ಹೊಸಹಳ್ಳಿಯಲ್ಲಿ ಶ್ರೀಬಿಸಿಲು ಮಾರಮ್ಮ ದೇಗುಲದಲ್ಲಿ ಕಡ್ಲೆಪುರಿ ಪರಷೆ

| Published : Nov 14 2025, 01:30 AM IST

ಹೊಸಹಳ್ಳಿಯಲ್ಲಿ ಶ್ರೀಬಿಸಿಲು ಮಾರಮ್ಮ ದೇಗುಲದಲ್ಲಿ ಕಡ್ಲೆಪುರಿ ಪರಷೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದ ಹೊಸಹಳ್ಳಿ ರಾಮನಹಳ್ಳಿ ವೃತ್ತದಲ್ಲಿರುವ ಶ್ರೀಬಿಸಿಲು ಮಾರಮ್ಮ ದೇವಾಲಯ ಆವರಣದಲ್ಲಿ ಯಜಮಾನರು ಮತ್ತು ಗ್ರಾಮಸ್ಥರು ಆಯೋಜಿಸಿದ್ದ ಕಾರ್ತಿಕ ಮಾಸ ಪ್ರಯುಕ್ತ ಕಡ್ಲೆಪುರಿ ಪರಿಷೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿರುವ ಹೊಸಹಳ್ಳಿ-ರಾಮನಹಳ್ಳಿ ವೃತ್ತದಲ್ಲಿರುವ ಶ್ರೀಬಿಸಿಲು ಮಾರಮ್ಮ ದೇವಾಲಯ ಆವರಣದಲ್ಲಿ ಯಜಮಾನರು ಮತ್ತು ಗ್ರಾಮಸ್ಥರು ಆಯೋಜಿಸಿದ್ದ ಕಾರ್ತಿಕ ಮಾಸ ಪ್ರಯುಕ್ತ ಕಡ್ಲೆಪುರಿ ಪರಷೆ ಯಶಸ್ಸಿಯಾಗಿ ನಡೆಯಿತು.

ಗ್ರಾಮದಲ್ಲಿರುವ ಶ್ರೀಬಿಸಿಲು ಮಾರಮ್ಮ ದೇವಿಗೆ ಅದ್ಧೂರಿಯಾಗಿ ವಿವಿಧ ಹೂಗಳಿಂದ ಅಲಂಕಾರ ಮಾಡಿ, ಪೂಜಾ ಕೈಂಕರ್ಯ ನಡೆಸಿ, ದೇವರ ಬಸವಪ್ಪನಿಗೆ ಅಲಂಕಾರ ಮಾಡಿ ಪಂಜಿನ ಸೇವೆ ಮೂಲಕ ಪೂಜೆ ಮಾಡಲಾಯಿತು.

ಸುಮಾರು ೩೦ ಮೂಟೆ ಕಡ್ಲೆಪುರಿ ಸುರಿದು ರಾಶಿ ಮಾಡಿ, ರಾಶಿ ಪೂಜೆ ನೆರವೇರಿಸಲಾಯಿತು. ನೆರೆದಿದ್ದ ಭಕ್ತರು ಶ್ರೀಮಾದೇಶ್ವರ ಮತ್ತು ಶ್ರೀಮಾರಮ್ಮ ದೇವರುಗಳಿಗೆ ಘೊಷಣೆ ಕೂಗಿದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತ ಸಮೂಹಕ್ಕೆ ಪಂಚಾಮೃತ ವಿನಿಯೋಗದೊಂದಿಗೆ ಕಡ್ಲೆಪುರಿ ಪರಷೆ ನಡೆಸಿ, ವಿತರಣೆ ಮಾಡಲಾಯಿತು. ಹೊಸಹಳ್ಳಿ ಮತ್ತು ರಾಮನಹಳ್ಳಿ ಯಜಮಾನರು-ಗ್ರಾಮದ ಮುಖಂಡರು ಹಾಜರಿದ್ದರು.

ನ.15, 16 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಕೆ.ಎಂ.ದೊಡ್ಡಿ:

ದಿ.ಡಿ.ಎಂ.ಮಂಜೇಗೌಡರ ಸ್ಮರಣಾರ್ಥ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.15ಮತ್ತು 16 ರಂದು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ 14ನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.

ಗ್ರಾಮೀಣಾ ಕ್ರೀಡೆಗಳ ತವರೂರು ದೊಡ್ಡರಸಿನಕೆರೆ ಗ್ರಾಮದ ಶ್ರೀಕಾಳಿಕಾಂಬ ಯುವ ಕ್ರೀಡಾ ಬಳಗದ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ಪ್ರೌಢ ಶಾಲೆ ಅವರಣದಲ್ಲಿ ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.

ಪಂದ್ಯಾವಳಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 30 ಸಾವಿರ ರು. ನಗದು, ದ್ವಿತೀಯ 20 ಸಾವಿರ ರು., ತೃತೀಯ 10 ಸಾವಿರ ರು. ನಗದು ಹಾಗೂ ಸಮಾಧಾನಕರ ಬಹುಮಾನ 7.500 ರು. ನೀಡಲಾಗುವುದು.

ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಮಾನ ಅಂತಿಮ ತೀರ್ಮಾನವಾಗಿದ್ದು, ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ, ತಂಡದ ಆಟಗಾರರೆಲ್ಲರು ಒಂದೇ ಗ್ರಾಮದವರಾಗಿರಬೇಕು. ಪ್ರತಿಯೊಬ್ಬ ಆಟಗಾರರು ಸ್ವಂತ ಗ್ರಾಮದವರೆಂದು ಗುರಿತಿಸಲ್ಪಡುವ ಗುರುತಿನ ಚೀಟಿ (ಎಲೆಕ್ಷನ್ ಕಾರ್ಡ್, ಆಧಾರ್ ಕಾರ್ಡ್, ಡಿ.ಎಲ್., ಪಾನ್ ಕಾನ್, ಜಾಬ್‌ ಕಾರ್ಡ್) ಕಡ್ಡಾಯವಾಗಿರಬೇಕು. ತರದೇ ಇದ್ದಲ್ಲಿ ಆಟಗಾರರಿಗೆ ಪ್ರವೇಶವಿಲ್ಲ.

ಪ್ರತಿ ತಂಡಗಳಿಗೆ ಊಟ-ವಸತಿ ವ್ಯವಸ್ಥೆ, ರಾತ್ರಿ ಬಂದ ತಂಡಗಳಿಗೆ ಮಾತ್ರ ಪ್ರವೇಶವಿದೆ. ಹೆಚ್ಚಿನ ಮಾಹಿತಿಗೆ ಮೊ-8123750342, ಮೊ-9035906040, ಮೊ-9916718066, ಮೊ-9886381010 ಸಂಪರ್ಕಿಸಬಹುದು.