ಕೆಇಎ ಪರೀಕ್ಷಾ ಅಕ್ರಮ: 3 ಆರೋಪಿಗಳು ಪೊಲೀಸ್‌ ವಶ

| Published : Nov 03 2023, 12:31 AM IST

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬ್ಲೂಟೂತ್‌ ಬಳಸಿರುವ ಆರೋಪ ಹೊತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಕಲಬುರಗಿ ನಗರ ಅಶೋಕ ನಗರ ಠಾಣೆ ಪೊಲೀಸರು ಅಭ್ಯರ್ಥಿ ಲಕ್ಷ್ಮೀಪುತ್ರ ಸೊನ್ನ ಸೇರಿದಂತೆ ಮೂವರನ್ನು ವಿಚಾರಣೆಗೆಂದು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬ್ಲೂಟೂತ್‌ ಬಳಸಿರುವ ಆರೋಪ ಹೊತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಕಲಬುರಗಿ ನಗರ ಅಶೋಕ ನಗರ ಠಾಣೆ ಪೊಲೀಸರು ಅಭ್ಯರ್ಥಿ ಲಕ್ಷ್ಮೀಪುತ್ರ ಸೊನ್ನ ಸೇರಿದಂತೆ ಮೂವರನ್ನು ವಿಚಾರಣೆಗೆಂದು ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಗುರುವಾರ ಇಲ್ಲಿನ ಜಿಲ್ಲಾ ನ್ಯಾಲಾದಲ್ಲಿ ಆರೋಪಿಗಳನ್ನು ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾಗಿ ತಿಳಿದು ಬಂದಿದೆ. ಇವರೆಲ್ಲರೂ ಬ್ಲೂಟೂತ್‌ ಬಳಸಿ ಕೆಇಎ ಪರೀಕ್ಷೆಯಲ್ಲಿ ಅಪರಾಧ ಎಸಗಿರುವ ಗುರುತರವಾದಂತಹ ಆರೋಪ ಹೊತ್ತಿದ್ದಾರೆ.