ಹಾರೋಹಳ್ಳಿ: ಕಗ್ಗಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ವರ್ಷ 3 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಸೂರ್ಯನಾರಾಯಣಗೌಡ ತಿಳಿಸಿದರು

ಹಾರೋಹಳ್ಳಿ: ಕಗ್ಗಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ವರ್ಷ 3 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಸೂರ್ಯನಾರಾಯಣಗೌಡ ತಿಳಿಸಿದರು.

ತಾಲೂಕಿನ ಕಗ್ಗಲಹಳ್ಳಿ ಸೊಸೈಟಿಯ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿ ಉತ್ತಮ ವಹಿವಾಟಿನಿಂದ ಲಾಭದಲ್ಲಿ ನಡೆಯುತ್ತಿದೆ. ಸೊಸೈಟಿಯಿಂದ ಕೆಸಿಸಿ ಬೆಳೆ ಸಾಲ, ಎಂಟಿಎಲ್ ಹಸು ಸಾಲ, ಸ್ತ್ರಿ ಶಕ್ತಿ ಸ್ವಸಹಾಯ ಸಂಘ ಗಳಿಗೆ ಸಾಲ, ದೀರ್ಘವದಿ ಸಾಲ, ಸ್ವಂತ ಬಂಡವಾಳ ಸಾಲ ನೀಡುವ ಮೂಲಕ ಸೊಸೈಟಿಯು ರೈತರಿಗೆ ಸ್ತ್ರೀಶಕ್ತಿ ಸಂಘಗಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಆಡಳಿತ ಮಂಡಳಿಯ ಅವಧಿಯು ಇದೆ ನವಂಬರ್‌ಗೆ ಮುಕ್ತಾಯವಾಗಲಿದ್ದು ಇದು ಕೊನೆಯ ಸಭೆಯಾಗಿದೆ. ಸೊಸೈಟಿ ಅಭಿವೃದ್ಧಿಗೆ ಶ್ರಮಿಸಿದ ಅಧ್ಯಕ್ಷರು ಸೇರಿದಂತೆ ಎಲ್ಲಾ ನಿರ್ದೇಶಕರಿಗೂ ಅಭಿನಂದನೆ ತಿಳಿಸುವುದಾಗಿ ಸೊಸೈಟಿ ಮುಖ್ಯ ಕಾರ್ಯನಿರ್ವಾಕ ಶ್ರೀನಿವಾಸಮೂರ್ತಿ ತಿಳಿಸಿದರು.

ಸೊಸೈಟಿ ಉಪಾಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರಾದ ಜಿ.ಕೆ.ಉಮಾಶಂಕರ್, ರಂಗನಾಥ್.ಕೆ, ಜಿ.ಎಂ.ಮುದ್ದೇಗೌಡ, ಗಬ್ಬಾಡಿ ಕಾಡೇಗೌಡ, ಕೆ.ಜಿ.ರವಿ, ಶಿವರುದ್ರಯ್ಯ, ಯಶೋಧಮ್ಮ, ಸರಸ್ವತಿ ಶಿವಕುಮಾರ್, ಬಿ.ಎಂ.ಮುದ್ದುಕೃಷ್ಣ, ಜೆ.ಎಂ.ಮುನಿರಾಜು, ಮೇಲ್ವಿಚಾರಕ ಬಿ.ಎಸ್.ಅಶೋಕ್ , ಕಂಪ್ಯೂಟರ್ ಆಪರೇಟರ್ ಕೆ.ಎನ್.ಸುನಿತಾ ಉಪಸ್ಥಿತರಿದ್ದರು.

25ಕೆಆರ್ ಎಂಎನ್ 1.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಕಗ್ಗಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಅಭಿನಂದಿಸಲಾಯಿತು.