ಕಂದಾಯ ಇಲಾಖೆ ಕಡೂರು ತಾಲೂಕು ಕಚೇರಿ 2025ರ ಜನವರಿಯಿಂದ ಡಿಸೆಂಬರ್ ಅಂತ್ಯಕ್ಕೆ ಪ್ರಗತಿ ಪರಿಶೀಲನೆ ಮಾಹಿತಿ ನೀಡಲಾಗಿದೆ ಎಂದು ತಹಸೀಲ್ದಾರ್ ಸಿ. ಎಸ್.ಪೂರ್ಣಿಮಾ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಕಡೂರು
ಕಂದಾಯ ಇಲಾಖೆ ಕಡೂರು ತಾಲೂಕು ಕಚೇರಿ 2025ರ ಜನವರಿಯಿಂದ ಡಿಸೆಂಬರ್ ಅಂತ್ಯಕ್ಕೆ ಪ್ರಗತಿ ಪರಿಶೀಲನೆ ಮಾಹಿತಿ ನೀಡಲಾಗಿದೆ ಎಂದು ತಹಸೀಲ್ದಾರ್ ಸಿ. ಎಸ್.ಪೂರ್ಣಿಮಾ ತಿಳಿಸಿದರು. ಸರ್ಕಾರದ ಮಹತ್ವದ ಇ-ಆಫೀಸ್ ಯೋಜನೆ ಜನರಿಗೆ ನಿಗಧಿತ ಸಮಯದಲ್ಲಿ ಸೇವೆ, ಅರ್ಜಿ ಯಾರ ಬಳಿ ಇದೆ ಎಂಬುದರ ನಿಖರ ಮಾಹಿತಿ ನೀಡುವ ಉದ್ದೇಶದಿಂದ ಸ್ಥಾಪಿಸಿದ್ದು ಕಡೂರು ತಾಲೂಕು ಕಚೇರಿಗೆ ಸಂಬಂಧಿಸಿದಂತೆ ಜ.1 ರಿಂದ ಎಲ್ಲಾ ಕಡತಗಳನ್ನು ಇ ಆಫೀಸ್ ಮುಖಾಂತರ ನಿರ್ವಹಿಸಲಾಗುತ್ತಿದೆ. ಕಂದಾಯ ಗ್ರಾಮ: ಕಡೂರಿನ ಒಟ್ಟು 78 ಗ್ರಾಮಗಳಲ್ಲಿ ಪ್ರಾಥಮಿಕ ಅಧಿಸೂಚನೆಗೆ 10 ಗ್ರಾಮಗಳ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಕಂದಾಯ ಗ್ರಾಮ ಯೋಜನೆ ಅಡಿ ಜನವರಿ- ಡಿಸೆಂಬರ್ ಅಂತ್ಯಕ್ಕೆ ಒಟ್ಟು 1705 ಫಲಾನುಭವಿಗಳಿಗೆ ಹಕ್ಕು ಪತ್ರಕ್ಕೆ ಅನುಮೋದನೆ ನೀಡಲಾಗಿದೆ. 1265 ಜನರ ಹಕ್ಕುಪತ್ರದ ಇ ಸ್ವತ್ತು ದಾಖಲೆ ಪರಿವರ್ತನೆ ಮಾಡಲಾಗಿದೆ. ನಮೂನೆ 1-5 (ಪೋಡಿ): ಸರ್ಕಾರಿ ಜಮೀನಿನಲ್ಲಿ ಸಾರ್ವಜನಿಕರಿಗೆ ಮಂಜೂರಾದ ಸೆರ್ವೇ ನಂಬರ್ ನಿಂದ ದುರಸ್ತಿ ಮಾಡಿ ಖಾಸಗಿ ಸರ್ವೇ ನಂಬರ್ ಆಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ 1311 ಸರ್ವೇ ನಂಬರ್‌ಗಳ ಮಂಜೂರಾತಿ ವಿವಿಧ ವಿಧಗಳಲ್ಲಿ ಅನುಮೋದಿಸಿದೆ. 170 ಸರ್ವೇ ನಂಬರ್ ಗಳ ನ್ನು ಅರಣ್ಯ ಇಲಾಖೆ ಅಭಿಪ್ರಾಯ ಕೋರಿದ್ದು, 1000 ಜನರ ಪೋಡಿಗೆ ಈಗಾಗಲೇ ಕ್ರಮವಹಿಸಲಾಗಿದೆ. 2686 ಜನರ ಮಾಹಿತಿ ಮಿಸ್ಸಿಂಗ್ ಕಮಿಟಿಗೆ ಕಡತ ವರ್ಗಾಯಿಸಲಾಗಿದೆ. ಆಧಾರ್ ಸೀಡಿಂಗ್: ಕಡೂರಿನ ಒಟ್ಟು 266458 ಜನರ ಪಹಣಿಗೆ ಆಧಾರ್ ಲಿಂಕ್ ಮಾಡಬೇಕಾಗಿದೆ. ಇದರಲ್ಲಿ ಈಗಾಗಲೇ 149954 ಜನರ ಪಹಣಿಗೆ ಲಿಂಕ್ ಮಾಡಲಾಗಿದೆ. 