ಕಲಬುರಗಿ: ₹2.50 ಕೋಟಿ ಮೊತ್ತದ ಸ್ಕಾಲರ್‌ಶಿಪ್‌ ಘೋಷಣೆ

| Published : Jan 07 2024, 01:30 AM IST

ಸಾರಾಂಶ

ಮಾಂಟೆಸ್ಸೋಯಿರಿಂದ ಆರಂಭವಾಗಿ ಈಗ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ದೇಶದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸ್ಕಾಲರ್‌ಶಿಪ್‌ ರೂಪದಲ್ಲಿ ಮೆಗಾ ಆಫರ್‌ ಕೊಡುವುದರೊಂದಿಗೆ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಚಿ. ದೊಡ್ಡಪ್ಪ ಅಪ್ಪ ಸ್ಕಾಲರಶಿಪ್‌: ಫೆ.2ರಂದು ರಾಜ್ಯ, ಫೆ.ರಂದು ಸಿಬಿಎಸ್ಇ ಪಠ್ಯ ಪರೀಕ್ಷೆಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಐತಿಹಾಸಿಕ ದಾಖಲೆಗಳನ್ನು ಮಾಡುವ ಮೂಲಕ ಎಸ್ಬಿಆರ್‌ ಬ್ರ್ಯಾಂಡ್‌ ಎಂದೇ ಹೆಸರಾಗಿರುವ ಇಲ್ಲಿನ ಶರಣಬಸವೇಶ್ವರ ಪಬ್ಲಿಕ್‌ ರೆಸಿಡೆನ್ಸಿಯಲ್‌ ಕಾಲೇಜು ತನ್ನ ಪ್ರತಿಭಾವಂತ ಮಕ್ಕಳಿಗಾಗಿ 2024- 25ನೇ ಸಾಲಿನ ಪ್ರವೇಶಕ್ಕಾಗಿ ಶುಲ್ಕದಲ್ಲಿ ಹಲವು ವಿನಾಯ್ತಿಗಳೊಂದಿಗೆ ₹2.50 ಕೋಟಿ ಮೊತ್ತದ ಬೃಹತ್‌ ಸ್ಕಾಲರ್‌ಶಿಪ್‌ ಯೋಜನೆ ಘೋಷಿಸಿದೆ.

ಮಾಂಟೆಸ್ಸೋಯಿರಿಂದ ಆರಂಭವಾಗಿ ಈಗ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ದೇಶದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸ್ಕಾಲರ್‌ಶಿಪ್‌ ರೂಪದಲ್ಲಿ ಮೆಗಾ ಆಫರ್‌ ಕೊಡುವುದರೊಂದಿಗೆ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ಘೋಷಿಸಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದಶಿ ಬಸವರಾಜ ದೇಶಮುಖ, ಸಂಸ್ಥೆಯ ೯ನೇ ಮಹಾದಾಸೋಹ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಸ್ಕಾಲರ್‌ಶಿಪ್ ಹೆಸರಿನಲ್ಲಿ ೨.೫ ಕೋಟಿ ರು.ಗಳ ಸ್ಕಾಲರ್‌ಶಿಪ್ ನೀಡಲು ಮುಂದಾಗಿದೆ. ಇದಕ್ಕಾಗಿ ಫೆಬ್ರವರಿ ತಿಂಗಳಲ್ಲೇ 2 ಪ್ರತ್ಯೇಕ ಪರೀಕ್ಷೆಗಳನ್ನು (ರಾಜ್ಯ ಪಠ್ಯ- ಫೆ.2ರಂದು, ಸಿಬಿಎಸ್ಇ ಪಠ್ಯ- ಫೆ.4ರಂದು ಪರೀಕ್ಷೆ) ನಡೆಸಲಾಗುತ್ತಿದೆ, ಮಕ್ಕಳು ಇದರ ಲಾಭ ಪಡೆಯಲಿ ಎಂದರು.

