಡಿಯಾಳ ಗ್ರಾಮಗಳಲ್ಲಿ ಜವಳಿ, ತಂಪು ಪಾನೀಯ ಸೇರಿದಂತೆ ಸಾರ್ವಜನಿಕ ವಲಯದ ಕಂಪನಿಗಳು ಇಲ್ಲಿ ಬರುತ್ತವೆ, ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಈ ಕಂಪನಿಗಳಲ್ಲಿ ಕೈ ತುಂಬ ವೇತನ ಸಿಗುವ ಉದ್ಯೋಗ ಸಿಗುತ್ತದೆ ಎಂದು ರೈತರಿಗೆ ಹಗಲು ಕನಸು ಕಾಣುವಂತೆ ಮಾಡಿ ಭೂಮಿ ತೆಗೆದುಕೊಂಡು ಈಗ ಜನಸಾಮನ್ಯರಿಗೆ ವಿಷವುಣಿಸುತ್ತಿರುವ ಕಾರ್ಯ ಮಾಡುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ. ಇದಕ್ಕೆಲ್ಲಾ ಕಾರಣ ಜನರ ಬಗ್ಗೆ ಕಾಳಜಿ ಇಲ್ಲದ ಕೆಲ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳಿಂದಾಗಿ ನಮ್ಮಲ್ಲಿ ಈ ರಾಸಾಯನಿಕ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇದರಿಂದಾಗಿ ಇಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕರು ಹಲವು ರೀತಿ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

-ಆನಂದ, ಮುನಗಾಲ್. (2ವೈಡಿಆರ್‌7)

---

ಕೋಟ್- 3 : ಈ ನಮ್ಮ ಪ್ರದೇಶದಲ್ಲಿ ಸ್ಥಾಪಿಸಿದ ರಾಸಾಯನಿಕ ಕಂಪನಿಗಳು ನೆರೆಯ ತೆಲಾಂಗಣ ರಾಜ್ಯದಿಂದ ಹೊರದಬ್ಬಿದ ಪರಿಸರಕ್ಕೆ ಹಾನಿ ಮಾಡುವ, ಜನವಿರೋಧಿ ಕಂಪನಿಗಳಾಗಿವೆ. ಇಲ್ಲಿ ಈ ಕೈಗಾರಿಕೆಗಳು ಹೊರ ಹಾಕುತ್ತಿರುವ ವಿಷ ತ್ಯಾಜ್ಯವು ನಮ್ಮ ಭಾಗದ ಗಾಳಿ, ನೀರು ಮತ್ತು ಮಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ವಯೋವೃದ್ಧರು, ಮಹಿಳೆಯರು, ಮಕ್ಕಳು, ಗರ್ಭಿಣಿ ಮತ್ತು ನವಜಾತ ಶಿಶುಗಳ ಉಸಿರಾಟ ತೊಂದರೆ ಅನುಭವಿಸುತ್ತಿರುವುದು ಹೆಚ್ಚಾಗಿದೆ. ಆದರಿಂದ, ಸೈದಾಪುರ ವಲಯದ ಸರ್ವ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುವುದು ಅವಶ್ಯಕವಾಗಿದೆ.

- ಬಸವರಾಜ ಕಾವಲಿ, ಶೆಟ್ಟಿಹಳ್ಳಿ. (2ವೈಡಿಆರ್‌8)

-

2ವೈಡಿಆರ್‌5 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.