116504 ಜನರ ಲಿಂಕ್ ಬಾಕಿ ಇದೆ. ಲ್ಯಾಂಡ್ ಬೀಟ್: ಸರ್ಕಾರಿ ಜಮೀನು ರಕ್ಷಿಸುವ ಹಾಗೂ ಹೊಸದಾಗಿ ಯಾವುದೇ ಒತ್ತುವರಿ ದಾಖಲಾಗದ ಹಾಗೇ ನೋಡಿಕೊಳ್ಳಲು ಲ್ಯಾಂಡ್ ಬೀಟ್ ಯೋಜನೆ ಜಾರಿಗೆ ತರಲಾಗಿದೆ. ಪ್ರಾಥಮಿಕ ಹಂತದಲ್ಲಿ ಗುರುತಿಸಿರುವ 9062 ಸರ್ಕಾರಿ ಸರ್ವೇ ನಂಬರ್‌ನಲ್ಲಿ 8765 ಸರ್ವೇ ನಂಬರ್ ಗಳ ಕ್ಷೇತ್ರ ಪರಿಶೀಲಿಸಿ ಆಪ್ ನಲ್ಲಿ ಮಾಹಿತಿ ದಾಖಲಿಸಲಾಗಿದೆ. 297 ಸರ್ವೇ ಗಳ ಮಾಹಿತಿ ದಾಖಲಿಸಲು ಬಾಕಿ ಇದೆ.ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸುವುದು ಮುಖ್ಯ ಉದ್ದೇಶ. ಈವರೆಗೆ 2180392 ಪುಟಗಳನ್ನು ಅಪ್ಲೋಡ್ ಮಾಡ ಲಾಗಿದೆ. ಶೇ 79.34 ರಷ್ಟು ಪ್ರಗತಿ ಸಾಧಿಸಲಾಗಿದೆ. 1541653 ಪುಟಗಳ ಸ್ಕ್ಯಾನಿಂಗ್ ಬಾಕಿ ಇದೆ. ಪ್ರತಿ ದಿನ 10000 ದಿಂದ 15000 ಪುಟಗಳ ಸ್ಕ್ಯಾನ್, ಅಪ್ಲೋಡ್ ಕಾರ್ಯ ನಡೆದಿದೆ. ತಹಸೀಲ್ದಾರ್ ನ್ಯಾಯಾಲಯ ಪ್ರಕರಣಗಳು: ಕಂದಾಯ ಇಲಾಖೆಯಲ್ಲಿ ಅರೆ ನ್ಯಾಯಿಕ ಪ್ರಕರಣಗಳ ವಿಲೇವಾರಿ ಉದ್ದೇಶ ದಿಂದ ಆರ್ಸಿಸಿ ಎಂಎಸ್ ತಂತ್ರಾಂಶ ಜಾರಿಗೆ ತಂದಿದ್ದು ಈ ತಂತ್ರಾಂಶದ ಮೂಲಕ ತಹಸೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಕಾರ್ಯಕಲಾಪ ಆನ್ ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಅಲ್ಲದೆ ಆದೇಶಗಳನ್ನು ಡಿಜಿಟಲ್ ಮೂಲಕ ಹೊರಡಿಸಲಾಗುತ್ತಿದೆ. 2025ರ ಜನವರಿಯಿಂದ ಡಿಸೆಂಬರ್ ಅಂತ್ಯಕ್ಕೆ ಒಟ್ಟು273 ಪ್ರಕರಣ ದಾಖ ಲಾಗಿವೆ. 247 ಪ್ರಕರಣ ವಿಚಾರಣೆ ನಡೆಸಿ ನಿಗಧಿತ ಸಮಯದಲ್ಲಿ ವಿಲೇವಾರಿ ಮಾಡಲಾಗಿದೆ. 26 ಪ್ರಕರಣ ವಿಚಾರಣಾ ಹಂತದಲ್ಲಿ ಬಾಕಿ ಇವೆ. ಸಾರ್ವಜನಿಕರು ತಮ್ಮ ಕೇಸಿನ ಮಾಹಿತಿ https://rccms.karnataka.gov.in/ ಲಿಂಕ್ ಮೂಲಕ ವಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.ಹೀಗೆ ಸರ್ಕಾರದ ಇನ್ನು ಅನೇಕ ಯೋಜನೆಗಳನ್ನು ಕಾನೂನು ರೀತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಗಳಿಲ್ಲದಂತೆ ಕೆಲಸ ನಡೆದಿದ್ದು 2026 ನೇ ಸಾಲಿನಲ್ಲಿಯೂ ಇದೇ ರೀತಿ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
25ಕೆಕೆಡಿಯು. ತಹಸೀಲ್ದಾರ್ ಸಿ. ಎಸ್.ಪೂರ್ಣಿಮಾ.