ಸಾರಾಂಶ
ರಬಕವಿ-ಬನಹಟ್ಟಿ: ಅಮೃತ ಮಹೋತ್ಸವ ಕಂಡಿರುವ ಶ್ರೀ ಕಾಡಸಿದ್ಧೇಶ್ವರ ವಿದ್ಯುತ್ ಚಾಲಿತ ಮಗ್ಗಗಳ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ರಾಜು ಅಂಬಲಿ ಬಣ ಗೆಲುವು ಸಾಧಿಸಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅಮೃತ ಮಹೋತ್ಸವ ಕಂಡಿರುವ ಶ್ರೀ ಕಾಡಸಿದ್ಧೇಶ್ವರ ವಿದ್ಯುತ್ ಚಾಲಿತ ಮಗ್ಗಗಳ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ರಾಜು ಅಂಬಲಿ ಬಣ ಗೆಲುವು ಸಾಧಿಸಿದೆ.ಒಟ್ಟು ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಾಜು ಅಂಬಲಿ ಗುಂಪಿನ ಹಾಗೂ ಶ್ರೀನಿವಾಸ ಹಳ್ಯಾಳ ಬಣದ ೩ ಸದಸ್ಯರು ಗೆಲುವು ಸಾಧಿಸಿದರು.
ಸಾಮಾನ್ಯ ಕ್ಷೇತ್ರದಿಂದ ಅಶೋಕ ಬಾಣಕಾರ, ಶಂಕರಯ್ಯ ಕಾಡದೇವರ, ಈರಪ್ಪ ಬರಗಲ್, ಶಂಕರ ಕೆಸರಗೊಪ, ಚನಮಲ್ಲಪ್ಪ ಬೀಳಗಿ, ಶೇಖರ ಹಕ್ಕಲದಡ್ಡಿ, ಶಶಿಧರ ಬೀಳಗಿ, ಹಿಂದುಳಿದ ವರ್ಗ ಅ ದಿಂದ ಮೋಹನ ಬೀಳಗಿ, ಹಿಂದುಳಿದ ವರ್ಗ ಬ ದಿಂದ ಆನಂದ ರೇವಣಸಿದ್ದಯ್ಯಗೋಳ, ಮಹಿಳಾ ವಿಭಾಗದಿಂದ ಅಶ್ವಿನಿ ಈಶ್ವರ ಅಂಬಲಿ, ಮಂಜುಳಾ ರಮೇಶ ಮಂಡಿ, ಪರಿಶಿಷ್ಟ ಜಾತಿಯಿಂದ ವಿಲಾಸ ಪೂಜಾರಿ ಗೆಲುವು ಸಾಧಿಸಿದ್ದಾರೆಂದು ಚುನಾವಣಾಧಿಕಾರಿ ಟಿ.ಎಂ. ಮಾಳಿ ತಿಳಿಸಿದರು.ರಾಜು ಅಂಬಲಿ, ಮಲ್ಲು ಬಾಣಕಾರ, ರಾಜು ಕೊಕಟನೂರ, ಕುಮಾರ ಕದಂ, ಪ್ರವೀಣ ಕೋಲಾರ, ರಾಜು ಭದ್ರನ್ನವರ, ಚಂದ್ರು ಕುಲಗೋಡ, ಶಶಿ ಕುಳ್ಳಿ, ಅಜಯ ಬಾಣಕಾರ, ಬಸವರಾಜ ಮೋಟಗಿ, ಷಣ್ಮುಖ ಬಾಡಗಂಡಿ, ಬಸು ಬರಗಲ್ ಸೇರಿದಂತೆ ಅನೇಕರಿದ್ದರು.
ಮತ ಎಣಿಕೆ: ನ್ಯಾಯಾಲಯ ಮೆಟ್ಟಲೇರಿದ್ದ ಸೊಸೈಟಿಯ ಮತ ಎಣಿಕೆ ಕಾರ್ಯ ಎರಡುವರೆ ತಿಂಗಳಷ್ಟು ವಿಳಂಬವಾಗಿತ್ತು. ತಾಲೂಕಿನಲ್ಲಿಯೇ ಚುನಾವಣೆ ನಂತರದ ಮತ ಎಣಿಕೆಯಲ್ಲಿ ಕೊನೆಯದಾಗಿ ಉಳಿದಿದ್ದ ಸೊಸೈಟಿಗೆ ಕೊನೆಗೂ ಶನಿವಾರ ಮತ ಎಣಿಕೆ ನಡೆಯಿತು.