ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ನೆಸ್ಲೆ ಇಂಡಿಯಾ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಹಾಕಿ ಕೂರ್ಗ್ ಅಸೋಸಿಯೇಷನ್ ವತಿಯಿಂದ15ರಿಂದ 17 ರ ವರೆಗೆ ಕಾಕೋಟುಪರಂಬುವಿನಲ್ಲಿ ‘ನೆಸ್‌ಕಫೆ ಕೊಡಗು ಹಾಕಿ ಕಪ್’ ಪಂದ್ಯಾವಳಿ ನಡೆಯಲಿದೆ ಎಂದು ಹಾಕಿ ಕೂರ್ಗ್ ಸಂಸ್ಥೆ ಅಧ್ಯಕ್ಷ ಲವಕುಮಾರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಾಕೋಟುಪರಂಬು ಹಾಕಿ ಮೈದಾನದಲ್ಲಿ ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಜಿಲ್ಲಾ ಹಾಕಿ ಲೀಗ್ ಮೂಲಕ ಆಯ್ಕೆಯಾದ 8 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ ಎಂದರು.ಬೋಟಿಯತ್ನಾಡ್ ಕುಂಡ, ಈಶ್ವರ್ ಯೂತ್ ಕ್ಲಬ್ ಬೇಗೂರು, ಕೋಣನಕಟ್ಟೆ ಇವೆನೆನ್, ಮಲ್ಮಾ ಕಕ್ಕಬೆ, ಎಂಆರ್‌ಎಫ್ ಮೂರ್ನಾಡ್, ಭೇಜ್ ಮೂರ್ನಾಡ್, ಅಶ್ವಿನಿಸ್ ಸ್ಪೋಟ್ಸ್ ಫೌಂಡೇಶನ್/ಕೆಎಎಲ್‌ಎಸ್, ಬೇರಿಲಿನಾಡ್ ಕಣಂಗಾಲ ತಂಡಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿತಂಡವು ಐದು ಆಟಗಾರರನ್ನು ಒಳಗೊಂಡಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದರು.ಮಾ.15ರ ಬೆಳಗೆ 10 ಗಂಟೆಗೆ ಪಂದ್ಯಾವಳಿ ಆರಂಭವಾಗಲಿದ್ದು, ನೆಸ್ಲೆ ಇಂಡಿಯಾ ಲಿಮಿಟೆಡ್‌ನ ಸಿಇಒ ಸುರೇಶ್ ನಾರಾಯಣ, ಹಿರಿಯ ಉದ್ಯಮಿ ಕರ್ತಮಾಡ ವಿಕ್ರಂ ಸುಬ್ಬಯ್ಯ, ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ರಮಣಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಾ.17ರಂದು ಫೈನಲ್ ಪಂದ್ಯಾವಳಿ ನಡೆಯಲಿದ್ದು, ನೆಸ್ಥೆ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕರಾದ ಸುನೈನಾ ಮಿಶ್ರ, ಸಂಸದ ಪ್ರತಾಪ್ ಸಿಂಹ, ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ hockeycoorg2011@gmail.com 9980523443 ಸಂಪರ್ಕಿಸಬಹುದು ಎಂದರು. ಹಾಕಿ ಕೂರ್ಗ್ ಪ್ರಧಾನ ಕಾರ್ಯದರ್ಶಿ ಎ.ಕೆ.ಚೇತನ್, ಉಪಾಧ್ಯಕ್ಷರಾದ ಯಮುನಾ ಚಂಗಪ್ಪ, ನಿರ್ದೇಶಕರಾದ ರೇಷ್ಮಾ ಸುದ್ದಿಗೋಷ್ಠಿಯಲ್ಲಿದ್ದರು.