ಚಿಕ್ಕಮಗಳೂರುಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಮಳೆರಾಯನನ್ನು ಒಲಿಸಿಕೊಳ್ಳಲು ಗ್ರಾಮದ ಜನರು ಸಂಪ್ರದಾಯದಂತೆ ಕಪ್ಪೆಗಳ ಮದುವೆ ಮಾಡಿಸಿ, ಇಡೀ ಊರಿನಲ್ಲಿ ಮೆರವಣಿಗೆ ನಡೆಸಿದ ವಿಶಿಷ್ಟ ಘಟನೆ ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲೇಗೌಡನ ಕೊಪ್ಪಲು (ಎನ್.ಜಿ. ಕೊಪ್ಪಲು) ಗ್ರಾಮದಲ್ಲಿ ಭಾನುವಾರ ನಡೆಯಿತು.

ಗಂಡು-ಹೆಣ್ಣು ಕಪ್ಪೆಗೆ ಸಂಪ್ರದಾಯಬದ್ಧ ಮದುವೆ । 200 ರಾಗಿ ಮುದ್ದೆ, ಕೋಳಿ ಸಾರು ಭೋಜನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಮಳೆರಾಯನನ್ನು ಒಲಿಸಿಕೊಳ್ಳಲು ಗ್ರಾಮದ ಜನರು ಸಂಪ್ರದಾಯದಂತೆ ಕಪ್ಪೆಗಳ ಮದುವೆ ಮಾಡಿಸಿ, ಇಡೀ ಊರಿನಲ್ಲಿ ಮೆರವಣಿಗೆ ನಡೆಸಿದ ವಿಶಿಷ್ಟ ಘಟನೆ ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲೇಗೌಡನ ಕೊಪ್ಪಲು (ಎನ್.ಜಿ. ಕೊಪ್ಪಲು) ಗ್ರಾಮದಲ್ಲಿ ಭಾನುವಾರ ನಡೆಯಿತು.

ಗ್ರಾಮದ ಸೇವಾಲಾಲ್ ಸಮಿತಿಯಿಂದ ನಡೆದ ಈ ವಿಶಿಷ್ಟ ಆಚರಣೆಯಲ್ಲಿ ಮೂರು ಕಪ್ಪೆಗಳನ್ನು ಬಳಸಿಕೊಳ್ಳಲಾಗಿತ್ತು. ಗ್ರಾಮದ ಕರಿಯಮ್ಮದೇವಿ ದೇವಸ್ಥಾನದ ಬಳಿ ಕಪ್ಪೆಗಳನ್ನು ಇರಿಸಿ, ಅವುಗಳಲ್ಲಿ ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಕಪ್ಪೆಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಲಾಯಿತು. ಮೂರನೇ ಕಪ್ಪೆಯನ್ನು ಮಳೆರಾಯನ ಸ್ವರೂಪವೆಂದು ಭಾವಿಸಿ, ಅದಕ್ಕೆ ಕೆಂಚರಾಯ ಎಂದು ನಾಮಕರಣ ಮಾಡಲಾಯಿತು.ಮನೆಮನೆಗೆ ಕಪ್ಪೆಗಳ ಮೆರವಣಿಗೆ:ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಿದ ಬಳಿಕ ಕಪ್ಪೆಗಳನ್ನು ಕೋಲಿಗೆ ಕಟ್ಟಿ ಗ್ರಾಮದ ಪ್ರತಿ ಮನೆಗೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಗ್ರಾಮಸ್ಥರು ರಾಗಿ ಹಿಟ್ಟು, ದವಸ ಧಾನ್ಯ ಹಾಗೂ ಕಾಣಿಕೆಗಳನ್ನು ನೀಡಿ ಮಳೆಗಾಗಿ ಪ್ರಾರ್ಥಿಸಿದರು. ಮನೆಮನೆಗಳಿಂದ ಸಂಗ್ರಹಿಸಿದ ಧಾನ್ಯವನ್ನು ದೇವಸ್ಥಾನಕ್ಕೆ ತಂದು, ಮತ್ತಷ್ಟು ಧಾನ್ಯಗಳನ್ನು ಸೇರಿಸಿ ಸಿದ್ಧಪಡಿಸಿದ ಪ್ರಸಾದವನ್ನು ಮೊದಲು ದೇವರಿಗೆ ನೈವೇದ್ಯ ಅರ್ಪಿಸಿ ಬಳಿಕ ಕಪ್ಪೆಗಳಿಗೂ ನೈವೇದ್ಯ ಮಾಡಲಾಯಿತು.200 ರಾಗಿ ಮುದ್ದೆ, ಕೋಳಿ ಸಾರು ಭೋಜನ:ಕಪ್ಪೆಗಳ ಮದುವೆ ಅಂಗವಾಗಿ ಸುಮಾರು 200 ರಾಗಿ ಮುದ್ದೆಗಳನ್ನು ಹಾಗೂ 40ರಿಂದ 50 ಕೋಳಿಗಳನ್ನು ಬಳಸಿ ಚಿಕನ್ ಸಾರು ಸಿದ್ಧಪಡಿಸಲಾಯಿತು. ಬಳಿಕ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು.