ಸ್ಕಾಲರ್‌ಶಿಪ್‌ ಯೋಜನೆ ಸುತ್ತಮುತ್ತ:

೨೦೨೪-೨೫ನೇ ಸಾಲಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕೆ ಎಸ್.ಬಿ.ಆರ್. ಕಾಲೇಜಿನಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪ್ರತಿಭಾನಿವತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ೨.೫ ಕೋಟಿ ರು. ಮೌಲ್ಯದ ಚಿ.ದೊಡ್ಡಪ್ಪ ಅಪ್ಪ ಸ್ಕಾಲರ್‌ಶಿಪ್ ನೀಡಲಾಗುತ್ತದೆ.

ಪ್ರವೇಶ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗಳ ಆಧಾರದನ್ವಯ ಮೇಲೆ ತಿಳಿಸಿದ ಗರಿಷ್ಠ ೯೦ ರ‍್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್‌ನ್ನು ಪಡೆಯುತ್ತಾರೆ. ಇದೇರೀತಿ ಪಿಯುಸಿ ದ್ವೀತಿಯ ವರ್ಷದಲ್ಲಿಯೂ ಸಹ ಇಡಿ ಪಿಯುಸಿ ಪ್ರಥಮ ವರ್ಷದ ಎಲ್ಲ ಪರೀಕ್ಷೆಗಳ ಅಂಕಗಳ ಆಧಾರದನ್ವಯ ಅಗ್ರ ೯೦ ರ‍್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುವುದು.

ಪರೀಕ್ಷೆ ವಿವರ, ಪ್ರಶ್ನೆ ಪತ್ರಿಕೆ ವಿವರ ಹಾಗೂ ಪರೀಕ್ಷೆಯ ಅವಧಿ ಬಗ್ಗೆ ಮಾಹಿತಿ ನೀಡಿದ ಅವರು, ಫೆ.೪ರಂದು ಮಧ್ಯಾಹ್ನ ೧ರಿಂದ ೩ರ ವರೆಗೆ ಸಿಬಿಎಸ್‌ಇ-ಐಸಿಎಸ್‌ಇ ವಿದ್ಯಾರ್ಥಿಗಳಿಗೆ ಮತ್ತು ಸ್ಟೇಟ್ ಬೋರ್ಡ ವಿದ್ಯಾರ್ಥಿಗಳಿಗೆ ಫೆ.೧೧ರಂದು ಮ.೧ರಿಂದ ೩ರ ವರೆಗೆ ಪರೀಕ್ಷೆ ನಡೆಯಲಿವೆ.

ಈ ಪರೀಕ್ಷೆಯಲ್ಲಿ ಟಾಪ್‌ ಬರುವ 30 ಮಕ್ಕಳಿಗೆ ಶೇ.50 ಹಾಸ್ಟೆಲ್‌, ಕಾಲೇಜಿನ ಶುಲ್ಕದಲ್ಲಿ ವಿನಾಯ್ತಿ ಇರುತ್ತದೆ. ನಂತರದ ಟಾಪ್‌ 25 ಮಕ್ಕಳಿಗೆ ಕಾಲೇಜು, ಹಾಸ್ಟೆಲ್‌ನ ಶೇ.25 ಶುಲ್ಕ ವಿನಾಯ್ತಿ ಇರಲಿದೆ. 2 ಹಂತಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಿ 600 ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ.

ಎಸ್‌ಬಿಆರ್ ಬ್ರಾಂಡ್:

ಎಸ್‌ಬಿಆರ್ ಎಂದರೆ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಶಿಕ್ಷಣವೆಂದರೆ ಎಸ್‌ಬಿಆರ್ ಆಗಿದೆ. ಹೀಗಾಗಿ ಇದೊಂದು ರಾಜ್ಯದಲ್ಲಿ ಎಸ್‌ಬಿಆರ್ ಹೆಸರಿನ ಬ್ಯಾಂಡ್‌ ಬ್ಯಾಂಡ್ ಪರಿವರ್ತನೆಯಾಗಿದೆ. 60 ವರ್ಷಗಳ ಹಿಂದೆ ಶಾಲೆ ಆರಂಭಿಸಿರುವ ಡಾ. ಅಪ್ಪಾಜಿ ಅವರ ದೂರದೃಷ್ಟಿ ಇದಕ್ಕೆ ಕಾರಣವೆಂದು ಡಾಕ್ಷಾಯಿಣಿ ಅಪ್ಪಾ ಹೇಳಿದರು. ವಿದ್ಯಾಭಂಡಾರಿ ಡಾ.ಶರಣಬಸವಪ್ಪ ಅಪ್ಪ ಅವರು ಕ್ರೀಯಾಶೀಲ ಕಾರ್ಯಚಟುವಟಿಕೆಗಳೊಂದಿಗೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶಿಕ್ಷಣ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಮುಟ್ಟಿಸುವ ಮೂಲಕ ದೇಶವೆ ಕಲಬುರಗಿ ಕಡೆ ತಿರುಗಿ ನೋಡುವಂತೆ ಮಾಡಿದ್ದು ಕೂಡಾ ಇತಿಹಾಸವೆಂದು ಬಸವರಾಜ ದೇಶಮುಖ ಹೇಳಿದರು.

