ಶಾಸಕ ಕೆ. ಹರೀಶ್ ಗೌಡ ಗುದ್ದಲಿ ಪೂಜೆ

| Published : Aug 19 2025, 01:00 AM IST

ಸಾರಾಂಶ

ಈ ಕಾಮಗಾರಿಯಲ್ಲಿ ಕೈಲಾಸಪುರಂನ ಅಡ್ಡರಸ್ತೆಗಳಿಗೆ - ಒಳಚರಂಡಿ, ಮಳೆ ನೀರು ಚರಂಡಿ, ಸ್ಲಾಬ್ ಅಳವಡಿಕೆ,

ಕನ್ನಡಪ್ರಭ ವಾರ್ತೆ ಮೈಸೂರುಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 25ರ ತಿಲಕ್ ನಗರ ವ್ಯಾಪ್ತಿಯ ಕೈಲಾಸಪುರಂನಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ಹರೀಶ್ ಗೌಡ ಗುದ್ದಲಿಪೂಜೆ ನೆರವೇರಿಸಿದರು.ಈ ಕಾಮಗಾರಿಯಲ್ಲಿ ಕೈಲಾಸಪುರಂನ ಅಡ್ಡರಸ್ತೆಗಳಿಗೆ - ಒಳಚರಂಡಿ, ಮಳೆ ನೀರು ಚರಂಡಿ, ಸ್ಲಾಬ್ ಅಳವಡಿಕೆ, ನೀರಿನ ಪೈಪ್ಲೈನ್ ಅಳವಡಿಕೆ ಹಾಗೂ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕೆಲಸ ನೆಡೆಯಲಿದ್ದು ಇಲ್ಲಿನ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಕೆಲಸ ಮಾಡುತ್ತಿರುವುದಾಗಿ ಅಭಿಪ್ರಾಯಪಟ್ಟರು.ಮಾಜಿ ಮೇಯರ್ ಅನಂತು, ನಗರ ಪಾಲಿಕೆ ಮಾಜಿ ಸದಸ್ಯ ಸುನಂದ ಕುಮಾರ್, ದೇವರಾಜ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಯು.ಎಸ್. ರಮೇಶ್, ನಂದಕುಮಾರ್, ಜನತಾ ಬಜಾರ್ ನಿರ್ದೇಶಕ ಎನ್. ಮಂಜುನಾಥ್, ಆಶ್ರಯ ಸಮಿತಿ ಸದಸ್ಯರಾದ ಅನಂತ ನಾರಾಯಣ, ಮೊಹಮ್ಮದ ಇಬ್ರಾಹಿಂ, ವಾರ್ಡ್ ಅಧ್ಯಕ್ಷ ರಾಜಗಣೇಶ್, ಮುಖಂಡರಾದ ಶಿವಶಂಕರ್, ಎನ್. ಕೃಷ್ಣ, ದುರ್ಗೇಶ್, ಮಂಜುನಾಥ್, ಡಿ. ರಾಜ ರಾಜೇಂದ್ರ, ಧನು ಸೇರಿದಂತೆ ಪಕ್ಷದ ಮುಖಂಡರು ಇದ್ದರು.