ಮುಖಂಡ ಕೃಷ್ಣನಾಯಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಂಡ ದಿನೇಶ್, ಗ್ರಾಮಸ್ಥರಾದ ರಮೇಶ್ ನಾಯಕ, ಸಕ್ರ ನಾಯ್ಕ, ಬಾಲಾಜಿ ನಾಯ್ಕ, ಲೋಕೇಶ್ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಿರೀಶ್ ನಾಯ್ಕ, ತೆಲುಗು ಗೌಡ ಸಮಾಜದ ಮುಖಂಡರು, ಮಲ್ಲೇಶಪ್ಪ, ಚಿಕ್ಕಣ್ಣ, ಪರಮೇಶ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.....ಬಾಕ್ಸ್....

ಕಪ್ಪೆ ಮದುವೆ ಬಳಿಕ ಮಳೆ ಮುನ್ಸೂಚನೆ

ಮಳೆಯ ಕೊರತೆಯಾಗಿ ಬರ ಪರಿಸ್ಥಿತಿ ಉಂಟಾಗುವ ವರ್ಷಗಳಲ್ಲಿ ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬುದು ಗ್ರಾಮದ ಜನರ ಬಹು ಹಿಂದಿನ ನಂಬಿಕೆ. ಇದೇ ನಂಬಿಕೆಯೊಂದಿಗೆ ಈ ಆಚರಣೆ ನಡೆಸಲಾಗಿದೆ. ಭಾನುವಾರ ಕಪ್ಪೆಗಳ ಮದುವೆ ಹಾಗೂ ಮೆರವಣಿಗೆ ನಡೆದ ಬಳಿಕ ವಾತಾವರಣದಲ್ಲಿ ಬದಲಾವಣೆ ಕಂಡುಬಂದಿದೆ. ಮಳೆಯಾಗುವ ಸೂಚನೆಗಳು ಗೋಚರಿಸುತ್ತಿವೆ ಎಂದು ಗ್ರಾಮದ ಮುಖಂಡ ಮಲ್ಲೇಶಪ್ಪ ''''''''ಕನ್ನಡಪ್ರಭ''''''''ಕ್ಕೆ ತಿಳಿಸಿದರು.

...ಕೋಟ್ ....

ಮಳೆ ಯಿಲ್ಲದೆ ಒಣಗುತ್ತಿವೆ ಬೆಳೆ‌

ಕೊಳವೆ ಬಾವಿಗಳಲ್ಲಿ ನೀರಿನ‌ಮಟ್ಟ ಕುಸಿಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಪೂರ್ವಜರು ಕಪ್ಪೆಗಳ‌ ಮದುವೆ ಮಾಡಿ‌ ಮಳೆರಾಯನಿಗೆ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಇದೇ ರೀತಿ ಭಾನುವಾರವೂ ಕಪ್ಪೆ‌ಮದುವೆ‌ಮಾಡಿ ಮಳೆಗೆ ಪ್ರಾರ್ಥನೆ ಮಾಡಿದ್ದೇವೆ. ಮಳೆರಾಯ ಕೃಪೆ ತೋರಲಿದ್ದಾನೆ ಎಂಬ ಆಶಾ ಭಾವನೆ ಇದೆ.- ಜಿಗಣೆಹಳ್ಳಿ ನೀಲಕಂಠಪ್ಪ,‌ ಕಡೂರು ಪಿಎಲ್ ಡಿ ನಿರ್ದೇಶಕ (ಪೋಟೋ ಇದೆ)