ಸಾರಾಂಶ
ನಗರದ ವಿದ್ಯಾನಗರದಲ್ಲಿರುವ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘದ ಹಾಗೂ ಶ್ರೀ ಯೋಗಿನಾರೇಯಣಯತೀಂದ್ರರ ಸೇವಾ ಟ್ರಸ್ಟ್ ವತಿಯಿಂದ ೨೯೯ನೇ ಶ್ರೀ ಯೋಗಿನಾರೇಯಣಯತೀಂದ್ರ ( ಕೈವಾರ ತಾತಯ್ಯ) ರ ಜಯಂತ್ಯುತ್ಸವವನ್ನು ಶುಕ್ರವಾರ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ವಿದ್ಯಾನಗರದಲ್ಲಿರುವ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘದ ಹಾಗೂ ಶ್ರೀ ಯೋಗಿನಾರೇಯಣಯತೀಂದ್ರರ ಸೇವಾ ಟ್ರಸ್ಟ್ ವತಿಯಿಂದ ೨೯೯ನೇ ಶ್ರೀ ಯೋಗಿನಾರೇಯಣಯತೀಂದ್ರ ( ಕೈವಾರ ತಾತಯ್ಯ) ರ ಜಯಂತ್ಯುತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘನ ಭೂಷಣ್, ಡಾ. ವಿವೇಚನ್, ಸಮಾಜದ ಹಿರಿಯರಾದ ನಾಗಣ್ಣ, ತಾಲೂಕು ಬಲಿಜ ಸಂಘದ ಅಧ್ಯಕ್ಷ ಪದ್ಮನಾಭಕುಮಾರ್, ಉಪಾಧ್ಯಕ್ಷ ಮದನ್‌ಮೋಹನ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಖಜಾಂಚಿ ಅನಿಲ್, ನಿರ್ದೇಶಕರಾದ ಮಧುಸೂಧನ್, ದಸರೀಘಟ್ಟ ಶೇಖರ್, ಶಿವಣ್ಣ, ಡಿ.ಸಿ. ಪ್ರಭಾಕರ್, ಬಂಡಿಹಳ್ಳಿ ವೇಣುಗೋಪಾಲ್, ನೊಣವಿನಕೆರೆ ಮಂಜುನಾಥ್, ಭರತ್, ಬಾಲಾಜಿ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು. ಕಂದಾಯ ಇಲಾಖೆಯ ರಂಗಪ್ಪ ಉಪನ್ಯಾಸ ನೀಡಿದರು. ಬಾಲಕ ಆರ್ಯನ್, ತಾತಯ್ಯನವರ ಪವಾಡಗಳ ಬಗ್ಗೆ ತಿಳಿಸಿಕೊಟ್ಟಿದ್ದು ಎಲ್ಲರ ಗಮನಸೆಳೆಯಿತು. ಧನಲಕ್ಷ್ಮೀ ಎಂಬುವವರು ಯೋಗಿನಾರೇಯಣಯತೀಂದ್ರರ ಕಿರುಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮಕ್ಕೂ ಮುನ್ನಾ ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ತಾತಯ್ಯನವರ ಭಾವಚಿತ್ರದ ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ವೇದಿಕೆಯವರೆಗೂ ನಡೆಯಿತು.