ಸಾರಾಂಶ
ಅಖಿಲ ಭಾರತ ಸಾಹಿತ್ಯ ಪರಿಷತ್ ಹೊರತಂದಿರುವ, ಗದುಗಿನ ಸದಾಶಿವ ಮಹಾರಾಜರ ಮಾರ್ಗದರ್ಶನದಲ್ಲಿನ ‘ವಚನ ದರ್ಶನ’ ಪುಸ್ತಕ ಬಿಡುಗಡೆಗೆ ಕಲಬುರಗಿಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಅಖಿಲ ಭಾರತ ಸಾಹಿತ್ಯ ಪರಿಷತ್ ಹೊರತಂದಿರುವ, ಗದುಗಿನ ಸದಾಶಿವ ಮಹಾರಾಜರ ಮಾರ್ಗದರ್ಶನದಲ್ಲಿನ ‘ವಚನ ದರ್ಶನ’ ಪುಸ್ತಕ ಬಿಡುಗಡೆಗೆ ಕಲಬುರಗಿಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.ಕಲಬುರಗಿಯ ಪ್ರಜ್ಞಾ ಪ್ರವಾಹ, ಶರಣಬಸವ ವಿಶ್ವವಿದ್ಯಾಲಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಘಟಕದ ಆಶ್ರಯದಲ್ಲಿ ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಶನಿವಾರ ರಾತ್ರಿ ‘ವಚನ ದರ್ಶನ’ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭ ಆರಂಭವಾಗುವ ವೇಳೆ ಸಭಾಂಗಣದೊಳಗೆ ನುಗ್ಗಲು ಯತ್ನಿಸಿ ಅಖಿಲ ಭರತ ಲಿಂಗಾಯತ ಮಹಾಸಭಾ, ಬಸವ ದಳ ಸಂಘಟನೆ ಹಾಗೂ ಪ್ರಗತಿಪರರಿಂದ ಮುಖಂಡರಿಂದ ಪ್ರತಿಭಟನೆ ಶುರುವಾಯ್ತು.ಇದು ಸಂಘ ಪರಿವಾರದ ಪ್ರೇರಿತ ವಿಶ್ವ ಗುರು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ, ಶರಣ ಚಳುವಳಿಯ ನಿಜ ಸ್ವರೂಪ ತಿರುಚಿರುವ ಕೃತಿ.
ಬಸವಣ್ಣವರ ಅವರ ತತ್ವ, ಚಿಂತನೆ ಚಳುವಳಿ, ಅಯೋಧ್ಯೆ ಪ್ರಕಾಶಿತ ಆರ್‌ಎಸ್‌ಎಸ್ ಪ್ರಕಟಿತ ‘ವಚನ ದರ್ಶನ’ ಕೃತಿ ತಿರುಚಿದೆ ಎಂದು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಬಸವಣ್ಣನವರ ಭಾವಚಿತ್ರ ಋಷಿ ಮುನಿಯಂತೆ ಮಾಡಿದ್ದು, ಕೊರಳಲ್ಲಿ ತುಳಸಿ ಮಾಲೆ ಹಾಕಿರುವುದು, ಬಿಲ್ಲು- ಬಾಣಗಳನ್ನು ತೋರಿಸಿರುವುದು ಬಸವಣ್ಣನವರಿಗೆ ಹಾಗೂ ಬಸವ ತತ್ವಕ್ಕೆ ಮಾಡಿದ ಅಪಚಾರ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಆರ್‌ಜಿ ಶೆಟಗಾರ, ಆರ್‌ಕೆ ಹುಡುಗಿ, ಶಾಂತಪ್ಪ ಪಾಟೀಲ, ಪ್ರಭು ಖಾನಾಪುರ, ಮೀನಾಕ್ಷಿ ಬಾಳಿ, ಸುನೀಲ ಮಾರುತಿ ಮಾನಪಡೆ, ರವೀಂದ್ರ ಶಬಾದಿ,ಲಕ್ಷ್ಮೀಕಾಂತ ಹುಬ್ಬಳ್ಳಿ, ಶರಣಗೌಡ ಪಾಟೀಲ, ಮಹಾಂತೇಶ್ ಕಲಬುರಗಿ, ಪ್ರಭುಲಿಂಗ ಮಾಹಗಾಂವಕರ್, ಲವಿತ್ರಾ ವಸ್ತ್ರದ ಸೇರಿದಂತೆ ಐವತ್ತಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ನಂತರವೇ ವಚನ ದರ್ಶನ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಬಿಜೆಪಿ ರಾಷ್ಟೀಯ ಸಂಘಟನಾ ಪ್ರ ಕಾರ್ಯದರ್ಶಿ ಬಿಎಲ್ ಸುತೋಷ್, ಸದಾಶಿವ ಸ್ವಾಮೀಜಿ ಸೇರಿದಂತೆ ಹಲವರು ಪ್ರಮುಖರು ಭಾಗಿಯಾಗಿದ್ದರು.