ಚಾಮರಾಜನಗರ ರೋಟರಿ ಸಂಸ್ಥೆಗೆ ಕಾಗಲವಾಡಿ ಚಂದ್ರು ನೂತನ ಅಧ್ಯಕ್ಷ

| Published : Dec 29 2024, 01:20 AM IST

ಚಾಮರಾಜನಗರ ರೋಟರಿ ಸಂಸ್ಥೆಗೆ ಕಾಗಲವಾಡಿ ಚಂದ್ರು ನೂತನ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ರೋಟರಿ ಸಂಸ್ಥೆಗೆ 2025-26ನೇ ಸಾಲಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇಲ್ಲಿನ ರೋಟರಿ ಸಂಸ್ಥೆಗೆ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರೋಟರಿ ಸಂಸ್ಥೆಯ 55ನೇ ಅಧ್ಯಕ್ಷರಾಗಿ ಕಾಗಲವಾಡಿಚಂದ್ರು, ಕಾರ್ಯದರ್ಶಿಯಾಗಿ ಕೆಂಪನಪುರ ಸಿದ್ದರಾಜು, ನಿರ್ಗಮಿತ ಅಧ್ಯಕ್ಷರಾಗಿ ಎಲ್.ನಾಗರಾಜು, ಮುಂದಿನ ಸಾಲಿನ‌ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ದೀನಾ, ಉಪಾಧ್ಯಕ್ಷರಾಗಿ ಎಚ್.ಎನ್.ಗುರುಸ್ವಾಮಿ, ಸಹ ಕಾರ್ಯದರ್ಶಿಯಾಗಿ ಅಂಕಶೆಟ್ಟಿ, ಖಜಾಂಚಿಯಾಗಿ ಆರ್.ಎಂ.ಸ್ವಾಮಿ, ದಂಡಪಾನೀಯ ರಮೇಶ್, ನಿರ್ದೇಶಕರಾಗಿ ಸಿದ್ದಮಲ್ಲಪ್ಪ, ರತ್ನಮ್ಮ, ಅಶೋಕ್, ವರ್ಗೀಸ್, ರಾಮು, ವಿವಿಧ ಚೇರ್ಮನ್ ಗಳಾಗಿ ಜಿ.ಆರ್.ಅಶ್ವಥ್ ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ಸುರೇಶ್, ಕಾಳನಹುಂಡಿ ಗುರುಸ್ವಾಮಿ, ನಾಗರಾಜು ಡಿ.ಪ್ರಕಾಶ್, ಕೆ.ಎಂ.ಮಹದೇವಸ್ವಾಮಿ, ಸಿ.ಎ.ರಮೇಶ್, ಪ್ರಭಾಕರ್, ನಾರಾಯಣ್, ಸುಭಾಷ್, ಕಮಲ್ ರಾಜ್, ಚಂದ್ರಪ್ರಭ ಜೈನ್, ಬಿ.ಕೆ.ಮೋಹನ್, ಅವಿರೋಧ ಆಯ್ಕೆಗೊಂಡರು. ಸಿ.ವಿ.ಶ್ರೀನಿವಾಸಶೆಟ್ಟೆ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದರು.

ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆಯ ಹಿಂದಿನ ಎಲ್ಲ ಸೇವಾ ಕಾರ್ಯಕ್ರಮವನ್ನು ಮುಂದುವರಿಸುವುದು, ಕೃತಕಕಾಲು, ಮುಂಗೈ ಜೋಡಣೆ ಬೃಹತ್ ಕಾರ್ಯಕ್ರಮ, ಸುವರ್ಣ ಮಹೋತ್ಸವ ಆಚರಣೆ ಸಂಬಂಧ ಬಾಕಿಯಿರುವ ಮತ್ತೊಂದು ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣ, ಮುಕ್ತಿಧಾಮದಲ್ಲಿ ಶವಗಳನ್ನು ಸುಡುವ ವಿದ್ಯುತ್ ಯಂತ್ರ ಸ್ಥಾಪನೆ, ಮುಕ್ತಿಧಾಮಕ್ಕೆ ಶವಸಾಗಿಸುವ ವಾಹನ ಖರೀದಿಸಿ ತಾಲೂಕಿನಾದ್ಯಂತ ನೀಡುವುದು, ಉದ್ಯೋಗ ಮೇಳ, ಪ್ರವೇಶ ಪರೀಕ್ಷೆ, ಸ್ವಯಂ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಕ್ರಮ ಆಯೋಜನೆ, ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ, ಪರಿಸರ ನೈರ್ಮಲ್ಯ ಕಾರ್ಯಕ್ರಮ, ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ, ಹಿರಿಯ ನಾಗರಿಕ ಸಾಂತ್ವನ ಕಾರ್ಯಕ್ರಮ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ಎರಡು ನೂತನ ರೋಟರ್‍ಯಾಕ್ಟ್ ಪ್ರಾರಂಭಿಸುವುದು ನಮ್ಮ ಗುರಿ ಎಂದರು. ತಮ್ಮನ್ನು ಅವಿರೋಧವಾಗಿ ರೋಟರಿ ಸಂಸ್ಥೆಯ 55ನೇ ಅಧ್ಯಕ್ಷರಾಗಿ ಆಯ್ಕೆ ಮಾಡಿದ ತಮಗೆಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ರೋಟರಿ ಸಂಸ್ಥೆಯೂ ಕಳೆದ 54 ವರ್ಷಗಳಿಂದಲೂ ಸಮಾಜದಲ್ಲಿ ಉತ್ತಮ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮುಂದೆಯೂ ಕೂಡ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಂಸ್ಥೆಯ ಘನತೆಗೆ ಚ್ಯುತಿಯಾಗದ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು ಎಂದರು.