- ಡೆಂಟಲ್ ಕಾಲೇಜು ರಸ್ತೆಯಲ್ಲಿ 82ನೇ ನೂತನ ಮಳಿಗೆ ಉದ್ಘಾಟಿಸಿದ ನಟಿ ಸಪ್ತಮಿ ಗೌಡ - - -
ಕನ್ನಡಪ್ರಭ ವಾರ್ತೆ ದಾವಣಗೆರೆಭಾರತದ ಹೆಸರಾಂತ ಸಾಯಿ ಸಿಲ್ಕ್ಸ್ ಕಳಾ ಮಂದಿರ್ ಲಿಮಿಟೆಡ್‌ನ ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿ ಶುಕ್ರವಾರ ನೂತನ ಮಳಿಗೆ 82ನೇ ಕಳಾ ಮಂದಿರ್ ಶೋ ರೂಂ ಅನ್ನು ಕಾಂತಾರ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಟಿ ಸಪ್ತಮಿ ಗೌಡ ಮಾತನಾಡಿ, ಕಳಾ ಮಂದಿರ್ ಶೋ ರೂಂ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಇದು ಕಳಾ ಮಂದಿರ್‌ನ 82ನೇ ಮಳಿಗೆಯಾಗಿದ್ದು ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಅಗತ್ಯವಿರುವ ಅಚ್ಚುಮೆಚ್ಚಿನ ವೈವಿಧ್ಯಮಯ ಫ್ಯಾಷನ್ ಉಡುಪುಗಳ ಸಮಗ್ರ ಶಾಪಿಂಗ್ ತಾಣವಾಗಿ ರೂಪಿಸಿರುವುದು ವಿಶೇಷವಾಗಿದೆ ಎಂದರು.20 ವರ್ಷಗಳ ಯಶಸ್ವಿ ರಿಟೇಲ್ ವ್ಯಾಪಾರ ಪಯಣವನ್ನು ಪೂರೈಸಿರುವ ಕಳಾ ಮಂದಿರ್, ಗುಣಮಟ್ಟ, ಅಪರಿಮಿತ ಸಂಗ್ರಹಣೆ ಮತ್ತು ಗ್ರಾಹಕಸ್ನೇಹಿ ದರದ ಮೂಲಕ ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿದೆ. ದಾವಣಗೆರೆಯ ಹೊಸ ಶೋ ರೂಮ್‌ನಲ್ಲಿ ಸಿಲ್ಕ್ ಸೀರೆಗಳು, ಫ್ಯಾನ್ಸಿ ಸೀರೆಗಳು, ರೆಡಿಮೇಡ್ ಉಡುಪುಗಳು, ಪುರುಷರ ಉಡುಪುಗಳು ಹಾಗೂ ಮಕ್ಕಳ ಉಡುಪುಗಳ ವಿಶೇಷ ಸಂಗ್ರಹಣೆಯನ್ನು ಒಂದೇ ಸೂರಿನಡಿ ಒದಗಿಸಲಾಗಿದೆ ಎಂದರು.
ಸಾಯಿ ಸಿಲ್ಕ್ಸ್ ಕಳಾ ಮಂದಿರ ಲಿಮಿಟೆಡ್‌ನ ನಿರ್ದೇಶಕ ದುರ್ಗಾರಾವ್ ಚಲವಾದಿ ಮಾತನಾಡಿ, ನಮ್ಮ 82ನೇ ಶೋ ರೂಮ್ ಮೂಲಕ ಕಲಾಮಂದಿರದ ಪರಂಪರೆಯನ್ನು ದಾವಣಗೆರೆಗೆ ತರುತ್ತಿರುವುದು ನಮಗೆ ಸಂತಸದ ವಿಚಾರ. ಒಂದೇ ಸೂರಿನಡಿ ಅತ್ಯುತ್ತಮ ಸಂಗ್ರಹಣೆ, ಗುಣಮಟ್ಟ, ವೈವಿಧ್ಯತೆ ಹಾಗೂ ಮೌಲ್ಯಯುತ ಫ್ಯಾಷನ್ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಬದ್ಧತೆಯಾಗಿದೆ. ಪ್ರತಿಯೊಂದು ಕುಟುಂಬದ ಬದಲಾಗುತ್ತಿರುವ ಫ್ಯಾಷನ್ ಅಗತ್ಯಗಳನ್ನು ಪೂರೈಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮೋಹನ್ ಚಲವಾದಿ, ಸಿಇಒ ಭಾರದ್ವಾಜ್, ಇತರರು ಇದ್ದರು.
- - -(ಬಾಕ್ಸ್) * ಕನ್ನಡ, ತಮಿಳಿನಲ್ಲಿ ಎರಡು ಸಿನಿಮಾ ಸಿದ್ಧಗೊಳ್ಳುತ್ತಿವೆ ನಾನು ನಾಯಕಿಯಾಗಿ ನಟಿಸಿರುವ ಕನ್ನಡ, ತಮಿಳಿನಲ್ಲಿ ಎರಡು ಸಿನಿಮಾ ಸಿದ್ಧಗೊಳ್ಳುತ್ತಿವೆ. ಫೋಟೋ ಶೂಟ್ ಎಲ್ಲಾ ಆಗಿದೆ. ಇನ್ನೂ ಹೆಸರು ಇಟ್ಟಿಲ್ಲ. ಚಿತ್ರ ತಂಡವೇ ಜೂನ್ ತಿಂಗಳಿನಲ್ಲಿ ಸಿನಿಮಾ ಹೆಸರನ್ನು ಪ್ರಚಾರ ಮಾಡಲಿದೆ. ಈ ಹಿಂದೆ ಡಾಲಿ ಧನಂಜಯ ಅಭಿನಯದ ಹೆಡ್ ಬುಷ್ ಸಿನಿಮಾ ಪ್ರಮೋಷನ್‌ಗೆ ಬಂದಿದ್ದೆ. ಆಗಲೂ ದಾವಣಗೆರೆ ಜನ ತುಂಬಾ ಪ್ರೀತಿ ಕೊಟ್ಟಿದ್ದರು. ಈಗ ಮತ್ತೆ ದಾವಣಗೆರೆಗೆ ಬಂದೀದಿನಿ, ಈಗಲೂ ಸಹ ಅಷ್ಟೇ ಪ್ರೀತಿಯನ್ನು ಕೊಡುತ್ತಿದ್ದಾರೆ. ದಾವಣಗೆರೆ ಬೆಣ್ಣೆ ದೋಸೆಯನ್ನು ಇನ್ನೂ ತಿಂದಿಲ್ಲ. ಬೆಣ್ಣೆದೋಸೆ ತಿಂದು ನಾನು ಹೋಗುವೆ ಎಂದು ನಟಿ ಸಪ್ತಮಿ ಗೌಡ ಹೇಳಿದರು.
- - --22ಕೆಡಿವಿಜಿ37: ಸಪ್ತಮಿ ಗೌಡ
-22ಕೆಡಿವಿಜಿ38, 39: ದಾವಣಗೆರೆಯಲ್ಲಿ ಶುಕ್ರವಾರ ಕಳಾ ಮಂದಿರ್ ನೂತನ ಶೋ ರೂಂ ನ್ನು ನಟಿ ಸಪ್ತಮಿ ಗೌಡ ಉದ್ಘಾಟಿಸಿದರು.