ಸಾರಾಂಶ
ಅಖಿಲ ಭಾರತ ಮಧ್ವಮಹಾ ಮಂಡಲ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥರ ಚತುರ್ಥ ಮಹಾ ಸಮಾರಾಧನೆ ಉತ್ಸವ ಜರುಗಿತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ವಿದ್ಯಾನಗರದ ಶ್ರೀಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ಮಂದಿರ, ಅಖಿಲ ಭಾರತ ಮಧ್ವಮಹಾ ಮಂಡಲ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥರ ಚತುರ್ಥ ಮಹಾ ಸಮಾರಾಧನೆ ಉತ್ಸವ ಜರುಗಿತು.ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಆದೇಶದಂತೆ ಪಂಚಾಮೃತ, ಮಹಾಪೂಜೆ, ಜಯತೀರ್ಥ ನಗರದ ಹಂಸ ನಾಮಕ ಮತ್ತು ಲಕ್ಷ್ಮಿನಾರಾಯಣ್ ಪಾರಾಯಣ ಸಂಘದಿಂದ ಪಾರಾಯಣ, ರಾಮ ನಾಮ ಜಪ ಮಂತ್ರ ಹಾಗೂ ಅಷ್ಟೋತ್ತರ, ಪ್ರವಚನ, ರಥೋತ್ಸವ ನಡಯಿತು.
ನಂತರ ಅಲಂಕಾರ ಪಂಕ್ತಿ ಹಾಗೂ ತೀರ್ಥ ಪ್ರಸಾದ ವಿತರಿಸಲಾಯಿತು. ಕಾರ್ಯದರ್ಶಿ ಕಿಶೋರ ದೇಶಪಾಂಡೆ, ಉಪಾಧ್ಯಕ್ಷ ಗೋಪಾಲಚಾರ್ಯ ಅಕಮಂಚಿ, ಸಹ ಕಾರ್ಯದರ್ಶಿ ಮಂಜುನಾಥ ಕುಲಕರ್ಣಿ, ಖಜಾಂಚಿ ನಾರಾಯಣ ದೇಸಾಯಿ, ಸದಸ್ಯರಾದ ವಿದ್ಯಾಸಾಗರ ರೇವೂರ, ಗೋಪಾಲ ಕೃಷ್ಣ ಸರಡಗಿ, ರಾಮದಾಸ, ನಂದು ಕಟ್ಟಿ, ಪ್ರಹ್ಲಾದ್ ಬುರ್ಲಿ, ಪ್ರಹ್ಲಾದ್ ನಾಡಗೌಡ, ಸಮಾಜದ ಮುಖಂಡರಾದ ಮಲ್ಲಾರಾವ ಘಾರಮಪಳ್ಳಿ, ರವಿ ಲಾತೂರಕರ್, ಶಾಮಸುಂದರ ಕುಲಕರ್ಣಿ, ವ್ಯಾಸರಾಜ ಸಂತೆಕೇಲೂರ ಸೇರಿದಂತೆ ಮಹಿಳಾ ಭಜನಾ ಮಂಡಳಿ ಸದಸ್ಯುರು, ಜಯತೀರ್ಥ ನಿಲಯಯದ ವಿದ್ಯಾರ್ಥಿಗಳು ಇದ್ದರು.