ಲಿಂ.ದೊಡ್ಡಪ್ಪ ಅಪ್ಪ ಅವರ ಕನಸು ಗ್ರಾಮೀಣ ಭಾಗದ ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಆ ಮೂಲಕ ಅವರು ತಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು, ಆ ಮೂಲಕ ದೇಶದ ಪ್ರಗತಿಗೆ ನಾಂದಿಯಾಗಬೇಕು ಎಂದು ಸ್ಥಾಪಿಸಿದ ಶರಣಬಸವೇಶ್ವರ ವಿದ್ಯಾ ಸಂಸ್ಥೆಯನ್ನು ಅಂದು ದೊಡ್ಡಪ್ಪ ಅಪ್ಪ ಅವರು, ಇಂದು ವಿದ್ಯಾಭಂಡಾರಿ ಡಾ.ಶರಣಬಸವಪ್ಪ ಅಪ್ಪ ಅವರು ಮುನ್ನಡೆಸುವ ಮೂಲಕ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.

ಡಾ.ಅಪ್ಪ ಅವರೊಂದಿಗೆ ಪ್ರಾರ್ಚಾರಾದ ದೇವರಕಲ್ಲ ಮತ್ತು ಶ್ರೀಶೈಲ ಹೊಗಾಡೆ, ಚಂದ್ರಕಾoತ ಪಾಟೀಲ್ ಹೀಗೆ ಅಪಾರ ಸಿಬ್ಬಂದಿ ಬಳಗದ ಸಹಕಾರದೊಂದಿಗೆ ಇಂದು ಆಲದ ಮರವಾಗಿ ಈ ಸಂಸ್ಥೆ ಬೆಳೆದು ನಿಂತಿದೆ. ಜಗತ್ತಿನ ಹೊರ ದೇಶಗಳಲ್ಲಿ ಇರುವ ಸುಮಾರು ೫೦ ಸಾವಿರ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಓದಿದವರಾಗಿದ್ದಾರೆ ಎಂದು ಡಾ.ದಾಕ್ಷಾಯಣಿ ಎಸ್. ಅಪ್ಪ ಅವರು ಹೆಮ್ಮೆಯಿಂದ ಹೇಳಿದರು.

೪೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯರಾಗಿ, ೫೫೦೦ ಮಕ್ಕಳು ಎಂಜಿನಿಯರ್‌ಗಳಾಗಿ, ಅನೇಕ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್, ಆರ್‌ಬಿಎಲ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ೨೦೨೩ರ ಸಾಲಿನಲ್ಲಿ ೪೭೦ ವಿದ್ಯಾರ್ಥಿಗಳು ಮೆಡಿಕಲ್ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆಂಬ ಮಾಹಿತಿಯನ್ನು ಸಂಸ್ಥೆ ಕಾರ್ಯದರ್ಶಿ ಬಸವರಾಜ ದೇಶಮುಖ ಹಂಚಿಕೊoಡರು. ಚಿ.ದೊಡ್ಡಪ್ಪ ಅಪ್ಪ, ಪ್ರಾಚಾರ್ಯ ಶ್ರೀಶೈಲ್ ಹೊಗಾಡೆ, ಚಂದ್ರಕಾoತ ಪಾಟೀಲ್ ಇತರರು.