ಸಾರಾಂಶ
ಸ್ವಾತಂತ್ರ್ಯ ರಾಷ್ಟ್ರದ ಹಿತಕ್ಕಾಗಿ ಮಡಿದ ಹುತಾತ್ಮ ಅಪ್ಪಾರಾವ್ ಪಾಟೀಲ್ ನಮಗೆ ಮಾದರಿಯಾಗಬೇಕು ಎಂದು ಲೋಕಸಭಾ ಸದಸ್ಯ ಡಾ ಉಮೇಶ್ ಜಾಧವ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಕಮಲಾಪುರ
ಸ್ವಾತಂತ್ರ್ಯ ರಾಷ್ಟ್ರದ ಹಿತಕ್ಕಾಗಿ ಮಡಿದ ಹುತಾತ್ಮ ಅಪ್ಪಾರಾವ್ ಪಾಟೀಲ್ ನಮಗೆ ಮಾದರಿಯಾಗಬೇಕು ಎಂದು ಲೋಕಸಭಾ ಸದಸ್ಯ ಡಾ ಉಮೇಶ್ ಜಾಧವ್ ಸಲಹೆ ನೀಡಿದರು.ಮಹಾಗಾಂವನಲ್ಲಿ ಆಯೋಜಿಸಿದ್ದ ಹುತಾತ್ಮ ಅಪ್ಪಾರಾವ್ ಪಾಟೀಲ್ ಮಹಾಗಾಂವ ಅವರ 100ನೇ ಜನ್ಮದಿನೋತ್ಸವದ ಮತ್ತು ಜೀವನ ಆಧರಿತ ಪುಸ್ತಕ ಬಿಡುಗಡೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪ್ಪಾರಾವ್ ಪಾಟೀಲ್ ಹಾಗೂ ಚಂದ್ರಶೇಖರ್ ಪಾಟೀಲ್ ಅವರು ಈ ಭಾಗದ ಎರಡು ಕಣ್ಣುಗಳಿದ್ದಂತೆ ಬ್ರಿಟಿಷರು ಹಾಗೂ ರಜಾಕಾರರ ವಿರುದ್ಧ ದಿಟ್ಟ ಹೋರಾಟ ಮಾಡಿದ ಶ್ರೇಷ್ಠ ನಾಯಕರಲ್ಲಿ ಅಪ್ಪಾರಾವ್ ಪಾಟೀಲ್ ಒಬ್ಬರಾಗಿದ್ದು, ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ, ಭಾರತಮಾತೆಯ ಸೇವೆ ಸಲ್ಲಿಸಿದ ವೀರ ಸೇನಾನಿಯಾಗಿದ್ದಾರೆ ಎಂದರು.ಅಂದಿನ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಜಕಾರರ ಉಪಟಳ ಹೆಚ್ಚಾಗಿತ್ತು. ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಜನರ ಮೇಲೆ ದಬ್ಬಾಳಿಕೆ ನಡೆಸಿದ್ದರು. ಜನರ ನೋವನ್ನು ಕಂಡು ಸಿಡಿದೆದ್ದ ಅಪಾರಾವ್ ಪಾಟೀಲ್ 24ನೇ ವಯಸ್ಸಿನಲ್ಲೇ ಗುಲ್ಬರ್ಗ ಜಿಲ್ಲೆಯ ತುರ್ಕ ಚಿಂಚೋಳಿ ಬಳಿ ರಜಾಕಾರರ ಗುಂಡಿಗೆ ಬಲಿಯಾಗಿ ವೀರ ಮರಣ ಹೊಂದಿದರು ಎಂದರು.
ವಿರೂಪಾಕ್ಷ ದೇವರು ಕಳ್ಳಿಮಠ ಮಹಾಗಾಂವ, ಧಾರವಾಹಿ ಕಿರುತೆರೆಯ ನಟಿ ದಿವ್ಯ ವಾಗುಕರ್, ಸೋಮಶೇಖರ್ ಗೋನಾಯಕ್ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕಲಬುರ್ಗಿ, ನೀಲಕಂಠರಾವ್ ಮೂಲಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಬುರ್ಗಿ, ಪ್ರೊ. ಬಿ.ಎ. ಪಾಟೀಲ್, ದಯಾನಂದ ಪಾಟೀಲ್, ಸಂಗಮೇಶ್ ವಾಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ, ಬಸವರಾಜ್ ಪಾಟೀಲ್ ಹೇರೂರ, ಹನುಮಂತರಾವ್ ಮಾಲಾಜಿ, ವೀರೇಶ ಬಿರಾದಾರ, ಶಿವಕುಮಾರ್ ಕಳ್ಳಿಮಠ, ಗಿರೀಶ್ ಪಾಟೀಲ್, ಶ್ರೀಕಾಂತ ಪಾಟೀಲ್, ಶರಣಗೌಡ ಪಾಟೀಲ್ ಹರಕಂಚಿ, ಪಿಎಸ್ಐ ಆಶಾ ರಾಥೋಡ್, ಶಿವಶಂಕರ್ ಸುಬೇದಾರ್ ಮತ್ತಿತರು ಇದ್ದರು.