ಕಲಾವಿದರನ್ನು ಪ್ರೋತ್ಸಾಹಿಸುವ ಹೃದಯವಂತಿಕೆ ಕಡೂರು ಜನತೆಗಿದೆ

| Published : Oct 01 2024, 01:15 AM IST

ಕಲಾವಿದರನ್ನು ಪ್ರೋತ್ಸಾಹಿಸುವ ಹೃದಯವಂತಿಕೆ ಕಡೂರು ಜನತೆಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಹಿಂದಿನಿಂದಲೂ ಕಲಾವಿದರನ್ನು ಪ್ರೋತ್ಸಾಹಿಸಿ, ಪೋಷಿಸುವ ಹೃದಯವಂತಿಕೆ ಕಡೂರು ಜನತೆಗೆ ಇದೆ ಎಂದು ಪುರಸಭೆ ಹಿರಿಯ ಸದಸ್ಯ ಈರಳ್ಳಿ ರಮೇಶ್ ಹೇಳಿದರು.

- ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಗಣೇಶ ಪೆಂಡಾಲ್‍ನಲ್ಲಿ ನಡೆದ ನಗೆಹಬ್ಬದಲ್ಲಿ ಈರಳ್ಳಿ ರಮೇಶ್

ಕನ್ನಡಪ್ರಭ ವಾರ್ತೆ ಕಡೂರು

ಹಿಂದಿನಿಂದಲೂ ಕಲಾವಿದರನ್ನು ಪ್ರೋತ್ಸಾಹಿಸಿ, ಪೋಷಿಸುವ ಹೃದಯವಂತಿಕೆ ಕಡೂರು ಜನತೆಗೆ ಇದೆ ಎಂದು ಪುರಸಭೆ ಹಿರಿಯ ಸದಸ್ಯ ಈರಳ್ಳಿ ರಮೇಶ್ ಹೇಳಿದರು.

ಪಟ್ಟಣದ ಸಾರ್ವಜನಿಕ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಗಣೇಶ ಪೆಂಡಾಲ್‍ನಲ್ಲಿ ನಡೆದ ನಗೆಹಬ್ಬದಲ್ಲಿ ಕಿರುತೆರೆ ಕಾಮಿಡಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಈ ಹಿಂದೆ ರಂಗಭೂಮಿ, ಸಿನಿಮಾ ಕಲಾವಿದರು ಸೇರಿದಂತೆ ಡಾ. ರಾಜಕುಮಾರ್ ಅವರನ್ನು ಕಡೂರು ಜನತೆ ಕರೆಸಿ ಗೌರವಿಸಿ, ಅವರ ಕಲೆಯನ್ನು ಪ್ರೋತ್ಸಾಹಿಸಿತ್ತು. ಅದೇ ರೀತಿ ಈಗಲೂ ಸಹ ಶ್ರೀ ಗಣಪತಿ ಪೆಂಡಾಲ್‍ನಲ್ಲಿ ಪ್ರತಿವರ್ಷ ನೂರಾರು ಕಲಾವಿದರನ್ನು ಕರೆಸಿ ಅವರಿಂದ ನಗೆಹಬ್ಬ, ನೃತ್ಯ, ಹಾಡು, ಸಂಗೀತ, ನಾಟಕ, ರೂಪಕಗಳನ್ನು ನಡೆಸಿ ಕಲಾವಿದರನ್ನು ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.

ಕಲಾವಿದರನ್ನು ಸಿನಿಮಾಗಳಲ್ಲಿ ನೋಡುವುದಕ್ಕಿಂತ ನೇರವಾಗಿ ಕಂಡರೆ ಆಗುವ ಸಂತೋಷವೇ ಬೇರೆ. ಕಲಾವಿದರಿಗೆ ಜಾತಿ, ಧರ್ಮಗಳಿಲ್ಲ. ಎಲ್ಲರನ್ನು ನಗಿಸಿ ಸಂತೋಷಪಡಿಸುವುದು ಅವರ ಕರ್ತವ್ಯ ಎಂದರು.ಕೇದಾರನಾಥ ಕುರಿ ಫಾರಂ ಚಲನಚಿತ್ರದ ನಾಯಕ, ನಟ ಮಡೆನೂರು ಮನು ನಟಿಸಿರುವ ಕನ್ನಡ ಚಿತ್ರ ಕಳೆದ ವಾರ ರಾಜ್ಯದಾದ್ಯಂತ ಬಿಡುಗಡೆ ಯಾಗಿದ್ದು, ಹೊಸ ಕಲಾವಿದರು ಬೆಳೆಯಬೇಕೆಂಬುದು ನಮ್ಮೆಲ್ಲರ ಆಸೆ-ಆಕಾಂಕ್ಷೆ. ಮಡೆನೂರು ಮನು ಅವರ ಚಿತ್ರ ಯಶಸ್ವಿಯಾಗಲಿ ಎಂದು ಕಡೂರು ಕಾಳಿಕಾಂಬ ವೀರಭದ್ರೇಶ್ವರ ಸ್ವ-ಸಹಾಯ ಸಂಘದ ಪರವಾಗಿ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಕಿರುತೆರೆ ಕಾಮಿಡಿ ಕಿಲಾಡಿಗಳಾದ ಜಗ್ಗಪ್ಪ, ಸುಷ್ಮಾ ಜಗ್ಗಪ್ಪ, ಮಡೆನೂರು ಮನು, ಸೂರ್ಯ, ಸದಾನಂದ, ಮಿಂಚು ಮತ್ತು ಗಿಲ್ಲಿನಟ ಇವರು ನಡೆಸಿಕೊಟ್ಟ ನಗೆ ಹಬ್ಬ ವೀಕ್ಷಿಸಿದ ಜನರು ನಗೆಗಡಲಿನಲ್ಲಿ ತೇಲಿದರು.

ಶ್ರೀ ಕ್ಷೇತ್ರ ಖಂಡಗದಳ್ಳಿ ಶ್ರೀ ಸೋಮೆಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಕೆ.ಬಿ. ಸೋಮೇಶ್, ಡಾ. ಗುರುಮೂರ್ತಿ, ಗಣಪತಿ ಸಮಿತಿ ಅಧ್ಯಕ್ಷ ಕೆ.ಎಂ. ನಾಗರಾಜು, ಕೆ.ಜಿ. ಶ್ರೀನಿವಾಸ್‍ಮೂರ್ತಿ, ಎನ್.ಎಚ್. ನಂಜುಂಡಸ್ವಾಮಿ, ಲೋಕೆಶ್ವರ್, ಚಂದ್ರಪ್ಪ, ಶ್ರೀಕಾಳಿಕಾಂಬ ಸಂಘದ ಸದಸ್ಯರಾದ ದೇವರಕುರಿ ಚೇತನ್, ಈರಳ್ಳಿ ತಿಮ್ಮಯ್ಯ, ಕೋಳಿ ಪಾಪಚ್ಚಿ, ನಾಗರಾಜ್, ಧರ್ಮವೀರಗೌಡ, ಮಂಜುನಾಥ್ ಮತ್ತಿತರರು ಇದ್ದರು.

-29ಕೆಕೆಡಿಯು2:

ಕಡೂರು ಗಣಪತಿ ಪೆಂಡಲ್‍ನಲ್ಲಿ ಕಾಮಿಡಿ ಕಿಲಾಡಿಗಳನ್ನು ಶ್ರೀ ಕಾಳಿಕಂಬ ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಗಣಪತಿ ಸಮಿತಿಯವರು ಸನ್ಮಾನಿಸಿ ಗೌರವಿಸಿದರು.