ಕೀರ್ತನೆಗಳ ಮೂಲಕ ಸಮಾಜ ತಿದ್ದಿದವರು ಕೈವಾರ ತಾತಯ್ಯ: ಆನಂದ್‌ ಶೆಟ್ಟಿ

| Published : Mar 26 2024, 01:04 AM IST

ಕೀರ್ತನೆಗಳ ಮೂಲಕ ಸಮಾಜ ತಿದ್ದಿದವರು ಕೈವಾರ ತಾತಯ್ಯ: ಆನಂದ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಅಂಕುಡೊಂಕುಗಳನ್ನು ಕೀರ್ತನೆಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದವರು ಕೈವಾರ ತಾತಯ್ಯ. ಅವರ ತತ್ತ್ವ, ಆದರ್ಶದ ಬದುಕನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆನಂದ್‌ಶೆಟ್ಟಿ ಹೇಳಿದರು.

ಸಗನೀಪುರ ರಸ್ತೆಯ ಕೈವಾರ ಗಿರಿಯಲ್ಲಿ ಕೈವಾರ ತಾತಯ್ಯರ 298 ನೇ ಜಯಂತಿ,

---

-ಮಹಾನೀಯರ ತತ್ತ್ವ, ಜೀವನ ಮೌಲ್ಯ ಅರಿತು, ಅನುಸರಿಸಿದರೆ ಬದುಕು ಹಸನು

-ಕೈವಾರ ತಾತಯ್ಯರಿಂದ ಸಮಾಜ ಕಟ್ಟುವ ಕೆಲಸಕ್ಕೆ ಕೊಡುಗೆ

- ಜನರ ಕಣ್ಣು ತೆರೆಸುವಂತಹ ಪದ್ಯ ರಚನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದ ಅಂಕುಡೊಂಕುಗಳನ್ನು ಕೀರ್ತನೆಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದವರು ಕೈವಾರ ತಾತಯ್ಯ. ಅವರ ತತ್ತ್ವ, ಆದರ್ಶದ ಬದುಕನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆನಂದ್‌ಶೆಟ್ಟಿ ಹೇಳಿದರು. ಚಿಕ್ಕಮಗಳೂರಿನ ಸಗನೀಪುರ ರಸ್ತೆಯ ಕೈವಾರ ಗಿರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಬಲಿಜ ಸಂಘ ಮತ್ತು ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ಸೇವಾ ಟ್ರಸ್ಟ್ ನಿಂದ ಸೋಮವಾರ ಏರ್ಪಡಿಸಿದ್ದ ಕೈವಾರ ತಾತಯ್ಯರ 298 ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನೀಯರ ಬದುಕು, ತತ್ತ್ವ, ಜೀವನ ಮೌಲ್ಯ ಅರಿತು, ಅನುಸರಿಸುವುದ ರಿಂದ ಬದುಕು ಹಸನಾಗುತ್ತದೆ. ಕೈವಾರ ತಾತಯ್ಯ ಸಮಾಜ ಕಟ್ಟುವ ಕೆಲಸಕ್ಕೆ ಕೊಡುಗೆ ನೀಡಿದ್ದಾರೆ. ಎಲ್ಲರಿಂದ ಒಳ್ಳೆಯ ಯೋಚನೆಗಳ ಕೆಲಸಗಳು ಆಗಲಿ, ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು. ಕೈವಾರ ತಾತಯ್ಯ ಕ್ಷೇತ್ರಕ್ಕೆ ತೆರಳಿದರೆ ಆತ್ಮಸ್ಥೈರ್ಯ ಮೂಡಲಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಜನರ ಕಣ್ಣು ತೆರೆಸುವಂತಹ ಪದ್ಯಗಳನ್ನು ಬರೆದಿದ್ದಾರೆ. ಶರಣ, ದಾಸ ಪರಂಪರೆಗಳಿಗೆ ಕೊಂಡಿಯಾಗಿ ಕೆಲಸ ಮಾಡಿದ್ದು ಅವರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು ಎಂದರು. ತಾಲೂಕು