ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆ ಎದುರಿಸಲು ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಿಂದ ಸಿದ್ಧರಾಗಬೇಕು ಎಂದು ಜೆಡಿಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಕರೆ ನೀಡಿದರು.ಕಲಬುರಗಿ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೆಗೌಡರು, ಪಕ್ಷದ ರಾಜ್ಯಧ್ಯಕ್ಷ, ಸಂಸದ ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತದಲ್ಲಿ ಜಾರಿಮಾಡಿರುವ ರೈತರ ಸಾಲಮನ್ನಾ, ಗ್ರಾಮ ವಾಸ್ತವ್ಯ, ನೀರಾವರಿ ಯೋಜನೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಜಾರಿಮಾಡಿದ್ದು ಜೆಡಿಎಸ್ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಹೇಳುವ ಮೂಲಕ ಭೂತ ಮಟ್ಟದಿಂದ ಪಕ್ಷ ಸಂಘಟಿಸಬೇಕು, ರಾಜ್ಯ ಸರ್ಕಾರದ ಬೇಲೆ ಏರಿಕೆ ವಿರುದ್ಧ, ಸ್ಥಳಿಯ ಕಾರ್ಖಾನೆಗಳಲ್ಲಿ ಸ್ಥಳಿಯ ನಿರುದ್ಯೊಗಿ ಯುವಕರಿಗೆ ಉದ್ಯೋಗ ನೀಡಲು ಆಗ್ರಹಿಸಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಮುಂಬರುವ ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಉಪ ಮಹಾಪೌರರ ಚುನಾವಣೆ, ಜೆಡಿಎಸ್ ಪಕ್ಷದ ಸದ್ಯಸತ್ವ ನೋಂದಣಿ ಅಭಿಯಾನದ ಕಾರ್ಯಕ್ರಮ , ಕಳೆದ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಗೆ ಸಂಬಂದಿಸಿದ ಎಲ್ಲಾ ವಿಧಾನಸಭೆಯ ಮತಕ್ಷೇತ್ರದಲ್ಲಿ ನಮ್ಮ ಏನ್ ಡಿ ಎ ಪಕ್ಷದ ಅಭ್ಯರ್ಥಿಗೆ ಯಾವ ಕ್ಷೇತ್ರದಲ್ಲಿ ಏಕೆ ಹೆಚ್ಚು ಮತಗಳು ಬಂದವು ಯಾವ ಕ್ಷೇತ್ರದಲ್ಲಿ ಏಕೆ ಕಡಿಮೆ ಮತಗಳು ಬಂದವು ಏನುವುದರ ಬಗ್ಗೆ , ಕಲಬುರಗಿ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪಕ್ಷವನ್ನು ಸಂಘಟಿಸುವ ಕುರಿತು ವಿಶೇಷ ವಾಗಿ ಚರ್ಚಿಸಲಾಯಿತ್ತು.ಸಭೆಯಲ್ಲಿ ಮಾಜಿ ಶಾಸಕರು ಹಾಗೂ ರಾಜ್ಯ ಜೆಡಿಎಸ್ ಕಾರ್ಯಧ್ಯಕ್ಷರಾದ ದೊಡ್ಡಪ್ಪ ಗೌಡ ಪಾಟೀಲ ನರಿಬೋಳ, ಮುಖಂಡರಾದ ಕೃಷ್ಣರೆಡ್ಡಿ, ಸಂಜೀವನ ಯಾಕಪುರ, ನಾಸಿರ್ ಹುಸೇನ್ ಉಸ್ತಾದ್, ವಿಶ್ವನಾಥ ನಾಡಗೌಡ, ಹಣಮಂತ ಸನಗುಂದಿ, ಹಣಮಂತ ಕಂದಹಳ್ಳಿ, ಸಿದ್ದಣ್ಣ ಪಾಟೀಲ್, ಸುನಿಲ್ ಗಾಜರೆ, ಸಂಜು ಮಡಕಿ, ಪ್ರವೀಣ್ ಜಾಧವ ಯೇಶುನಾಥ, ಭೀಮರಾಯ ಜನಿವಾರ, ಜಮೀಲ್ ಗೌಂಡಿ, ಕಲೀಮ್ ಬಾಂಡ್, ರವಿಶಂಕರ್ ರೆಡ್ಡಿ, ಪಾರ್ವತಿ ಪುರಾಣಿಕ್ ಉಪಸ್ಥಿತರಿದ್ದರು.