ಬಲಿಜ ಸಂಘದ ಅಧ್ಯಕ್ಷ ದೇವರಾಜ್ ಮಾತನಾಡಿ, ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ. ಅವರ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ. ಅವರ ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಕೈವಾರ ತಾತಯ್ಯ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಯೋಗಿ ನಾರೇಯಣ ತಾತಯ್ಯ ಅಧ್ಯಾತ್ಮ ಚಿಂತಕರು, ಸಮಾಜ ಸುಧಾರಕರು, ದಾಸ ಸಾಹಿತ್ಯದ ಹರಿಕಾರರು, ಯೋಗ, ತತ್ತ್ವ ಸಿದ್ದಾಂತದ ಪ್ರತಿಪಾದಕರಾಗಿ ಜನಿಸಿದವರು. ಬಾಲ್ಯ ದಿಂದಲೇ ಅಧ್ಯಾತ್ಮದತ್ತ ಒಲವಿದ್ದ ಯೋಗಿ ನಾರೇಯಣರು ದಿನದ ಬಹುಸಮಯವನ್ನು ಧ್ಯಾನದಲ್ಲೇ ಕಳೆಯುತ್ತಿದ್ದರು ಎಂದರು. ಮೂಲತ ಕುಲವೃತ್ತಿ ಬಳೆ ತೊಡಿಸುವ ಕಾಯಕ. ಬಳೇ ವ್ಯಾಪಾರಕ್ಕಾಗಿ ಊರೂರು ಸುತ್ತುತ್ತಾ ಮಹಾಲಕ್ಷ್ಮೀ ಸ್ವರೂಪರಾದ ಮಹಿಳೆಯರಿಗೆ ಬಳೆ ತೊಡಿಸುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರ ಮನೋ ನಾಡಿಯನ್ನು ಅರಿತವರಾಗಿದ್ದರು ಎಂದ ಅವರು, ಕೋಲಾರ ಜಿಲ್ಲೆ ಕೈವಾರದಲ್ಲಿ ಜನ್ಮತಾಳಿದ್ದು ನಮ್ಮೆಲ್ಲರ ಪುಣ್ಯ ಎಂದರು. ಇದೇ ವೇಳೆ ರಾಜ್ಯ ಸಮಗ್ರ ವೇದಿಕೆ ರಾಜ್ಯಾಧ್ಯಕ್ಷ ಡಾ.ಮುನಿಕೃಷ್ಣರವರು ಜಿಲ್ಲೆಗೆ ಸಾವಿರಕ್ಕೂ ಹೆಚ್ಚು ಕೈವಾರ ತಾತಯ್ಯ ಭಾವಚಿತ್ರವನ್ನು ಹಸ್ತಾಂತರಿಸಿದ್ದು ಸಂಘದಿಂದ ಜಿಲ್ಲೆಯ ಎಲ್ಲಾ ತಾಲೂಕಿನ ಜನಾಂಗದ ಕುಟುಂಬಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತಿ ಪ.ಶ್ರೀನಿವಾಸ್, ಗಾಯಕ ಮಲ್ಲಿಗೆ ಸುಧೀರ್, ಬಲಿಜ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷೆ ಸಿ.ಟಿ. ಜಯವರ್ಧನ್, ಪ್ರಧಾನ ಕಾರ್ಯದರ್ಶಿ ಆರ್.ಕುಮಾರ್, ಖಜಾಂಚಿ ಪೂಜಾರ್ ಮಂಜಪ್ಪ, ಲೆಕ್ಕ ಪರಿಶೋಧಕ ರತೀಶ್‌ ಕುಮಾರ್, ಸಹ ಕಾರ್ಯದರ್ಶಿ ಮಹೇಶ್, ಕಾನೂನು ಸಲಹೆಗಾರರಾದ ಜಿ.ಬಾಲಕೃಷ್ಣ, ಜಿ.ಆರ್.ಶ್ರವಣ್, ಸದಸ್ಯರಾದ ಎ.ಯಶ್ವಂತ್, ಕೆ.ಬಿ.ಗಿರೀಶ್, ಸಿ.ಎಲ್.ಅಲೋಕ್, ಕೆ.ಪಿ.ಪ್ರಸನ್‌ಕುಮಾರ್, ಕೆ.ಟಿ. ಮರೀಶೆಟ್ಟಿ, ಧರ್ಮಶೆಟ್ಟಿ, ನಿತ್ಯಾನಂದ್, ಕೆ.ಸಿ.ನಿತ್ಯಾನಂದ್ ಉಪಸ್ಥಿತರಿದ್ದರು. 25 ಕೆಸಿಕೆಎಂ 1ಚಿಕ್ಕಮಗಳೂರಿನ ಸಗನೀಪುರ ರಸ್ತೆಯ ಕೈವಾರ ಗಿರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೈವಾರ ತಾತಯ್ಯರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆನಂದ್‌ಶೆಟ್ಟಿ, ದೇವರಾಜ್‌, ಶ್ರೀನಿವಾಸ್‌, ಜಯವರ್ಧನ್‌ ಇದ್ದರು.